ನವದೆಹಲಿ

ವಿಧವೆಯರಿಗೆ ಕಾರ್ಯಕ್ರಮ: ಕರ್ನಾಟಕಕ್ಕೆ ‘ಸುಪ‍್ರೀಂ’ ತರಾಟೆ

ವಿಧವೆಯರ ಕಲ್ಯಾಣ ಕಾರ್ಯಕ್ರಮಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾದ ಕರ್ನಾಟಕ ಮತ್ತು ಇತರ 11 ರಾಜ್ಯಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ವಿಧವೆಯರ ಕಲ್ಯಾಣ ಕಾರ್ಯಕ್ರಮಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾದ ಕರ್ನಾಟಕ ಮತ್ತು ಇತರ 11 ರಾಜ್ಯಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

‘ಲಿಂಗ ಸಮಾನತೆಯ ಬಗ್ಗೆ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮಹಿಳೆಯರ ಅಭಿವೃದ್ಧಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳಿಗೆ ಐದು ನಿಮಿಷ ಸಮಯ ಇಲ್ಲ. ಇಂತಹ ಮನೋಭಾವ ದೇಶದಲ್ಲಿ ಮಹಿಳೆಯರ ಹಕ್ಕುಗಳನ್ನು ಮುಂದಕ್ಕೆ ಒಯ್ಯುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠ ಹೇಳಿದೆ.

ಈ ರಾಜ್ಯಗಳನ್ನು ಪೀಠವು ತರಾಟೆಗೆ ತೆಗೆದುಕೊಂಡದ್ದು ಮಾತ್ರವಲ್ಲದೆ, ತಲಾ ₹2 ಲಕ್ಷ ದಂಡವನ್ನೂ ವಿಧಿಸಿದೆ. ಕೇಳಿದ ಪ್ರಶ್ನೆಗಳಿಗೆ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡಲು ವಿಫಲವಾದರೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪೀಠ ನೀಡಿದೆ.

ಆಶ್ರಯಧಾಮಗಳಲ್ಲಿ ವಾಸಿಸುತ್ತಿರುವ ವಿಧವೆಯರಿಗೆ ನ್ಯಾಯ ಒದಗಿಸುವುದಕ್ಕಾಗಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಸಿದ್ಧಪಡಿಸಿರುವ ಯೋಜನೆಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

'ಸುಪ್ರೀಂ' ನ್ಯಾಯಮೂರ್ತಿಗಳ ಹುದ್ದೆ
ಮಲ್ಹೋತ್ರ, ಜೋಸೆಫ್‌ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ ಇದೇ 11ರಂದು ಈ ಇಬ್ಬರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

23 Jan, 2018
ಶಂಕಿತ ಐಎಂ ಉಗ್ರ ಖುರೇಷಿ ಬಂಧನ

ಗುಜರಾತ್ ಸರಣಿ ಸ್ಫೋಟ ಪ್ರಕರಣ
ಶಂಕಿತ ಐಎಂ ಉಗ್ರ ಖುರೇಷಿ ಬಂಧನ

23 Jan, 2018
ಹೈಕೋರ್ಟ್‌ನಿಂದ ಎಎಪಿ ಅರ್ಜಿ ವಾಪಸ್‌

ಲಾಭದಾಯಕ ಹುದ್ದೆಯ ನಿಯಮ ಉಲ್ಲಂಘನೆ
ಹೈಕೋರ್ಟ್‌ನಿಂದ ಎಎಪಿ ಅರ್ಜಿ ವಾಪಸ್‌

23 Jan, 2018
ಕೇಂದ್ರದ ಟೀಕೆ ಕೈಬಿಟ್ಟ ಕೇರಳ ರಾಜ್ಯಪಾಲ!

ಸದನ ಉದ್ದೇಶಿಸಿ ಲಿಖಿತ ಭಾಷಣ
ಕೇಂದ್ರದ ಟೀಕೆ ಕೈಬಿಟ್ಟ ಕೇರಳ ರಾಜ್ಯಪಾಲ!

23 Jan, 2018
‘ದೇಹದ ಗಾಯ ವಾಸಿಯಾದರೂ, ಮನಸಿನ ಗಾಯ ವಾಸಿಯಾಗದು’

ಪಾಕ್ ಶೆಲ್ ದಾಳಿಗೆ ನಲುಗಿದ ಗಡಿ ಭಾಗದ ಗ್ರಾಮಸ್ಥರು
‘ದೇಹದ ಗಾಯ ವಾಸಿಯಾದರೂ, ಮನಸಿನ ಗಾಯ ವಾಸಿಯಾಗದು’

23 Jan, 2018