ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕಟ್ಟಡಗಳಿಗೆ ಬೇಕು 2,788 ಹೆಕ್ಟೇರ್‌ ಜಾಗ

Last Updated 6 ಡಿಸೆಂಬರ್ 2017, 20:34 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಬೆಳೆದಂತೆ, ಕೈಗಾರಿಕಾ ಕಟ್ಟಡಗಳ ನಿರ್ಮಾಣಕ್ಕಾಗಿ 2031ರ ವೇಳೆ ಹೆಚ್ಚುವರಿಯಾಗಿ 2,788 ಹೆಕ್ಟೇರ್‌ ಜಾಗದ ಅಗತ್ಯವಿದೆ ಎಂದು ‘ಪರಿಷ್ಕೃತ ನಗರ ಮಹಾಯೋಜನೆ 2031’ರ ಕರಡಿನಲ್ಲಿ ಹೇಳಲಾಗಿದೆ.

2008ರಿಂದ 2014ರ ವರೆಗಿನ ಕೈಗಾರಿಕಾ ಬೆಳವಣಿಗೆಯ ಆಧಾರವಾಗಿಟ್ಟುಕೊಂಡು 2031ರವರೆಗಿನ ಕೈಗಾರಿಕಾ ಬೆಳವಣಿಗೆಯನ್ನು ಅಂದಾಜು ಮಾಡಲಾಗಿದೆ.

ಬೃಹತ್‌ ಕೈಗಾರಿಕೆಗಳಿಗೆ ಬೆಂಗಳೂರು ಮಹಾನಗರ ಪ್ರದೇಶದ (ಬಿಎಂಎ) ವ್ಯಾಪ್ತಿಯಲ್ಲಿ ಅವಕಾಶವಿರುವುದಿಲ್ಲ. ಮಾಲಿನ್ಯ ಉಂಟುಮಾಡದ ಹಾಗೂ ಸೇವಾ ವಲಯದ ಕೈಗಾರಿಕೆಗಳಿಗೆ ಮಾತ್ರ ಅವಕಾಶ ಸಿಗಲಿದೆ. ಇವುಗಳ ಭೂಬಳಕೆ ವಾಣಿಜ್ಯ ಉದ್ಯಮಗಳಿಗಿಂತ ಭಿನ್ನವಾಗಿರಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ವಸತಿ ಉದ್ದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಗುಡಿ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಬಹುದು. ಆದರೆ, ಇದಕ್ಕೆ ವಲಯ ನಿಬಂಧನೆ ಷರತ್ತುಗಳು ಅನ್ವಯವಾಗುತ್ತವೆ.

ನೆಲ ಮತ್ತು ಒಟ್ಟು ಕಟ್ಟಡದ ಪ್ರದೇಶದ ಅನುಪಾತ (ಫ್ಲೋರ್‌ ಸ್ಪೇಸ್‌ ರೇಷಿಯೊ) 2.5 ಇರಲಿದೆ ಎಂಬ ಅಂಶವನ್ನು ಮಾನದಂಡವಾಗಿಟ್ಟುಕೊಂಡು ಲೆಕ್ಕಾಚಾರ ಹಾಕಿದಾಗ, 2031ರ ವೇಳೆಗೆ ಕೈಗಾರಿಕಾ ಕಟ್ಟಡಗಳಿಗೆ 1,239 ಹೆಕ್ಟೇರ್‌ ಜಾಗದ ಬೇಡಿಕೆ ಸೃಷ್ಟಿಯಾಗಬಹುದು. ಇದರಲ್ಲಿ ಶೇ 10 ರಷ್ಟು ಬೇಡಿಕೆಯನ್ನು ಬೆಂಗಳೂರು– ಮೈಸೂರು ಮೂಲಸೌಕರ್ಯ ಕಾರಿಡಾರ್‌ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಎಂಐಸಿಎಪಿಎ) ವ್ಯಾಪ್ತಿಯಲ್ಲಿ ಪೂರೈಸಬಹುದು ಎಂದು ಅಂದಾಜು ಮಾಡಲಾಗಿದೆ.

