ಭಕ್ತರ ಆಕ್ರೋಶ; ಸ್ವಾಮೀಜಿ ಅಜ್ಞಾತ

ಕೊಟ್ಟೂರೇಶ್ವರ ಸ್ವಾಮೀಜಿ ಲೈಂಗಿಕ ಪ್ರಕರಣ ಬಹಿರಂಗ

ಲಾಡ್ಜ್‌ನ ಕೊಠಡಿಯಲ್ಲಿ ಮಹಿಳೆಯೊಂದಿಗೆ ಕೊಟ್ಟೂರೇಶ್ವರ ಸ್ವಾಮೀಜಿ ಇದ್ದಾರೆ ಎನ್ನಲಾಗಿರುವ ವಿಡಿಯೊ ತುಣುಕುಗಳನ್ನು ಮಲ್ಲಯ್ಯ ಸ್ವಾಮಿ ಬಹಿರಂಗಗೊಳಿಸಿದ್ದಾರೆ. ‘ಈ ವಿಚಾರದಲ್ಲಿ ಸ್ವಾಮೀಜಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಅವರು ದೂರಿದ್ದಾರೆ...

ಲಾಡ್ಜ್‌ನ ಕೊಠಡಿಯಲ್ಲಿ ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆ ಎನ್ನಲಾಗಿರುವ ವಿಡಿಯೊದ ಸ್ಟಿಲ್

ಗಂಗಾವತಿ (ಕೊಪ್ಪಳ ಜಿಲ್ಲೆ): ವಿರಕ್ತ ಕಲ್ಲು ಮಠದ ಪೀಠಾಧಿಪತಿ ಕೊಟ್ಟೂರು ಸ್ವಾಮೀಜಿ ಅವರು ಮಹಿಳೆಯೊಂದಿಗೆ ವಸತಿ ಗೃಹದ ಕೊಠಡಿಯಲ್ಲಿ ಇರುವ ವಿಡಿಯೊ ಬಹಿರಂಗವಾಗಿದೆ.

ವಿಡಿಯೊ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ವಿಷಯ ತಿಳಿದು ಮಠದ ಆವರಣಕ್ಕೆ ಬಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸ್ವಾಮೀಜಿ ಇನ್ನು ಮಠಕ್ಕೆ ಕಾಲಿಡಬಾರದು ಎಂದು ಕೂಗಿದರು. ದಾಂದಲೆಗೂ ಮುಂದಾದರು. ಕೆಲವರು ಇದು ಸ್ವಾಮೀಜಿ ವಿರುದ್ಧ ನಡೆಸಿದ ಪಿತೂರಿ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಸ್ಥಳಕ್ಕೆ ಬಂದ ಲಿಂಗಾಯತ ಹಾಗೂ ಜಂಗಮ ಸಮಾಜದ ಕೆಲ ಮುಖಂಡರು ಯುವಕರನ್ನು ಸಮಾಧಾನ ಮಾಡಿ ಪರಿಸ್ಥಿತಿ ನಿಭಾಯಿಸಿದರು.

ವಿಡಿಯೊದಲ್ಲೇನಿದೆ?: ಧಾರವಾಡದ ಎಸ್‌ಡಿಎಂ ಆಸ್ಪತ್ರೆಯ ಸಮೀಪದ ವಸತಿಗೃಹವೊಂದರ ಕೊಠಡಿ ಸಂಖ್ಯೆ-303ರಲ್ಲಿ ನಡೆದ ದೃಶ್ಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಯುವಕರು ಕೋಣೆ ಪ್ರವೇಶಿಸುತ್ತಿದ್ದಂತೆಯೇ ಮಹಿಳೆ ಮೈಮೇಲೆ ಟವೆಲ್‌ ಹಾಕಿಕೊಂಡು ನಿಂತಿರುವ ಹಾಗೂ ಸ್ವಾಮೀಜಿ ಹಾಸಿಗೆಯಿಂದ ಎದ್ದು ಬರುವ ದೃಶ್ಯವಿದೆ.

