ಜಾತ್ಯತೀತ ವಾತಾವರಣದಲ್ಲಿ ಮಾತ್ರ ಸಶಸ್ತ್ರ ಪಡೆಗಳು ಸಶಕ್ತ

ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ: ರಾವತ್‌ ಮನವಿ

‘ಸೇನೆಯನ್ನು ಸದಾ ರಾಜಕಾರಣದಿಂದ ದೂರ ಇಡಬೇಕು. ಆದರೆ, ಈಚೆಗೆ ಅನಗತ್ಯವಾಗಿ ಸೇನೆಯನ್ನು ರಾಜಕಾರಣಕ್ಕೆ ಎಳೆದು ತರಲಾಗುತ್ತಿದೆ’ ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ: ರಾವತ್‌ ಮನವಿ

ನವದೆಹಲಿ: ‘ಸೇನೆಯನ್ನು ಸದಾ ರಾಜಕಾರಣದಿಂದ ದೂರ ಇಡಬೇಕು. ಆದರೆ, ಈಚೆಗೆ ಅನಗತ್ಯವಾಗಿ ಸೇನೆಯನ್ನು ರಾಜಕಾರಣಕ್ಕೆ ಎಳೆದು ತರಲಾಗುತ್ತಿದೆ’ ಎಂದು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ಸದಾ ಕ್ರಿಯಾಶೀಲವಾಗಿರಲು ಯಾವುದೇ ಕಾರಣಕ್ಕೂ ಸೇನೆಯಲ್ಲಿ ರಾಜಕಾರಣ ನುಸುಳಬಾರದು. ಸಶಸ್ತ್ರ
ಪಡೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ವಿಷಾದ ನೀಯ ಎಂದರೆ ಇತ್ತೀಚಿನ ದಿನಗಳಲ್ಲಿ ಸೇನೆಯ ವಿಷಯಗಳಲ್ಲಿ ರಾಜಕೀಯ
ಬೆರೆಸುವ ಪ್ರಯತ್ನ ಕಂಡು ಬರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದ್ದು, ಜಾತ್ಯತೀತ ವಾತಾವರಣದಲ್ಲಿ ಸೇನೆ ಕಾರ್ಯನಿರ್ವಹಿಸುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸೇನೆಯಲ್ಲಿ ರಾಜಕಾರಣ ಮತ್ತು ಮಹಿಳೆಯರ ಬಗ್ಗೆ ಚರ್ಚಿಸಬಾರದು ಎಂಬ ಅಲಿಖಿತ ನಿಯಮ ಈ ಹಿಂದೆ ಜಾರಿಯಲ್ಲಿತ್ತು. ಅದನ್ನು ಅಷ್ಟೇ ಕಟ್ಟು ನಿಟ್ಟಾಗಿ ‍ಪಾಲಿಸಲಾಗುತಿತ್ತು. ಆದರೆ, ಈಗ ಅದಕ್ಕೆ ತದ್ವಿರುದ್ಧ ವಾತಾವರಣ ಇದೆ. ಅದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಸಶಸ್ತ್ರ ಪಡೆ, ಸೇನೆ ಮತ್ತು ಯೋಧರಿಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದಾಗ ಅಲ್ಲಿ ರಾಜಕೀಯ ನುಸುಳುವುದು ಇತ್ತೀಚಿನ ದಿನಮಾನಗಳಲ್ಲಿ ಸಾಮಾನ್ಯವಾಗಿದೆ. ಕನಿಷ್ಠ ಪಕ್ಷ ಸೇನೆಗೆ ಸಂಬಂಧಿಸಿದ ವಿಷಯಗಳಲ್ಲದಾರೂ ರಾಜಕೀಯ ನುಸಳದಂತೆ ತಡೆಯಬೇಕಾಗಿದೆ ಎಂದು ರಾವತ್‌ ಮನವಿ ಮಾಡಿದರು.

ದೇಶದ ರಾಜಕೀಯ ವ್ಯವಹಾರಗಳಿಂದ ಸೇನೆಯನ್ನು ದೂರವಿಟ್ಟಾಗ ಇಲ್ಲವೇ ಸೇನೆಯೇ ದೂರವಿದ್ದಾಗ ಮಾತ್ರ ಅದು ಅತ್ಯಂತ ಸಮರ್ಥವಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮಾಯಾ ಕೊಡ್ನಾನಿ ಖುಲಾಸೆ

ನರೋಡಾ ಪಾಟಿಯಾ ಗಲಭೆ ಪ್ರಕರಣ
ಮಾಯಾ ಕೊಡ್ನಾನಿ ಖುಲಾಸೆ

21 Apr, 2018
ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

ಉತ್ತರ ಪ್ರದೇಶ, ಛತ್ತೀಸಗಡದಲ್ಲಿ ಘಟನೆ
ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

21 Apr, 2018
ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

ಕಠುವಾ ಅತ್ಯಾಚಾರ ಖಂಡಿಸಿ ರಚಿಸಿದ ಕಲಾಕೃತಿ ಕಾರಣ
ಚಿತ್ರ ಕಲಾವಿದೆ ಮನೆ ಮೇಲೆ ಕಲ್ಲು ತೂರಾಟ, ಜೀಪ್‌ ಜಖಂ

21 Apr, 2018
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

ಭೂಗತ ಪಾತಕಿ ತಾಯಿ, ಸಹೋದರಿ ಅರ್ಜಿ ವಜಾ
ದಾವೂದ್ ಕುಟುಂಬದ ಆಸ್ತಿ ಮುಟ್ಟುಗೋಲು

21 Apr, 2018
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

ನಿಲುವಳಿ ಸೂಚನೆ
ಸಿಜೆಐ ವಿರುದ್ಧ ವಾಗ್ದಂಡನೆ ನೋಟಿಸ್‌

21 Apr, 2018