ವಾಸಕ್ಕೆ ಕೌದಿ ಜೋಪಡಿಯೇ ಗತಿ

ಬುಡುಬುಡಕಿಗಳ ಭವಿಷ್ಯ ಡೋಲಾಯಮಾನ

‘ಇದನ್ನು ಆಲಿಸಿದ ಕೆಲವರು ಶಕುನ ಕೆಟ್ಟದ್ದಾದರೆ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ. ಶಕುನ ಸರಿ ಇದ್ದರೆ ಜನರು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ’ ಎಂದು ವಿವರಿಸಿದರು.

ಕೌದಿ ಟೆಂಟ್‌ಗಳಲ್ಲಿ ನೆಲೆಸಿರುವ ಬುಡುಬುಡುಕಿ ಕುಟುಂಬ

ಕಂಪ್ಲಿ: ‘ಹಾಲಕ್ಕಿ ಶಕುನ ನುಡಿದೈತೆ. ಜಯವಾಗುತೈತೆ ಶುಭವಾಗತೈತೆ ಶುಭವಾಗತೈತೆ ಜಯವಾಗತೈತೆ’ ಎಂದು ನುಡಿಯುತ್ತಾ ಊರಿಂದೂರಿಗೆ ಹೊರಡುವ ಬುಡುಬುಡಿಕೆಯವರು ಇಂದಿಗೂ ಜನಪದ ಪರಂಪರೆ ಉಳಿವಿಗೆ ಕಾರಣಕರ್ತರು.

ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಇಂಥ ಕಲೆಯನ್ನು ಕಂಪ್ಲಿ ಪಟ್ಟಣದ ವಿನಾಯಕನಗರದಲ್ಲಿರುವ(ಸಿಲ್ವರ್‌ ಕಾಲೊನಿ) ಮರಾಠಿ ಕುಟುಂಬಗಳು ಪೋಷಿಸಿಕೊಂಡು ಬರುತ್ತಿವೆ.

ದೊಡ್ಡ ನಾಗಪ್ಪ, ಸಣ್ಣ ನಾಗಪ್ಪ, ಪರಶುರಾಮ ಮತ್ತು ದೇವೇಂದ್ರಪ್ಪ ಅವರು ತಲೆಗೆ ರುಮಾಲು, ಹಣೆಗೆ ಕುಂಕುಮ, ಹೆಗಲಿಗೆ ವಲ್ಲಿ ಹಾಕಿ, ಬಲಗೈ ಹೆಬ್ಬೆರಳಿಗೆ ಹಣೆಗೆಜ್ಜೆ, ಬಗಲಿಗೆ ಜೋಳಿಗೆ ನೇತು ಹಾಕಿಕೊಂಡು ತಮ್ಮದೇ ಶೈಲಿಯಲ್ಲಿ ಜನರಿಗೆ ಮೋಡಿ ಹಾಕುತ್ತಾ ಕೈಯಲ್ಲಿದ್ದ ಪುಟ್ಟ ಡಮರುಗ ಆಕೃತಿಯ ಚರ್ಮವಾದ್ಯದಿಂದ(ಬುಡಬುಡಿಕೆ) ಬುಡು ಬುಡು ನಾದ ಹೊಮ್ಮಿಸಿ ‘ಕೆಂಪು ಕುದುರೆ ಹಾರುತ್ತದೆ (ಬೆಂಕಿ ಅನಾಹುತ ಸಂಭವಿಸುತ್ತದೆ), ತುಂಬಿದ ಕೊಡ ತುಳುಕುತ್ತದೆ (ತುಂಬಿದ ಗರ್ಭಿಣಿ ಆಕಸ್ಮಿಕ ಸಾವು ಕಾಣುತ್ತಾಳೆ), ನಡು ಅಗಸಿ ಮುಂದೆ ಓಕುಳಿ ಆಗುತ್ತೆ(ಊರಲ್ಲಿ ಜಗಳ ಮಾರಾಮರಿ ನಡೆಯುತ್ತದೆ) ಎನ್ನುವ ಶಕುನವನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾರೆ.

‘ಇದನ್ನು ಆಲಿಸಿದ ಕೆಲವರು ಶಕುನ ಕೆಟ್ಟದ್ದಾದರೆ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ. ಶಕುನ ಸರಿ ಇದ್ದರೆ ಜನರು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ’ ಎಂದು ವಿವರಿಸಿದರು.