(ಡಾ.ಕೊಟ್ಟೂರು ಸ್ವಾಮೀಜಿ)

‘ಇದೊಂದು ಷಡ್ಯಂತ್ರವಾಗಿದ್ದು, ಮಠದ ಏಳಿಗೆ ಬಯಸದ ಕೆಲವರು ಇದನ್ನು ಮಾಡಿದ್ದಾರೆ’ ಎಂದು ದಲಿತ ಮುಖಂಡ ದೇವಪ್ಪ ಕಾಮದೊಡ್ಡಿ ಹೇಳಿದರು.

ಸ್ವಾಮೀಜಿಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಈ ವಿಡಿಯೊ ಬಹಿರಂಗಪಡಿಸಿದ್ದು, ಜೀವ ಬೆದರಿಕೆ ಇರುವುದಾಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಬದಲಿಗೆ ನಿರ್ಧಾರ’

‘ಭಕ್ತರ ಒತ್ತಾಯದ ಮೇಲೆ ಮಠದ ಸ್ವಾಮೀಜಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ’ ಎಂದು ಅಖಿಲಭಾರತ ವೀರಶೈವ ಮಹಾಸಭಾದ ಗಂಗಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಚ್‌.ಹಾಲಸಮುದ್ರ ತಿಳಿಸಿದರು.

* ನನ್ನನ್ನು ಕೆಲಸ ಬಿಡಿಸುವ ಅಂಜಿಕೆಯಿಂದ ಹೇಳಿರಲಿಲ್ಲ. ಆದರೆ, ಸ್ವಾಮೀಜಿ ಜೀವ ಬೆದರಿಕೆ ಹಾಕಿದ್ದರ ಪರಿಣಾಮ ಪ್ರಕರಣ ಹೊರಬರುವಂತಾಗಿದೆ.

-ಮಲ್ಲಯ್ಯಸ್ವಾಮಿ, ಕಲ್ಲುಮಠದ ಸ್ವಾಮೀಜಿಯ ಕಾರುಚಾಲಕ ಹಿರೇಜಂತಕಲ್

Comments
ಈ ವಿಭಾಗದಿಂದ ಇನ್ನಷ್ಟು
ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿ: ನಾಲ್ವರು ಸಾವು

ಚಿಕ್ಕೋಡಿ
ಬೈಕ್ ಮತ್ತು ಶಾಲಾ ವಾಹನ ನಡುವೆ ಡಿಕ್ಕಿ: ನಾಲ್ವರು ಸಾವು

18 Jan, 2018
ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

ಮಂಗಳೂರು
ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

18 Jan, 2018
ಹಿರಿಯ ನಟ, ನಿರ್ದೇಶಕ ಕಾಶಿನಾಥ್‌ ವಿಧಿವಶ

ಬೆಂಗಳೂರು
ಹಿರಿಯ ನಟ, ನಿರ್ದೇಶಕ ಕಾಶಿನಾಥ್‌ ವಿಧಿವಶ

18 Jan, 2018

ರಾಜ್ಯ
ಹದ್ದು, ಗರುಡಗಳ ನಿಗೂಢ ಸಾವು

ಪಟ್ಟಣದ ಹೊರವಲಯದಲ್ಲಿರುವ ಶ್ರೀ ರಾಮದೇವರ ಗುಡ್ಡದ ಬಳಿ ಇರುವ ಪುರಸಭೆ ಕಸ ವಿಲೇವಾರಿ ಘಟಕದಲ್ಲಿ ಕೆಲವು ಹದ್ದು ಮತ್ತು ಗರುಡಗಳು ಮೃತಪಟ್ಟಿವೆ.

18 Jan, 2018

ಚನ್ನಪಟ್ಟಣ
ಕಲುಷಿತ ನೀರಿನಿಂದ 45ಕ್ಕೂ ಹೆಚ್ಚು ಜನರು ಅಸ್ವಸ್ಥ

ಪಟ್ಟಣದ ಶೇರು ಹೋಟೆಲ್ ಬಳಿಯ ಪೇಟೆಚೇರಿಯಲ್ಲಿ ಬುಧವಾರ ಕಲುಷಿತ ನೀರು ಸೇವಿಸಿ 45ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

18 Jan, 2018