ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಿ ಬೇಡ, ಪಾದಚಾರಿ ಮಾರ್ಗ ಬೇಕು’

Last Updated 6 ಡಿಸೆಂಬರ್ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಿ ಬೇಡ, ನಮಗೆ ಪಾದಚಾರಿ ಮಾರ್ಗ ಬೇಕು...’ ಸಂಜಯನಗರ ವಾರ್ಡ್‌ ನಿವಾಸಿಗಳ ಬೇಡಿಕೆ ಇದು.

ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ’ಸಿಟಿಜನ್ಸ್‌ ಫಾರ್‌ ಸಸ್ಟೈನೆಬಿಲಿಟಿ’ ಸಂಘಟನೆಯ ನೇತೃತ್ವದಲ್ಲಿ ಇದೇ 10ರಂದು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

‘ಸಂಜಯನಗರದ ಮುಖ್ಯರಸ್ತೆಯುದ್ದಕ್ಕೂ ಸಮರ್ಪಕವಾದ ಪಾದಚಾರಿ ಮಾರ್ಗವಿಲ್ಲ. ಹಿರಿಯ ನಾಗರಿಕರು ಹಾಗೂ ಶಾಲೆಗೆ ಹೋಗುವ ಮಕ್ಕಳು ಇದರಿಂದಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಾದಚಾರಿ ಮಾರ್ಗ ನಿರ್ಮಿಸುವಂತೆ ಒತ್ತಾಯಿಸಿ ರಾಧಾಕೃಷ್ಣ ದೇವಸ್ಥಾನ ಬಳಿಯಿಂದ ಬೆಳಿಗ್ಗೆ 9.30ರಿಂದ ಮಾನವ ಸರಪಳಿ ರಚಿಸಲಿದ್ದೇವೆ’ ಎಂದು ಸಂಘಟನೆಯ ಸಂಸ್ಥಾಪಕ ಸದಸ್ಯ ಸತ್ಯಶಂಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳು ಶಾಲೆಗೆ ನಡೆದು ಹೋಗುವುದನ್ನು ಉತ್ತೇಜಿಸಲು ನಾವು ‘ಶಾಲೆಯ ಕಡೆಗೆ ನಡಿಗೆ’ ಎಂಬ ಕಾರ್ಯಕ್ರಮ ಆರಂಭಿಸಿದ್ದೆವು.
ಇದಕ್ಕೆ ವಿದ್ಯಾರ್ಥಿಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ, ಸುರಕ್ಷಿತ ಪಾದಚಾರಿ ಮಾರ್ಗ ಇಲ್ಲದ ಕಾರಣ ವಿದ್ಯಾರ್ಥಿಗಳು ಆತಂಕದಿಂದಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ವಿವರಿಸಿದರು.

‘ಇಲ್ಲಿನ ಬಳ್ಳಾರಿ ರಸ್ತೆಯಿಂದ ಆರಂಭವಾಗಿ ಹೊರವರ್ತುಲ ರಸ್ತೆವರೆಗೆ ಸುಸಜ್ಜಿತ ಪಾದಚಾರಿ ಮಾರ್ಗವನ್ನೊಳಗೊಂಡ ರಸ್ತೆ ನಿರ್ಮಿಸಲು ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ಎರಡು ವರ್ಷಗಳ ಹಿಂದೆಯೇ ತಾಂತ್ರಿಕ ವಿನ್ಯಾಸ ರೂಪಿಸಿದೆ. ಬೀದಿ ವ್ಯಾಪಾರಿಗಳಿಗೆ ಹಾಗೂ ಬಸ್‌ ಬೇಗಳಿಗೂ ಈ ವಿನ್ಯಾಸದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. 3 ಕಿ.ಮೀ ಉದ್ದದ ಈ ರಸ್ತೆಯಲ್ಲಿ ಸುಮಾರು 300 ಮೀ ಉದ್ದಕ್ಕೆ ಮಾತ್ರ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ನಂತರ ಕಾಮಗಾರಿ ಮುಂದುವರಿದಿಲ್ಲ’ ಎಂದು ಅವರು ದೂರಿದರು.

‘ಪಾದಚಾರಿ ಮಾರ್ಗದ ಕಾಮಗಾರಿ ಮುಂದುವರಿಸುವುದಕ್ಕೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಡ್ಡಿಪಡಿಸುತ್ತಿವೆ. ರಸ್ತೆಯನ್ನು ವಿಸ್ತರಿಸಿ ವಾಹನ
ನಿಲುಗಡೆಗೆ ಹೆಚ್ಚುವರಿ ಸ್ಥಳಾವಕಾಶ ನೀಡಬೇಕು ಎಂಬುದು ಅವರ ಬೇಡಿಕೆ’ ಎಂದು ಅವರು ತಿಳಿಸಿದರು.

ಎಂಟು ವರ್ಷದ ಮಕ್ಕಳಿಂದ ಹಿಡಿದು 80 ವರ್ಷದ ವೃದ್ಧರೂ ಆತಂಕಪಡದೇ ನಡೆದು ಹೋಗುವಂತಹ ಪಾದಚಾರಿ ಮಾರ್ಗ ನಮಗೆ ಬೇಕು</p>
-ಸತ್ಯಶಂಕರ, ಸಿಟಿಜನ್ಸ್‌ ಫಾರ್‌ ಸಸ್ಟೈನೆಬಿಲಿಟಿ ಸಂಘಟನೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT