ಸಖರಾಯಪಟ್ಟಣದಲ್ಲಿ ಸಮ್ಮೇಳನ: ಅಧ್ಯಕ್ಷರಾಗಿ ಓಂಕಾರಪ್ಪ ಆಯ್ಕೆ

8ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮೆರವಣಿಗೆ ಮೂಲಕ ಸಮ್ಮೇಳನ ಅಧ್ಯಕ್ಷರನ್ನು ವೇದಿಕೆಗೆ ಕರೆತರಲಾಗುವುದು. ಸ್ತಬ್ದಚಿತ್ರ ಗಳು, ಸ್ತಳೀಯ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಸಮ್ಮೇಳನದಲ್ಲಿ ಬಲ್ಲಾಳೇಶ್ವರ ಮಹಾ ಮಂಟಪ ನಿರ್ಮಾಣ ಮಾಡ ಲಾಗಿದೆ. ಅದರಲ್ಲಿ 1500 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಇದೇ 8 ಮತ್ತು 9ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕುಂದೂರು ಅಶೋಕ್ ಇಲ್ಲಿ ಬುಧವಾರ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ಅವರು ಸಮ್ಮೇಳನದ ಉದ್ಘಾಟಿಸುವರು. ಜಿಲ್ಲೆಯ ಹಿರಿಯ ಸಾಹಿತಿ ಪ್ರೊ.ಓಂಕಾರಪ್ಪ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಅರಣ್ಯವಸತಿ ಮತ್ತು ವಿಹಾರಧಾಮ ನಿಗಮ ಅಧ್ಯಕ್ಷ ಎ.ಎನ್.ಮಹೇಶ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದ ವೇದಿಕೆಗೆ ಮಹಾಕವಿ ಲಕ್ಷ್ಮೀಶ ಅವರ ಹೆಸರಿಟ್ಟಿದ್ದು, ಮೆರವಣಿಗೆ ಮೂಲಕ ಸಮ್ಮೇಳನ ಅಧ್ಯಕ್ಷರನ್ನು ವೇದಿಕೆಗೆ ಕರೆತರಲಾಗುವುದು. ಸ್ತಬ್ದಚಿತ್ರ ಗಳು, ಸ್ತಳೀಯ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಸಮ್ಮೇಳನದಲ್ಲಿ ಬಲ್ಲಾಳೇಶ್ವರ ಮಹಾ ಮಂಟಪ ನಿರ್ಮಾಣ ಮಾಡ ಲಾಗಿದೆ. ಅದರಲ್ಲಿ 1500 ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸಮ್ಮೇಳನದಲ್ಲಿ ಏಳು ಗೋಷ್ಠಿಗಳು ನಡೆಯಲಿದ್ದು, ಸ್ಥಳೀಯ ಕೃಷಿ, ನೀರಾವರಿ, ಪರಿಸರ ಸಮಸ್ಯೆ, ಭಾಷೆ, ಶಿಕ್ಷಣ, ಮಾಧ್ಯಮ ಕುರಿತು ಸಂವಾದ ಗೋಷ್ಠಿ ನಡೆಯಲಿವೆ. ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಸಾಧಕರ ಸ್ಮರಣೆ, ರಂಗಭೂಮಿ, ಜಾನಪದ ವೈಭವ, ವರ್ತಮಾನದ ತಲ್ಲಣಗಳು, ಸ್ತ್ರೀ ಸಂವೇದನೆ ಕುರಿತು ರಾಜನೀತಿ ತಜ್ಞರು ಹಾಗೂ ವಿದ್ವಾಂಸರು ಗೋಷ್ಠಿಗಳಲ್ಲಿ ವಿಚಾರ ಮಂಡಿಸಲಿದ್ದಾರೆ ಎಂದರು.

