ಖಟಕ ಚಿಂಚೋಳಿ: ಸತ್ಸಂಗ ಕಾರ್ಯಕ್ರಮದ ಸಮಾರೋಪ

‘ಗುರುವಿನ ಮಾರ್ಗದರ್ಶನ ಅಗತ್ಯ’

‘ಸಕಲ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು. ಅದನ್ನು ಕೇವಲ ಲೌಕಿಕ ಸುಖಕ್ಕಾಗಿ ಬಲಿಕೊಡದೆ, ಗುರು ತೋರಿದ ಮಾರ್ಗದಲ್ಲಿ ನಡೆದು ಸಂತಸದ ಬದುಕು ಸಾಗಿಸಬೇಕು’ ಎಂದು ತಿಳಿ ಹೇಳಿದರು .

ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಜೈ ಭವಾನಿ, ದತ್ತಾತ್ರೇಯ ಎಳಗುತ್ತಿ ಆಶ್ರಮದಲ್ಲಿ ಮಂಗಳವಾರ ನಡೆದ ಸತ್ಸಂಗ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು

ಭಾಲ್ಕಿ: ‘ಅನಿಶ್ಚಿತ ಬದುಕಿನಲ್ಲಿ ಜೀವನದ ಸಾರ್ಥಕತೆ ಕಾಣಲು ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆಯುವುದು ಅಗತ್ಯ’ ಎಂದು ಹಿರೇಮಠ ಕಲ್ಲೂರಿನ ಮೃತ್ಯುಂಜಯ ಶಿವಚಾರ್ಯರು ಹೇಳಿದರು.

ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಜೈ ಭವಾನಿ, ದತ್ತಾತ್ರೇಯ ಎಳಗುತ್ತಿ ಆಶ್ರಮದಲ್ಲಿ ಮಂಗಳವಾರ ನಡೆದ ಸತ್ಸಂಗ ಸಮಾರೋಪ, 21ನೇ ದತ್ತ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಕಲ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠವಾದದ್ದು. ಅದನ್ನು ಕೇವಲ ಲೌಕಿಕ ಸುಖಕ್ಕಾಗಿ ಬಲಿಕೊಡದೆ, ಗುರು ತೋರಿದ ಮಾರ್ಗದಲ್ಲಿ ನಡೆದು ಸಂತಸದ ಬದುಕು ಸಾಗಿಸಬೇಕು’ ಎಂದು ತಿಳಿ ಹೇಳಿದರು .

ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಮಾನವರು ಮೊದಲು ತಮ್ಮನ್ನು ತಾವು ಪ್ರೀತಿಸುವುದನ್ನು ಕಲಿಯಬೇಕು. ಅಂದಾಗ ಮಾತ್ರ ಇಡೀ ಸಮಾಜ ಅವರನ್ನು ಪ್ರೀತಿಸಲು ಸಾಧ್ಯ’ ಎಂದು ಮಾರ್ಮಿಕವಾಗಿ ನುಡಿದರು.

ಕಲಬುರ್ಗಿಯ ರೇವಣಸಿದ್ದಯ್ಯಾ ಶಾಸ್ತ್ರಿ ಮಾತನಾಡಿ, ‘ಸಾರ ಸಜ್ಜನರ ಸಂಗ ಲೇಸು ಎಂದು ಬಸವಾದಿ ಶಿವಶರಣರು ತಿಳಿಸಿದ್ದಾರೆ. ಅವರ ವಾಣಿಯಂತೆ ಎಲ್ಲರೂ ಬಾಳಬೇಕು’ ಎಂದರು.

ಚನ್ನಬಸಪ್ಪಾ ಅಪ್ಪಾಜಿ, ಶಿವಕುಮಾರ ಶಿವಚಾರ್ಯ, ನೀಲಕಂಠ ಸ್ವಾಮೀಜಿ, ಸುಶೀಲಾಬಾಯಿ, ಡಿ.ಸಿ.ಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಭೀಮರಾವ ಪಾಟೀಲ ಮಾತನಾಡಿದರು.

