ಬೆಂಗಳೂರು

ಗೌರಿ ಹತ್ಯೆಯಲ್ಲಿ ತಾಹೀರ್ ಪಾತ್ರವಿಲ್ಲ

ನಗರದಲ್ಲಿ ಸೆರೆ ಸಿಕ್ಕ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್‌ನ ಶಾರ್ಪ್‌ ಶೂಟರ್‌ ತಾಹೀರ್ ಹುಸೇನ್ ಅಲಿಯಾಸ್ ಅನೂಪ್‌ ಗೌಡನನ್ನು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬುಧವಾರ ಐದು ತಾಸು ವಿಚಾರಣೆಗೆ ಒಳಪಡಿಸಿದರು.

ಬೆಂಗಳೂರು: ನಗರದಲ್ಲಿ ಸೆರೆ ಸಿಕ್ಕ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್‌ನ ಶಾರ್ಪ್‌ ಶೂಟರ್‌ ತಾಹೀರ್ ಹುಸೇನ್ ಅಲಿಯಾಸ್ ಅನೂಪ್‌ ಗೌಡನನ್ನು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬುಧವಾರ ಐದು ತಾಸು ವಿಚಾರಣೆಗೆ ಒಳಪಡಿಸಿದರು.

ಡಿಸಿಪಿ ಎಂ.ಎನ್.ಅನುಚೇತ್ ಅವರು ಆರೋಪಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು. ಆದರೆ, ಗೌರಿ ಹತ್ಯೆಯಲ್ಲಿ ಈತನ ಪಾತ್ರವಿರುವ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.

‌ಹುಸ್ಕೂರು ರಸ್ತೆಯ ಲಾಡ್ಜ್‌ನಲ್ಲಿ ಅಡಗಿದ್ದ ತಾಹೀರ್‌ನನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದರು. ಆತನ ಬಳಿ 7.65 ಎಂ.ಎಂನ ನಾಡಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು ಸಿಕ್ಕಿದ್ದವು. ಗೌರಿ ಹತ್ಯೆಯಲ್ಲೂ ಅದೇ ಮಾದರಿಯ ಪಿಸ್ತೂಲ್ ಬಳಕೆಯಾಗಿತ್ತು. ಈ ಹೋಲಿಕೆಯಿಂದಾಗಿ ಎಸ್‌ಐಟಿ ತಾಹೀರ್‌ನನ್ನು ವಿಚಾರಣೆ ನಡೆಸಿದೆ.

‘ಯಲಹಂಕದ ಉದ್ಯಮಿಯೊಬ್ಬರನ್ನು ಕೊಲ್ಲಲು ತಾಹೀರ್ ಯಾರಿಂದಲೋ ಸುಪಾರಿ ಪಡೆದಿದ್ದ. ಆ ವ್ಯಕ್ತಿ ಯಾರೆಂಬುದನ್ನು ತಿಳಿಯಬೇಕಿದೆ. ಎಸ್‌ಐಟಿ ವಿಚಾರಣೆ ಪೂರ್ಣಗೊಂಡ ಬಳಿಕ, ಖುದ್ದು ಆತನನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದೇನೆ’ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಸತೀಶ್ ಕುಮಾರ್ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಕ್ಯಾಬ್‌ ಕಂಪನಿಗಳಿಗೆ ಮೂಗುದಾರ ಹಾಕೋರ‍್ಯಾರು?

ಓಲಾ, ಉಬರ್‌ ಕಂಪನಿಗಳ ನಿಯಂತ್ರಣಕ್ಕೆ ಮೀನಮೇಷ
ಕ್ಯಾಬ್‌ ಕಂಪನಿಗಳಿಗೆ ಮೂಗುದಾರ ಹಾಕೋರ‍್ಯಾರು?

23 Apr, 2018
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್ ನ್ಯಾಯಾಂಗ ವಶಕ್ಕೆ

ಬೆಂಗಳೂರು
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್ ನ್ಯಾಯಾಂಗ ವಶಕ್ಕೆ

23 Apr, 2018

ಬೆಂಗಳೂರು
ಕಠುವಾ ಘಟನೆ ಖಂಡಿಸಿ ಪ್ರತಿಭಟನೆ; ಎಫ್‌ಐಆರ್‌ ದಾಖಲು

ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ವಿಜಯನಗರದ ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

23 Apr, 2018

ಬೆಂಗಳೂರು
ಎಟಿಎಂ ಘಟಕಗಳಿಗೆ ತುಂಬಬೇಕಿದ್ದ ₹2 ಕೋಟಿ ಜಪ್ತಿ

ಎಟಿಎಂ ಘಟಕಗಳಿಗೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದ ₹2 ಕೋಟಿಯನ್ನು ಚುನಾವಣಾ ಅಧಿಕಾರಿಗಳು ಹಾಗೂ ಹಲಸೂರು ಪೊಲೀಸರು ಭಾನುವಾರ ಜಪ್ತಿ ಮಾಡಿದ್ದಾರೆ.

23 Apr, 2018

ಬೆಂಗಳೂರು
ರಿಲಯನ್ಸ್‌ ಕಂಪನಿ ಹೆಸರಲ್ಲಿ ವಂಚನೆ

ರಿಲಯನ್ಸ್‌ ನಿಪ್ಪನ್‌ ಜೀವವಿಮಾ ಕಂಪನಿಯ ಫಂಡ್‌ ಮ್ಯಾನೇಜರ್‌ ಸೋಗಿನಲ್ಲಿ ಗಣೇಶ್‌ ಕುಮಾರ್‌ ಎಂಬುವರು ₹5 ಲಕ್ಷ ಪಡೆದು, ನಕಲಿ ವಿಮಾ ಬಾಂಡ್‌ ನೀಡಿ, ವಂಚಿಸಿರುವ ಬಗ್ಗೆ...

23 Apr, 2018