ಇದೇ 9ರಂದು ಬಹಿರಂಗ ಅಧಿವೇಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕಡೂರು ಶಾಸಕ ವೈ.ಎಸ್‌.ವಿ ದತ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ, ಸಮಾಜ ಸೇವಕಿ ಗೌರಮ್ಮ ಬಸವೇಗೌಡ, ಮುಖಂಡರಾದ ಎಸ್.ಬಿ. ಪರಮೇಶ್ವರಪ್ಪ, ಎಚ್.ಎಂ.ರೇಣುಕಾರಾಧ್ಯ ಭಾಗವಹಿಸುವರು ಎಂದರು.

ಸಾಣೇಹಳ್ಳಿ ಶಿವಸಂಚಾರ ತಂಡ ದಿಂದ ಸಮ್ಮೇಳನದ ಮೊದಲನೇ ದಿನ ‘ಚೋರ ಚರಣದಾಸ’ ಹಾಗೂ ಎರ ಡನೇ ದಿನ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನ ನಡೆಯಲಿದೆ.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ, ಚಿಕ್ಕಮ ಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಹಿರೇಮ ಗಳೂರು ಪುಟ್ಟಸ್ವಾಮಿ, ಬೆನೆಡಿಕ್ಟ್ ಜೇಮ್ಸ್, ರವಿಪ್ರಕಾಶ್, ಮಹಡಿಮನೆ ಸತೀಶ್, ವಿಜಯ್‌ಕುಮಾರ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಮೂಡಿಗೆರೆ
ಉಳಿತಾಯ ಮನೋಭಾವ ರೂಢಿಸಿಕೊಳ್ಳಿ

ಕುಟುಂಬವನ್ನು ಪ್ರಗತಿ ಯತ್ತ ಕೊಂಡೊಯ್ಯಲು ಕುಟುಂಬದ ಎಲ್ಲ ಸದಸ್ಯರು ಉಳಿತಾಯ ಮನೋಭಾವನೆ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಬಣಕಲ್‌ ಬಾಲಿಕ ಮರಿಯಾ ಚರ್ಚ್‌ ಧರ್ಮಗುರು ವಿನ್ಸೆಂಟ್‌...

18 Apr, 2018

ಚಿಕ್ಕಮಗಳೂರು
ಸ್ವತಂತ್ರವಾಗಿ ಸ್ಪರ್ಧೆ; ಪ್ರಚಾರ ಶುರು: ಶ್ರೀನಿವಾಸ್‌

‘ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿ ಪ್ರಚಾರ ಆರಂಭಿಸಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಾಮಪತ್ರ ಸಲ್ಲಿಸುತ್ತೇನೆ’ ಎಂದು ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್‌.ಶ್ರೀನಿವಾಸ್‌ ತಿಳಿಸಿದರು.

18 Apr, 2018

ಚಿಕ್ಕಮಗಳೂರು
‘ಶೃಂಗೇರಿಯಲ್ಲಿ ಕಾಂಗ್ರೆಸ್ ಪರ ಅಲೆ’

ಶೃಂಗೇರಿ ಕ್ಷೇತ್ರದ್ಯಾಂತ ಕಾಂಗ್ರೆಸ್ ಪರವಾದ ಅಲೆಯಿದೆ ಎಂದು ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

18 Apr, 2018
ಮೂಡುಬಿದಿರೆ ಬಿಜೆಪಿ ಕಚೇರಿಗೆ ಬೀಗ

ಮೂಡುಬಿದಿರೆ
ಮೂಡುಬಿದಿರೆ ಬಿಜೆಪಿ ಕಚೇರಿಗೆ ಬೀಗ

18 Apr, 2018

ಚಿಕ್ಕಮಗಳೂರು
ನಾಮಪತ್ರ ಸಲ್ಲಿಕೆ ಇಂದಿನಿಂದ

ವಿಧಾನಸಭಾ ಚುನಾವಣೆಗೆ ಇದೇ 17ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಇದೇ 24ರವರೆಗೆ ಸಲ್ಲಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಸೋಮವಾರ ತಿಳಿಸಿದರು.

17 Apr, 2018