ಮಾತೋಶ್ರೀ ಗೋದಾವರಿ ತಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ ಕಡಗಂಚಿ, ರೇವಣಸಿದ್ದಪ್ಪಾ ಏಳಗುತ್ತಿ, ಬಸಯ್ಯಾ ಸ್ವಾಮಿ, ಭೀಮರೆಡ್ಡಿ ಕೊತ್ತುರ, ಗೊರಕ ಜಮಾದರ, ರಾಮಚಂದ್ರಪ್ಪ, ಶಿವರಾಜ ಕಾಳಗಪೂರೆ, ಕಂಟೆಪ್ಪಾ ಗಂಗಾ ಪಾಟೀಲ, ಸುರೇಶ ದುಬಲಗುಂಡಿ, ಸಂಗಮೇಶ ಹೊನ್ನಾಳೆ, ಗುಂಡಪ್ಪಾ ಬೂರ್ಕೆ, ಶಾಂತಪ್ಪಾ ಕುಂಬಾರ ಇದ್ದರು.

ಗುರು ಪಂಡರಗೆ ಸ್ವಾಗತಿಸಿದರು. ರೇವಣಸಿದ್ದ ಜಾಡರ್‌ ನಿರೂಪಿಸಿದರು.
ಮಹೇಶ ಎಳಗುತ್ತಿ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
107 ಹೋಟೆಲ್‌ಗಳ ಮೇಲೆ ದಾಳಿ

ಬೀದರ್
107 ಹೋಟೆಲ್‌ಗಳ ಮೇಲೆ ದಾಳಿ

24 Jan, 2018

ಬೀದರ್
ಸಿರಿಧಾನ್ಯಗಳ ‘ಸೂಪ್‌’ಗೆ ಮಾರುಹೋದ ಸಾಹಿತ್ಯಾಸಕ್ತರು!

ಸಂಗಪ್ಪ ಅವರು 500 ಲೋಟಗಳಷ್ಟು ಸಿರಿಧಾನ್ಯಗಳ ಗಂಜಿ ಸಿದ್ಧಪಡಿಸಿಕೊಂಡು ಬಂದಿದ್ದರು. ಮಳಿಗೆ ಮೇಲೆ ‘ಸಿರಿಧಾನ್ಯಗಳ ಸೂಪ್‌ (ಗಂಜಿ)’ ಲಭ್ಯ ಇದೆ ಎಂದು ಬರೆಸಿದ್ದರು.

24 Jan, 2018
ವಚನ ಸಾಹಿತ್ಯದ ಚಳವಳಿ ವಿಶ್ವಕ್ಕೆ ಮಾದರಿ

ಬೀದರ್‌
ವಚನ ಸಾಹಿತ್ಯದ ಚಳವಳಿ ವಿಶ್ವಕ್ಕೆ ಮಾದರಿ

24 Jan, 2018

ಇಂಡಿ
ಭೀಮಾತೀರದ ಪ್ರಕರಣಗಳಿಗೆ ಅನಕ್ಷರತೆ ಕಾರಣ

ಭೀಮಾತೀರ ಮತ್ತು ಗಡಿ ಭಾಗದಲ್ಲಿ ಅಫರಾದ ಪ್ರಕರಣಗಳು ಸಂಭವಿಸಲು ಅನಕ್ಷರತೆ ಮೂಲ ಕಾರಣ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಅಲೋಕಕುಮಾರ ಹೇಳಿದರು.

24 Jan, 2018
ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

ಕಮಲನಗರ
ಸಂಸ್ಕೃತಿ ಅರಿವಿಗೆ ಜಾನಪದ ಅಧ್ಯಯನ ಅಗತ್ಯ: ಪಟ್ಟದ್ದೇವರು

23 Jan, 2018