ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಟ್ವೀಟ್: ಮೋದಿಗೆ ಎರಡನೆ ಸ್ಥಾನ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 2017ರಲ್ಲಿ ಅತಿ ಹೆಚ್ಚು ಟ್ವೀಟ್ ಮಾಡಿದ ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೆ ಸ್ಥಾನದಲ್ಲಿ ಇದ್ದಾರೆ ಎಂದು ಟ್ವಿಟ್ಟರ್ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊದಲ ಸ್ಥಾನದಲ್ಲಿದ್ದಾರೆ. ಟ್ವಿಟರ್‌ನಲ್ಲಿ ಟ್ರಂಪ್‌ಗೆ 4.4 ಕೋಟಿ ಜನ ಅನುಯಾಯಿಗಳಿದ್ದರೆ, ಮೋದಿ ಅವರಿಗೆ 3.7 ಕೋಟಿ ಅನುಯಾಯಿಗಳಿದ್ದಾರೆ.

ಅತಿ ಹೆಚ್ಚು ಲೈಕ್‌ ಪಡೆದ ಮೊದಲ ಮೂರು ಟ್ವೀಟ್‌ಗಳಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಎರಡು ಟ್ವೀಟ್‌ಗಳು ಸ್ಥಾನ ಪಡೆದಿವೆ.

‘ಯಾವುದೇ ವ್ಯಕ್ತಿ ಹುಟ್ಟುತ್ತಲೇ ಮತ್ತೊಬ್ಬ ವ್ಯಕ್ತಿಯ ಬಣ್ಣ, ಹಿನ್ನೆಲೆ ಅಥವಾ ಧರ್ಮವನ್ನು ದ್ವೇಷಿಸುವುದಿಲ್ಲ...’ ಎನ್ನುವ ಒಬಾಮ ಅವರ ಟ್ವೀಟ್ ಈ ವರ್ಷ ಅತಿ ಹೆಚ್ಚು ರಿಟ್ವೀಟ್‌ಗೆ ಒಳಗಾದ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ.

ಅತಿ ಹೆಚ್ಚು ಟ್ವೀಟ್ ಮಾಡಿದ ಮೊದಲ ಹತ್ತು ಜಾಗತಿಕ ನಾಯಕರ ಪಟ್ಟಿಯಲ್ಲಿ ವೆನೆಜುವೆಲಾದ ನಿಕೊಲಸ್‌ ಮಡುರೊ, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್, ಫ್ಯಾನ್ಸ್‌ ಅಧ್ಯಕ್ಷ ಎಮ್ಯಾನುಯಲ್, ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೊ, ಅರ್ಜೆಂಟೀನಾದ ಮೊರಿಸಿಯೊ ಮ್ಯಾಕ್ರಿ, ಬ್ರಿಟನ್‌ನ ತೆರೆಸಾ ಮೇ, ಕೊಲಂಬಿಯಾದ ಅಧ್ಯಕ್ಷ ಉವಾನ್‌ ಮಾನುವೆಲ್‌ ಸ್ಯಾಂಟೊಸ್, ಇಂಡೊನೇಷಿಯಾದ ಜೊಕೊ ವಿಡೊಡೊ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT