ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿಕೆ

‘ಬಿಜೆಪಿ ಸೋಲಿಸುವುದು ನಮ್ಮ ಗುರಿಯಾಗಬೇಕು’

‘ಬಿಜೆಪಿಯನ್ನು ಸೋಲಿಸುವುದು ನಮ್ಮ ನೈಜ ಗುರಿಯಾಗಿರಬೇಕು. ಏಕೆಂದರೆ, ಅವರು ಹೆಚ್ಚಾಗಿ ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಬರುತ್ತಾರೆ’ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅವರು ಹೇಳಿದರು.

ಜಿ.ಕೆ.ಗೋವಿಂದರಾವ್ ಅವರು ಅಂಬೇಡ್ಕರ್ ಹಾಗೂ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಂತರಾಜು ಹಾಗೂ ರಾಜ್ಯ ಸಮಿತಿ ಸದಸ್ಯರು ಇಂದಿರಾ ಕೃಷ್ಣಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬಿಜೆಪಿಯನ್ನು ಸೋಲಿಸುವುದು ನಮ್ಮ ನೈಜ ಗುರಿಯಾಗಿರಬೇಕು. ಏಕೆಂದರೆ, ಅವರು ಹೆಚ್ಚಾಗಿ ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಬರುತ್ತಾರೆ’ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅವರು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಂಬೇಡ್ಕರ್ ಅವರ 61ನೇ  ಪರಿನಿರ್ವಾಣ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿ
ಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ನಾವೂ ಹಿಂದುತ್ವದ ಪರವಾಗಿದ್ದೇವೆ. ಎಲ್ಲ ಧರ್ಮಗಳನ್ನು ಒಗ್ಗೂಡಿಸುವ ಹಿಂದುತ್ವಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವವೇ ನಮ್ಮ ಧರ್ಮ. ಸಂವಿಧಾನವೇ ನಮ್ಮ ಭಗವದ್ಗೀತೆ’ ಎಂದು ಪ್ರತಿಪಾದಿಸಿದರು.

‘ನಮ್ಮ ಪಕ್ಕದಲ್ಲಿ ಬೇರೆ ಧರ್ಮದ ಜನರಿದ್ದಾಗ ‘ನಾವೆಲ್ಲ ಹಿಂದೂ ನಾವೆಲ್ಲ ಒಂದೇ’ ಎಂಬ ಘೋಷವಾಕ್ಯ ಮೊಳಗುತ್ತದೆ. ಅವರು ಹೋದ ಬಳಿಕ ‘ನಾನು ಬ್ರಾಹ್ಮಣ, ನೀನು ದಲಿತ’ ಎಂಬ ಜಾತಿ ತಾರತಮ್ಯ ಪ್ರವೇಶವಾಗುತ್ತದೆ. ದೇಶದ ಪಕ್ಕದಲ್ಲಿ ಪಾಕಿಸ್ತಾನವಿಲ್ಲದಿದ್ದರೆ ರಾಷ್ಟ್ರಭಕ್ತಿಯೂ ಇರುತ್ತಿರಲಿಲ್ಲ. ಹೀಗಾಗಿ, ಮೊದಲು ಈ ಜಾತಿ ವ್ಯವಸ್ಥೆ ತೊಲಗಬೇಕು. ಆಗ ಸಮ ಸಮಾಜದ ಕನಸು ನನಸಾಗುತ್ತದೆ’ ಎಂದರು.

ದೇಶದಲ್ಲಿರುವ ಮುಸ್ಲಿಮರು ‘ಏಕತೆಯ ಭಾರತ’ದ ಪರವಾಗಿದ್ದಾರೆ. ಆದರೆ, ಅವರು ಇಂದು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ಅವರ ಆತ್ಮವಿಶ್ವಾಸ ವೃದ್ಧಿಸಲು ಎಲ್ಲ ಧರ್ಮಗಳ ಜನರು ಮುಂದಾಗಬೇಕು ಎಂದು ಹೇಳಿದರು.

ಅಸ್ಪೃಶ್ಯತೆ ಹುಟ್ಟಿರುವುದೆ ಜಾತಿಯಿಂದ: ‘ಧರ್ಮ ಸಂಸತ್‌ನಲ್ಲಿ ‘ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಗೆ ಸಂಬಂಧವಿಲ್ಲ’ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಇದು ಹೇಗೆ ಸಂಬಂಧವಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ‘ಅಸ್ಪೃಶ್ಯತೆ ಹುಟ್ಟಿರುವುದೇ ಜಾತಿಯಿಂದ’ ಎಂದು ನಾವು ತಿಳಿದಿದ್ದೇವೆ. ಇಂಥ ನಿರ್ಣಯಗಳ ಮೂಲಕ ಸಂವಿಧಾನವನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋ
ಗದ ಅಧ್ಯಕ್ಷ ಕಾಂತರಾಜು ದೂರಿದರು.

