ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17ರಂದು ಹುಣಸಗಿಗೆ ಸಿಎಂ ಭೇಟಿ

Last Updated 7 ಡಿಸೆಂಬರ್ 2017, 7:36 IST
ಅಕ್ಷರ ಗಾತ್ರ

ಹುಣಸಗಿ: ‘ಪಟ್ಟಣಕ್ಕೆ ಡಿ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಕಾರ್ಯಕ್ರಮ ಆಯೋಜನೆ ಮಾಡುವ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ, ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಸಂಸದರು ಶಹಾಪುರದಿಂದ ಹುಣಸಗಿಗೆ ಬರುತ್ತಾರೆ.

ಇಲ್ಲಿನ ಯುಕೆಪಿ ಕ್ಯಾಂಪಿನ ಪೊಲೀಸ್ ಠಾಣೆಯ ಮುಂದಿರುವ ಕೆಬಿಜೆಎನ್‌ಎಲ್ ಮೈದಾನದಲ್ಲಿ ಬೃಹತ್ ಬಹಿರಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಸುರಪುರ ಮತಕ್ಷೇತ್ರದ ಐವತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಸೂಲಪ್ಪ ಕಮತಗಿ, ನಾಗಣ್ಣ ದಂಡಿನ್, ವೆಂಕೋಬ ಯಾದವ್, ಎನ್.ಎಂ. ಬಳಿ, ಸಿದ್ದಣ್ಣ ಮಲಗಲದಿನ್ನಿ, ಆರ್.ಎಂ.ರೇವಡಿ, ಗುರುಲಿಂಗಪ್ಪ ಸಜ್ಜನ್, ಸೋಮನಗೌಡ ಅಗತೀರ್ಥ, ಬಾಪುಗೌಡ ಪಾಟೀಲ, ಸೂಗಪ್ಪ ಚಂದಾ, ಶಾಂತಣ್ಣ ದೊರೆ, ಶಾಂತಪ್ಪ ಬಾಕಲಿ, ಸಂಗನಗೌಡ ಪೊಲೀಸ್ ಪಾಟೀಲ, ಅಮರೇಶ ಬಸನಗೌಡ್ರ, ಸುರೇಶ ನೀರಲಗಿ, ನಾಗಯ್ಯ ಸ್ವಾಮಿ, ರವಿಕುಮಾರ ಮಲಗಲದಿನ್ನಿ, ಅರುಣಕುಮಾರ ಮಲಗಲದಿನ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT