ಪರಿನಿರ್ವಾಣ ಶುಭಾಶಯ ಕೋರುವ ಫ್ಲೆಕ್ಸ್: ಬಿಜೆಪಿ ಪ್ರತಿಭಟನೆ

ಅದ್ಧೂರಿ ಅಂಬೇಡ್ಕರ್‌ ಪರಿನಿರ್ವಾಣ ದಿನ

ಅಂಬೇಡ್ಕರ್‌ ವೃತ್ತದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪಂಚಶೀಲ ಮತ್ತು ನೀಲಿ ಧ್ವಜಾರೋಹಣ ಮಾಡಿದರು.

ಬೀದರ್‌ನ ಅಂಬೇಡ್ಕರ್‌ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು

ಬೀದರ್‌: ಜಿಲ್ಲೆಯ ವಿವಿಧೆಡೆ ಬುಧವಾರ ಡಾ. ಬಿ.ಆರ್‌. ಅಂಬೇಡ್ಕರ್‌ ಪರಿನಿರ್ವಾಣ ದಿನ ಆಚರಿಸಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್‌ ಪರಿನಿರ್ವಾಣ ಆಚರಣೆ ಸಮಿತಿಯು ನಗರದ ಅಂಬೇಡ್ಕರ್‌ ವೃತ್ತದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪಂಚಶೀಲ ಮತ್ತು ನೀಲಿ ಧ್ವಜಾರೋಹಣ ಮಾಡಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ, ಡಾ. ಬಿ.ಆರ್‌. ಅಂಬೇಡ್ಕರ್‌ ಪರಿನಿರ್ವಾಣ ಆಚರಣೆ ಸಮಿತಿಯ ಗೌರವಾಧ್ಯಕ್ಷ ರಮೇಶ ಕಟ್ಟಿತೂಗಾಂವ, ಅಧ್ಯಕ್ಷ ಬಾಬುರಾವ್‌ ಪಾಸ್ವಾನ್‌, ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಾಜಕುಮಾರ ಮೂಲಭಾರತಿ ಇದ್ದರು.

ಬಿಜೆಪಿ: ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಜಯಕುಮಾರ ಕಾಂಗೆ, ಈಶ್ವರಸಿಂಗ್ ಠಾಕೂರ್‌, ಪ್ರಮುಖರಾದ ಬಾಬು ವಾಲಿ, ರಾಜಕುಮಾರ ಚಿದ್ರಿ, ಅರಹಂತ ಸಾವಳೆ, ಶಿವಪುತ್ರ ವೈದ್ಯ, ಹಣಮಂತ ಬುಳ್ಳಾ, ಕಿರಣ ಪಾಲಂ, ದೀಪಕ ಚಿದ್ರಿ, ಗುಣವಂತ ಭಾವಿಕಟ್ಟಿ ಉಪಸ್ಥಿತರಿದ್ದರು.

ಪರಿನಿರ್ವಾಣ ಶುಭಾಶಯ ಕೋರುವ ಫ್ಲೆಕ್ಸ್– ಪ್ರತಿಭಟನೆ:
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನದ ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಸಿರುವುದನ್ನು ಖಂಡಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಸಚಿವರು ಹಾಗೂ ನಿಗಮದ ಅಧ್ಯಕ್ಷರು ಶ್ರದ್ಧಾಂಜಲಿ ಸಲ್ಲಿಸುವ ಬದಲು ಶುಭಾಶಯ ಕೋರುವ ಫ್ಲೆಕ್ಸ್ ಅಳವಡಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಜಯಕುಮಾರ ಕಾಂಗೆ, ಅರಹಂತ ಸಾವಳೆ, ಗುಣವಂತ ಭಾವಿಕಟ್ಟಿ, ಪ್ರಫುಲ್ ಸೋನಿ, ವಿನೋದ ಬಂದಗೆ, ಹೀರಾಲಾಲ್‌ ಕಾಂಬಳೆ, ಸುನೀಲ ಬಂದಗೆ, ಸುನೀಲ ದರ್ಗಾ, ಗೌತಮ ಮಿತ್ರಾ, ಸೇವಕ ಕಸಬೆ ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
107 ಹೋಟೆಲ್‌ಗಳ ಮೇಲೆ ದಾಳಿ

ಬೀದರ್
107 ಹೋಟೆಲ್‌ಗಳ ಮೇಲೆ ದಾಳಿ

24 Jan, 2018

ಬೀದರ್
ಸಿರಿಧಾನ್ಯಗಳ ‘ಸೂಪ್‌’ಗೆ ಮಾರುಹೋದ ಸಾಹಿತ್ಯಾಸಕ್ತರು!

ಸಂಗಪ್ಪ ಅವರು 500 ಲೋಟಗಳಷ್ಟು ಸಿರಿಧಾನ್ಯಗಳ ಗಂಜಿ ಸಿದ್ಧಪಡಿಸಿಕೊಂಡು ಬಂದಿದ್ದರು. ಮಳಿಗೆ ಮೇಲೆ ‘ಸಿರಿಧಾನ್ಯಗಳ ಸೂಪ್‌ (ಗಂಜಿ)’ ಲಭ್ಯ ಇದೆ ಎಂದು ಬರೆಸಿದ್ದರು.

24 Jan, 2018
ವಚನ ಸಾಹಿತ್ಯದ ಚಳವಳಿ ವಿಶ್ವಕ್ಕೆ ಮಾದರಿ

ಬೀದರ್‌
ವಚನ ಸಾಹಿತ್ಯದ ಚಳವಳಿ ವಿಶ್ವಕ್ಕೆ ಮಾದರಿ

24 Jan, 2018

ಇಂಡಿ
ಭೀಮಾತೀರದ ಪ್ರಕರಣಗಳಿಗೆ ಅನಕ್ಷರತೆ ಕಾರಣ

ಭೀಮಾತೀರ ಮತ್ತು ಗಡಿ ಭಾಗದಲ್ಲಿ ಅಫರಾದ ಪ್ರಕರಣಗಳು ಸಂಭವಿಸಲು ಅನಕ್ಷರತೆ ಮೂಲ ಕಾರಣ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕಕುಮಾರ ಹೇಳಿದರು.

24 Jan, 2018
ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

ಕಮಲನಗರ
ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

23 Jan, 2018