ಶಾಸಕರ ತೇಜೋವಧೆ ಮಾಡುವ ಲೇಖನ ಆರೋಪ

ಪತ್ರಕರ್ತರಿಗೆ ಜೈಲು ಶಿಕ್ಷೆ: ಆದೇಶ ಜಾರಿಗೆ ಹೈಕೋರ್ಟ್‌ ತಡೆ

‘ಶಾಸಕರ ತೇಜೋವಧೆ ಮಾಡುವ ಲೇಖನ ಪ್ರಕಟಿಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ರವಿ ಬೆಳಗೆರೆ ಬಿನ್‌ ಲಕ್ಷ್ಮಣ ರಾವ್‌ ಹಾಗೂ ಅನಿಲ್ ರಾಜ್‌ಗೆ (ಪ್ರಕಾಶ್‌) ಹಕ್ಕು ಬಾಧ್ಯತಾ ಸಮಿತಿ ವಿಧಿಸಿರುವ ಜೈಲು ಶಿಕ್ಷೆ...

ಬೆಂಗಳೂರು: ‘ಶಾಸಕರ ತೇಜೋವಧೆ ಮಾಡುವ ಲೇಖನ ಪ್ರಕಟಿಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ರವಿ ಬೆಳಗೆರೆ ಬಿನ್‌ ಲಕ್ಷ್ಮಣ ರಾವ್‌ ಹಾಗೂ ಅನಿಲ್ ರಾಜ್‌ಗೆ (ಪ್ರಕಾಶ್‌) ಹಕ್ಕು ಬಾಧ್ಯತಾ ಸಮಿತಿ ವಿಧಿಸಿರುವ ಜೈಲು ಶಿಕ್ಷೆ ಹಾಗೂ ದಂಡದ ಆದೇಶ ಜಾರಿಗೆ ಹೈಕೋರ್ಟ್‌ ನಾಲ್ಕು ವಾರಗಳ ಮಧ್ಯಂತರ ತಡೆ ನೀಡಿದೆ. ಈ ಕುರಿತು ರವಿ ಬೆಳಗೆರೆ, ಅನಿಲ್ ರಾಜ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಶಾಸಕರಾದ ಕೆ.ಬಿ.ಕೋಳಿವಾಡ ಮತ್ತು ಎಸ್‌.ಆರ್‌.ವಿಶ್ವನಾಥ್ ಪರ ಹಾಜರಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ವಾದ ಮಂಡಿಸಲು ತಯಾರಿ
ದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಂದು ಸಮಯವಿಲ್ಲ, ಮುಂದಿನ ಆದೇಶದವರೆಗೆ ತಡೆಯಾಜ್ಞೆ ಇರುತ್ತದೆ’ ಎಂದು ನಿರ್ದೇಶಿಸಿತು. ಅರ್ಜಿಯಲ್ಲಿ ವಿಧಾನಸಭೆ ಸ್ಪೀಕರ್, ದೂರುದಾರ ಕೆ.ಬಿ.ಕೋಳಿವಾಡ, ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಮತ್ತು ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಗುತ್ತಿಗೆದಾರರೇ ನೀತಿ ನಿರ್ಣಾಯಕರು: ಉಲ್ಲಾಸ್

ತಾಜ್‌ಮಹಲ್‌ ಕೆಡವಿದರೆ ಕಟ್ಟಬಹುದು
ಗುತ್ತಿಗೆದಾರರೇ ನೀತಿ ನಿರ್ಣಾಯಕರು: ಉಲ್ಲಾಸ್

21 Jan, 2018
 ‘ನಗರ ಕೋಟೆ’ ಸಮೀಪ ಪತ್ತೆಯಾಗಿದ್ದ ಕಬ್ಬಿಣದ ಸಾಮಗ್ರಿಗಳು ಟಿಪ್ಪು ಕಾಲದ ರಾಕೆಟ್‌ಗಳು!

ಸಂಶೋಧನೆ
‘ನಗರ ಕೋಟೆ’ ಸಮೀಪ ಪತ್ತೆಯಾಗಿದ್ದ ಕಬ್ಬಿಣದ ಸಾಮಗ್ರಿಗಳು ಟಿಪ್ಪು ಕಾಲದ ರಾಕೆಟ್‌ಗಳು!

21 Jan, 2018
11 ತಾಸು ಕಾರ್ಯಾಚರಣೆ ಯಶಸ್ವಿ; ಚಿರತೆ ಸೆರೆ

ತುಮಕೂರು ನಗರದ ಮನೆಯೊಳಗೆ ನುಗ್ಗಿದ್ದ ಚಿರತೆ
11 ತಾಸು ಕಾರ್ಯಾಚರಣೆ ಯಶಸ್ವಿ; ಚಿರತೆ ಸೆರೆ

21 Jan, 2018

ದೇಸಿ ಗೋತಳಿ ರಕ್ಷಿಸುವಂತೆ ಕೋರಿಕೆ
ಗೋಹತ್ಯೆ ನಿಷೇಧಕ್ಕೆ ರಕ್ತದಲ್ಲಿ ಪತ್ರ

ಗೋಹತ್ಯೆ ನಿಷೇಧಿಸಬೇಕು ಹಾಗೂ ದೇಸಿ ಗೋತಳಿ ರಕ್ಷಿಸುವಂತೆ ಕೋರಿ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಐವರು ಸ್ವಾಮೀಜಿಗಳು ಶನಿವಾರ ರಕ್ತದಲ್ಲಿ ಪತ್ರ ಬರೆದರು.

21 Jan, 2018
ಮಹಿಳಾ ವಿ.ವಿ: ಇಬ್ಬರಿಗೆ ಗೌರವ ಡಾಕ್ಟರೇಟ್

ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ
ಮಹಿಳಾ ವಿ.ವಿ: ಇಬ್ಬರಿಗೆ ಗೌರವ ಡಾಕ್ಟರೇಟ್

21 Jan, 2018