‘ನಾವು ತೆರಳುವ ಗ್ರಾಮದಲ್ಲಿ ಸರಿರಾತ್ರಿ ಸ್ಮಶಾನಕ್ಕೆ ತೆರಳಿ ಅಲ್ಲಿ ಕೂಗುವ ಹಾಲಕ್ಕಿಯ ಕೂಗನ್ನು ಏಕಾಗ್ರತೆ
ಯಿಂದ ಆಲಿಸಿ ಅಂದಿನ ಭವಿಷ್ಯವಾಣಿ ನಿರ್ಧರಿಸುತ್ತೇವೆ. ಬುಡುಬುಡಿಕೆ ನುಡಿಸುತ್ತಾ ಊರುಗಳಲ್ಲಿ ಸುತ್ತಿ ಶಕುನ
ವನ್ನು ನುಡಿಯುತ್ತಾ ಮನೆಯವರು ನೀಡುವ ಕಾಳು, ಕಡಿ, ಕಾಸು ಸ್ವೀಕರಿಸುತ್ತೇವೆ’ ಎಂದು ತಿಳಿಸಿದರು.

-ಪಂಡಿತಾರಾಧ್ಯ ಎಚ್‌.ಎಂ.

Comments
ಈ ವಿಭಾಗದಿಂದ ಇನ್ನಷ್ಟು

ಕಂಪ್ಲಿ
ಸಶಸ್ತ್ರ ಸೇನಾ ಪಡೆ ಪಥ ಸಂಚಲನ

ಕಂಪ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಬಂದಿರುವ ಇಂಡೋ ಟಿಬೆಟ್ ಗಡಿ ರಕ್ಷಣಾ ಪಡೆಯ ಸುಮಾರು 100 ಯೋಧರು ಮತ್ತು ಸ್ಥಳೀಯ...

23 Apr, 2018
ಮಾತಿಲ್ಲದವರಿಗೆ ಕೂಡಿ ಬಂತು ಕಂಕಣ ಬಲ

ಕೊಟ್ಟೂರು
ಮಾತಿಲ್ಲದವರಿಗೆ ಕೂಡಿ ಬಂತು ಕಂಕಣ ಬಲ

23 Apr, 2018
ಪಂಜಿನ ಮೆರವಣಿಗೆ ಮೂಲಕ ಮತದಾರ ಜಾಗೃತಿ

ಕುರುಗೋಡು
ಪಂಜಿನ ಮೆರವಣಿಗೆ ಮೂಲಕ ಮತದಾರ ಜಾಗೃತಿ

23 Apr, 2018

ಕುರುಗೋಡು
‘ಕಾಂಗ್ರೆಸ್ ಗೆ ಜನಬಲ ಬಿಜೆಪಿಗೆ ಹಣ ಬಲ’

ಟಿ.ಎಚ್.ಸುರೇಶ್ ಬಾಬು ಕಳೆದ ಎರಡು ಅವಧಿಯಲ್ಲಿಶಾಸಕರಾಗಿ ಆಯ್ಕೆಯಾಗಿದ್ದರೂ ಕಂಪ್ಲಿ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಅಭಿವೃದ್ಧಿ ಕಾರ್ಯಗಳು ಕೈಗೊಂಡಿಲ್ಲ ಎಂದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ...

23 Apr, 2018

ಮರಿಯಮ್ಮನಹಳ್ಳಿ
‘ಆಟದಲ್ಲಿ ಸೋಲು ಗೆಲವು ಮುಖ್ಯವಲ್ಲ’

ಸ್ಥಳೀಯ ರೆಡ್‌ಬಾಯ್ಸ್ ಕ್ರಿಕೆಟ್ ಕ್ಲಬ್‌ನ ಸದಸ್ಯರು ಶನಿವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರಿಕೆಟ್‌ ಟೂರ್ನಿಯ ಅಂತಿಮ ಪಂದ್ಯದಲ್ಲಿ ರೆಡ್‌ ಬಾಯ್ಸ್‌ ತಂಡದವರು ಜೂನಿಯರ್‌ ವಾಲ್ಮೀಕಿ...

22 Apr, 2018