ಕೈಗಾರಿಕೆಗಳಿರುವ ಕಡೆಯೂ ರಸ್ತೆ, ಸಾರ್ವಜನಿಕ ಸೌಕರ್ಯ, ಹಸಿರೀಕರಣ ಹಾಗೂ ಮುಕ್ತಪ್ರದೇಶಗಳಿಗಾಗಿ ಜಾಗ ಕಾದಿರಿಸಬೇಕಾಗುತ್ತದೆ. ಹಾಗಾಗಿ ಕಾದಿರಿಸುವ ಜಾಗದಲ್ಲಿ ಶೇ 60 ರಷ್ಟು ಭೂಮಿ ಮಾತ್ರ ಕೈಗಾರಿಕಾ ಕಟ್ಟಡ ನಿರ್ಮಾಣಕ್ಕೆ ಲಭಿಸಲಿದೆ. ಈ ಅಂದಾಜಿನ ಪ್ರಕಾರ ಸುಮಾರು 18 ಚದರ ಕಿ.ಮೀಯಷ್ಟು ಜಾಗ ಇಂತಹ ಉದ್ದೇಶಗಳಿಗೇ ಬಳಕೆ ಆಗಲಿದೆ. ಈಗಾಗಲೇ ಇರುವ ಕೈಗಾರಿಕೆಗಳು, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮೀಸಲಿಟ್ಟ ಜಾಗವನ್ನು ಪುನರ್‌ ಅಭಿವೃದ್ಧಿಗೊಳಿಸುವ ಮೂಲಕವೂ ಈ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳಬಹುದು ಎಂದು ವಿವರಿಸಲಾಗಿದೆ.

ಫ್ಲೋರ್‌ ಏರಿಯಾ ರೇಷಿಯೊಗೆ (ಎಫ್‌ಎಆರ್‌) ಸಂಬಂಧಿಸಿ ನಿಯಮಗಳಲ್ಲಿ ರಿಯಾಯಿತಿಗಳನ್ನು ಒದಗಿಸುವ ಮೂಲಕ ಸಮಗ್ರ ಟೌನ್‌ಷಿಪ್‌ ಅಥಾ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ ನೀಡುವ ಮೂಲಕ ಕೈಗಾರಿಕೆಗೆ ಅಗತ್ಯವಿರುವ ಹೆಚ್ಚುವರಿ ಭೂಮಿಯ ಅಗತ್ಯವನ್ನು ಪೂರೈಸಿಕೊಳ್ಳಬಹುದು ಎಂದು ಸಲಹೆ ನೀಡಲಾಗಿದೆ.

ಪ್ರಮುಖ ಮೂಲಸೌಕರ್ಯಗಳಿಗೆ ಬೇಕಿದೆ 60 ಚ.ಕಿ.ಮೀ

ನಗರ ಬೆಳೆದಂತೆ ನೀರು ಸರಬರಾಜು, ವಿದ್ಯುತ್‌ ಪೂರೈಕೆ, ಘನತ್ಯಾಜ್ಯ ನಿರ್ವಹಣೆ, ಹಸಿರೀಕರಣ, ಮನರಂಜನಾ ಚಟುವಟಿಕೆ, ಉನ್ನತ ಶಿಕ್ಷಣ, ಆರೋಗ್ಯ ಸೌಕರ್ಯ, ಸ್ಮಶಾನ, ಸಣ್ಣಪುಟ್ಟ ರಸ್ತೆ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶಗಳಿಗೆ 30 ಚದರ ಕಿ.ಮೀ ಜಾಗ ಬೇಕಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಉದ್ದೇಶಗಳಿಗೆ ಕಾದಿರಿಸುವ ಜಾಗದಲ್ಲಿ ಶೇ 50ರಷ್ಟು ಮಾತ್ರ ನಿಜವಾದ ಅರ್ಥದಲ್ಲಿ ಬಳಕೆಗೆ ಲಭಿಸುತ್ತದೆ. ಹಾಗಾಗಿ ಇಂತಹ ಮೂಲಸೌಕರ್ಯಗಳಿಗಾಗಿ 60 ಚದರ ಕಿ.ಮೀ ಜಾಗವನ್ನು ಮೀಸಲಿಡಬೇಕಾಗುತ್ತದೆ.

ಪ್ರಮುಖ ರಸ್ತೆಗಳಿಗೆ ಪ್ರತ್ಯೇಕವಾಗಿ 30 ಚದರ ಕಿ.ಮೀ  ಕಾದಿರಿಸುವಂತೆ ಕರಡಿನಲ್ಲಿ ಶಿಫಾರಸು ಮಾಡಲಾಗಿದೆ.

ಜನವಸತಿಗೆ ಬೇಕು 932 ಚದರ ಕಿ.ಮೀ

ನಗರ ಹಾಗೂ ಪ್ರಾದೇಶಿಕ ಅಭಿವೃದ್ಧಿ ಯೋಜನೆ ರಚನೆ ಮತ್ತು ಅನುಷ್ಠಾನ (ಯುಆರ್‌ಡಿಪಿಎಫ್‌ಐ) ಮಾರ್ಗಸೂಚಿಗಳ ಪ್ರಕಾರ ಮಹಾನಗರಗಳಲ್ಲಿ ಜನಸಾಂದ್ರತೆ ಪ್ರತಿ ಹೆಕ್ಟೇರ್‌ಗೆ 200 ಮಂದಿಯಷ್ಟು ಇರಬಹುದು. ಇದೇ ಆಧಾರದಲ್ಲಿ ಲೆಕ್ಕಾಚಾರ ಹಾಕಿದರೆ, 2031ರ ವೇಳೆಗೆ ಹೆಚ್ಚಳವಾಗುವ ಜನಸಂಖ್ಯೆಯ ಪ್ರಮಾಣಕ್ಕೆ 932 ಚದರ ಕಿ.ಮೀ ಜಾಗದ ಅಗತ್ಯವಿದೆ. ಅಂದರೆ, ಹೆಚ್ಚುವರಿಯಾಗಿ 318 –348 ಚದರ ಕಿ.ಮೀ.ನಷ್ಟು ಪ್ರದೇಶವು ಈ ಉದ್ದೇಶಕ್ಕೆ ಬಳಕೆ ಆಗಲಿದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ.

