ವಿಡಿಯೊದಲ್ಲಿ ಕೃತ್ಯ ಸಮರ್ಥಿಸಿಕೊಂಡ ಆರೋಪಿ

ಲವ್‌ ಜಿಹಾದ್? ವ್ಯಕ್ತಿಯ ಜೀವಂತ ದಹನ

ಲವ್ ಜಿಹಾದ್‌ನಿಂದ ಯುವತಿಯನ್ನು ರಕ್ಷಿಸುವ ಸಲುವಾಗಿ ಕೊಲೆ ಮಾಡಿದ್ದೇನೆ ಎಂದು ಸ್ವತಃ ಆರೋಪಿ ಹೇಳಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಲವ್‌ ಜಿಹಾದ್? ವ್ಯಕ್ತಿಯ ಜೀವಂತ ದಹನ

ಜೈಪುರ: ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟ ಅಮಾನವೀಯ ಘಟನೆ ರಾಜಸ್ಮಂಡ್‌ ಜಿಲ್ಲೆಯ ರಾಜ್‌ನಗರದಲ್ಲಿ ಬುಧವಾರ ನಡೆದಿದ್ದು, ಆರೋಪಿ ಶಂಭುನಾಥ್ ರಾಯ್‌ಘರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಲವ್ ಜಿಹಾದ್‌ನಿಂದ ಯುವತಿಯನ್ನು ರಕ್ಷಿಸುವ ಸಲುವಾಗಿ ಕೊಲೆ ಮಾಡಿದ್ದೇನೆ ಎಂದು ಸ್ವತಃ ಆರೋಪಿ ಹೇಳಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಂಭುನಾಥ್ ರಾಯ್‌ಘರ್‌ ಎಂಬಾತ ಮೊಹಮ್ಮದ್ ಅಫ್ರಾಜುಲ್ ಎಂಬುವವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಇದೆಲ್ಲಾ ವಿಡಿಯೊದಲ್ಲಿ ಸೆರೆಯಾಗಿದೆ.

‘ಲವ್‌ ಜಿಹಾದ್‌ನಿಂದ ಯುವತಿಯನ್ನು ಕಾಪಾಡುವ ಸಲುವಾಗಿ ಈತನನ್ನು ಸುಟ್ಟಿದ್ದೇನೆ ಎಂದು ತಾನು ಮಾಡಿರುವ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಶಂಭುನಾಥ್, ಯಾರು ಲವ್ ಜಿಹಾದ್‌ಗೆ ಯತ್ನಿಸುತ್ತಾರೋ ಅವರಿಗೆಲ್ಲಾ ಇದೇ ಶಿಕ್ಷೆ ಕಾದಿದೆ ಎಂದು ಹೇಳಿರುವ ಮಾತುಗಳು ಸೆರೆಯಾಗಿರುವುದು ವಿಡಿಯೊದಲ್ಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ನಂತರ ರಾಜಸ್ಮಂಡ್‌ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಥಳ ಪರಿಶೀಲನೆ ವೇಳೆ ಅರ್ಧ ಬೆಂದ ಮೃತದೇಹ, ಹತ್ಯೆಗೆ ಬಳಸಿದ ಕೃಷಿ ಉಪಕರಣಗಳು, ದ್ವಿಚಕ್ರ ವಾಹನ, ಚಪ್ಪಲಿಗಳು ದೊರೆತಿವೆ. ಅಲ್ಲದೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಐಜಿ ಆನಂದ್ ಶ್ರೀವಾತ್ಸವ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ತಾನದ ಗೃಹ ಸಚಿವ ಗುಲಾಬ್‌ ಚಂದ್ ಕಟಾರಿಯಾ, ‘ಇದೊಂದು ಆಘಾತಕಾರಿ ಘಟನೆ. ಈ ದುಷ್ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಲಾಗಿದೆ. ವಿಶೇಷ ತನಿಖಾ ತಂಡ ಆರೋಪಿಯ ವಿಚಾರಣೆ ನಡೆಸುತ್ತಿದೆ’ ಎಂದು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ

ಒಟ್ಟು ಆರು ಪ್ರಕರಣಗಳು
ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ

24 Jan, 2018
ಡಾರ್ವಿನ್ ಸಿದ್ಧಾಂತದ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ: ಸತ್ಯಪಾಲ್ ಸಿಂಗ್‌‍ಗೆ ಜಾವಡೇಕರ್ ಪಾಠ

'ಮಾನವ ವಿಕಾಸ' ಸಿದ್ಧಾಂತ
ಡಾರ್ವಿನ್ ಸಿದ್ಧಾಂತದ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ: ಸತ್ಯಪಾಲ್ ಸಿಂಗ್‌‍ಗೆ ಜಾವಡೇಕರ್ ಪಾಠ

24 Jan, 2018
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

ಗುರುಗ್ರಾಮದಲ್ಲಿ ಸೆಕ್ಷನ್ 144 ಜಾರಿ
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

24 Jan, 2018

ಪ್ರತಾಪಗಢ
ಉತ್ತರ ಪ್ರದೇಶ: ದಲಿತ ಬಾಲಕಿ ಸಜೀವ ದಹನ

ದೀಪ್ ಹಾಗೂ ಆತನ ತಂದೆ, ಮಿಥಾಯಿಲಾಲ್ ಎನ್ನುವವರ ಮನೆಗೆ ನುಗ್ಗಿ ಅವರ ಮಗಳು ಅಂಜು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಪ್ರಕರಣ ನಡೆದ...

24 Jan, 2018
ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

ಆದೇಶ ಮಾರ್ಪಾಡಿಗೆ ಸುಪ್ರೀಂ ಕೋರ್ಟ್‌ ನಿರಾಕರಣೆ
ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

24 Jan, 2018