ಸಂವಿಧಾನ ಛಿದ್ರಗೊಳಿಸುವ ಹುನ್ನಾರ: ‘ಧರ್ಮ ಸಂಸತ್‌ ಹೆಸರಿನಲ್ಲಿ ಮನುವಾದಿಗಳು ಹಿಂಬಾಗಿಲ ಮೂಲಕ ಸಂವಿಧಾನದ ಕೋಟೆ ಪ್ರವೇಶಿಸಿ ಅದನ್ನು ಛಿದ್ರಗೊಳಿಸುವ ಹುನ್ನಾರ ನಡೆಸಿದ್ದಾರೆ. ಕೆಲವರು ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಯೇ ತೀರುತ್ತೇವೆ’ ಎಂದು ಹೇಳುತ್ತಿದ್ದಾರೆ. ನಮ್ಮ ರಾಮನಿಗೆ (ಸಾಮಾನ್ಯ ವ್ಯಕ್ತಿಗೆ) ವಾಸಿಸಲು ಸ್ವಂತ ಮನೆ ಇದಿಯೋ ಇಲ್ಲವೊ ಎಂಬ ಚಿಂತೆ ಅವರಿಗಿಲ್ಲ. ರಾಮನಿಗೆ ಗುಡಿ ಕಟ್ಟುವುದೆ ಅವರ ಧ್ಯೇಯವಾಗಿದೆ’ ಎಂದು ಲೇಖಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಟೀಕಿಸಿದರು.

‘ಸಮಾಜದ ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ. ಅಂಥ ಸಂವಿಧಾನವನ್ನು ಒಪ್ಪಿಕೊಳ್ಳದ ಮನಸ್ಥಿತಿ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ’ ಎಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು

ನಮ್ಮ ಮೆಟ್ರೊ: ಫಲ ನೀಡದ ಸಂಧಾನ
ಮುಷ್ಕರ ನಡೆಸಲು ನಿರ್ಧರಿಸಿದ ನೌಕರರು

ಮುಷ್ಕರ ನಡೆಸಲು ಮುಂದಾಗಿದ್ದ ನೌಕರರನ್ನು ಸಮಾಧಾನ ಪಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ನಡೆಸಿದ ಸಂಧಾನ ಫಲ ನೀಡಿಲ್ಲ. ಬೇಡಿಕೆ ಈಡೇರಿಸಲು ಆಡಳಿತ...

24 Apr, 2018
ರಾಯಧನ, ಕಾಗದದ ಮೇಲಿನ ಜಿಎಸ್‌ಟಿ ಕೇಂದ್ರ ರದ್ದುಪಡಿಸಲಿ

ವಿಶ್ವ ಪುಸ್ತಕ ದಿನಾಚರಣೆಯಲ್ಲಿ ಕವಿ ಡಾ.ಸಿದ್ಧಲಿಂಗಯ್ಯ ಒತ್ತಾಯ
ರಾಯಧನ, ಕಾಗದದ ಮೇಲಿನ ಜಿಎಸ್‌ಟಿ ಕೇಂದ್ರ ರದ್ದುಪಡಿಸಲಿ

24 Apr, 2018

ಬೆಂಗಳೂರು
ನೌಕರಿ ಕೊಡಿಸುವುದಾಗಿ ₹29.20 ಲಕ್ಷ ವಂಚನೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ₹29.20 ಲಕ್ಷ ಪಡೆದುಕೊಂಡು ವಂಚಿಸಿದ್ದ ಆರೋಪದಡಿ ವಿಜಯನಗರದ ನಿವಾಸಿ ಎನ್‌.ಆರ್‌. ಶ್ರೀನಿವಾಸ್‌ ಗೌಡ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌...

24 Apr, 2018

ಬೆಂಗಳೂರು
ರಾಷ್ಟ್ರೋತ್ಥಾನ ಮುದ್ರಣಾಲಯದ ವಿರುದ್ಧ ಎಫ್‌ಐಆರ್‌ ದಾಖಲು

ಹಿಂಸೆಗೆ ಪ್ರಚೋದನೆ ನೀಡುವ ಕರಪತ್ರ ಮುದ್ರಣ ಮಾಡಿರುವ ಆರೋಪದಡಿ ರಾಷ್ಟ್ರೋತ್ಥಾನ ಮುದ್ರಣಾಲಯದ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

24 Apr, 2018

ಬೆಂಗಳೂರು
29ಕ್ಕೆ ಸೃಷ್ಟಿ ವಿಶ್ವ ಸುವರ್ಣ ಉತ್ಸವ

ಸೃಷ್ಟಿ ನೃತ್ಯ ಸಂಸ್ಥೆಗೆ 50 ವರ್ಷವಾದ ಹಾಗೂ ಅದರ ನಿರ್ದೇಶಕರಾದ ಎ.ವಿ. ಸತ್ಯನಾರಾಯಣ ಅವರಿಗೆ 70 ವರ್ಷವಾದ ಸ್ಮರಾರ್ಥ ‘ಸೃಷ್ಟಿ ವಿಶ್ವ ಸುವರ್ಣ ಸಂಗೀತ,...

24 Apr, 2018