ಸಾಂದ್ರೀಕೃತ ನಗರಾಭಿವೃದ್ಧಿ (ಅಗತ್ಯ ಮೂಲಸೌಕರ್ಯ ಕಲ್ಪಿಸಿ ಕಡಿಮೆ ಜಾಗದಲ್ಲಿ ಹೆಚ್ಚು ದಟ್ಟ ಜನವಸತಿಗೆ ಅವಕಾಶ ಕಲ್ಪಿಸುವುದು) ಮಾದರಿಯನ್ನು ಅಳವಡಿಸಿಕೊಂಡರೂ 2031ರ ವೇಳೆಗೆ 60 ಚದರ ಕಿ.ಮೀಯಿಂದ 90 ಚದರ ಕಿ.ಮೀ ಪ್ರದೇಶ ಜನವಸತಿಯ ಉದ್ದೇಶಕ್ಕಾಗಿ ಬೇಕಾಗುತ್ತದೆ. ಇದರಲ್ಲಿ ಕೆರೆ, ಕಾಲುವೆಗಳ ಮೀಸಲು ಪ್ರದೇಶಗಳಿಗೆ ಸಂಬಂಧಿಸಿ ಹಸಿರು ನ್ಯಾಯಮಂಡಳಿಯ ಆದೇಶವನ್ನು ಪಾಲಿಸುವಾಗ ಶೇ 15ರಿಂದ 20ರಷ್ಟು ಜಾಗ ಜನವಸತಿಗೆ ಲಭಿಸುವುದಿಲ್ಲ. ಆಗ 71–108 ಚ.ಕಿ.ಮೀಟರ್‌ನಷ್ಟು ಜಾಗ ಈ ಉದ್ದೇಶಕ್ಕೆ ಬಳಸಬೇಕಾಗುತ್ತದೆ.

2015ರ ಪರಿಷ್ಕೃತ ಮಹಾಯೋಜನೆಯನ್ವಯ ನಗರದಲ್ಲಿ ಜನವಸತಿಗೆ ಲಭ್ಯ ಇರುವ 304 ಚ. ಕಿ.ಮೀ ಜಾಗವನ್ನು ಬಳಸಿಕೊಳ್ಳಬಹುದು. ಇದರಲ್ಲಿ ಹಸಿರು ನ್ಯಾಯಮಂಡಳಿಯ ಆದೇಶವನ್ನು ಪಾಲಿಸುವಾಗ ಸುಮಾರು 46 ಚ.ಕಿ.ಮೀ ಜಾಗದಲ್ಲಿ ಜನವಸತಿ ಚಟುವಟಿಕೆಗೆ ಅವಕಾಶ ಸಿಗುವುದಿಲ್ಲ. 258 ಚ.ಕಿ.ಮೀ ಜಾಗ ಮಾತ್ರ ಈ ಉದ್ದೇಶಕ್ಕೆ ಲಭಿಸುತ್ತದೆ.

ಪ್ರಮುಖ ಮೂಲಸೌಕರ್ಯಗಳಿಗೆ ಬೇಕಿದೆ 60 ಚ.ಕಿ.ಮೀ

ನಗರ ಬೆಳೆದಂತೆ ನೀರು ಸರಬರಾಜು, ವಿದ್ಯುತ್‌ ಪೂರೈಕೆ, ಘನತ್ಯಾಜ್ಯ ನಿರ್ವಹಣೆ, ಹಸಿರೀಕರಣ, ಮನರಂಜನಾ ಚಟುವಟಿಕೆ,

ಜನವಸತಿಗೆ ಬೇಕು 932 ಚದರ ಕಿ.ಮೀ

ನಗರ ಹಾಗೂ ಪ್ರಾದೇಶಿಕ ಅಭಿವೃದ್ಧಿ ಯೋಜನೆ ರಚನೆ ಮತ್ತು ಅನುಷ್ಠಾನ (ಯುಆರ್‌ಡಿಪಿಎಫ್‌ಐ) ಮಾರ್ಗಸೂಚಿಗಳ ಪ್ರಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT