ಬಂಧನ

13 ವರ್ಷದ ಹಿಂದೆ ಪತಿಯನ್ನು ಕೊಂದು ಶೌಚದ ಗುಂಡಿಯ‌ಲ್ಲಿ ಹೂತಿದ್ದ ಮಹಿಳೆ

‘ಪರೀಡಾ ವಿರುದ್ಧ ಲೈಂಗಿಕ ದರೋಡೆ ಪ್ರಕರಣಗಳು ಮಾತ್ರವಲ್ಲ, ಆಕೆಯ ಪತಿ ಸೇರಿದಂತೆ ಹಲವು ಜನರನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ’ ಎಂದು ಬೋಯಿಸರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿ ಕಿರಣ್‌ ಕಬಡಿ ತಿಳಿಸಿದ್ದಾರೆ.

13 ವರ್ಷದ ಹಿಂದೆ ಪತಿಯನ್ನು ಕೊಂದು ಶೌಚದ ಗುಂಡಿಯ‌ಲ್ಲಿ ಹೂತಿದ್ದ ಮಹಿಳೆ

ಮುಂಬೈ: 13 ವರ್ಷಗಳ ಹಿಂದೆ ಪತಿಯನ್ನು ಪತ್ನಿಯೇ ಕೊಂದು ಶೌಚದ ಗುಂಡಿಯಲ್ಲಿ ಹೂತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದಡಿಯಲ್ಲಿ ಬೋಯಿಸರ್ ಪೊಲೀಸರು 43 ವರ್ಷದ ಪರೀಡಾ ಭಾರ್ತಿ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಿ, ಮಾಹಿತಿ ಕಲೆಹಾಕಿದರು. ಇದೇ ವೇಳೆ ಗಾಂಧಿಪಾಡಾದಲ್ಲಿರುವ ಮನೆಯನ್ನು ವೇಶ್ಯಾಗೃಹವಾಗಿ ಮಾಡಿಕೊಂಡಿರುವುದು ಗೊತ್ತಾಗಿದೆ.

ಪ್ರಕರಣ ಸಂಬಂಧ ಖಚಿತ ಮಾಹಿತಿ ಆಧರಿಸಿ ಪೊಲೀಸರು ಪರೀಡಾ ಅವರ ಮನೆ ಮೇಲೆ ಮಂಗಳವಾರ ಎರಡನೆ ಬಾರಿಗೆ ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಜತೆಗೆ, ಪರೀಡಾ ಹಾಗೂ ಗ್ರಾಹಕರೊಬ್ಬರನ್ನು ಬಂಧಿಸಿದ್ದಾರೆ.

ಇದೆ ವೇಳೆ ಪರೀಡಾ ಅವರನ್ನು ವಿಚಾರಣೆ ನಡೆಸಿದಾಗ 13 ವರ್ಷಗಳ ಹಿಂದೆ ಪತಿ ಸಾಹದೇವ್‌(30)ನನ್ನು ಕೊಲೆ ಮಾಡಿ ಶೌಚದ ಗುಂಡಿಯಲ್ಲಿ ಹೂತಿರುವುದಾಗಿ ತಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಪರೀಡಾ ವಿರುದ್ಧ ಲೈಂಗಿಕ ದರೋಡೆ ಪ್ರಕರಣಗಳು ಮಾತ್ರವಲ್ಲ, ಆಕೆಯ ಪತಿ ಸೇರಿದಂತೆ ಹಲವು ಜನರನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ’ ಎಂದು ಬೋಯಿಸರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿ ಕಿರಣ್‌ ಕಬಡಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದು ಬುಧವಾರ ಸಾಹದೇವ್‌ ಅವರ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದೇವೆ. ಪತಿ ನಿದ್ದೆ ಮಾಡುವಾಗ ಹೊಡೆದು ಕೊಲೆ ಮಾಡಿರುವುದಾಗಿ ಫರೀಡಾ ಒಪ್ಪಿಕೊಂಡಿದ್ದಾರೆ. ಆದರೆ, ಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಕಬಡಿ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ: ನ್ಯಾಯ ಒದಗಿಸುವಂತೆ ಮನವಿ

ರಾಯಬರೇಲಿ
ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ: ನ್ಯಾಯ ಒದಗಿಸುವಂತೆ ಮನವಿ

23 Jan, 2018
ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

ಗುರುಗ್ರಾಮ
ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

23 Jan, 2018
ಮಿಗ್‌–21 ಯುದ್ಧವಿಮಾನ ಹಾರಿಸಲಿದ್ದಾರೆ ವನಿತೆಯರು

ನವದೆಹಲಿ
ಮಿಗ್‌–21 ಯುದ್ಧವಿಮಾನ ಹಾರಿಸಲಿದ್ದಾರೆ ವನಿತೆಯರು

23 Jan, 2018
ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ

ಶ್ವಾನ ಪ್ರಿಯರು
ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ

23 Jan, 2018
ದಲಿತ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಪ್ಪ–ಮಗ

ಲಾಲ್‌ಗಂಜ್‌
ದಲಿತ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಪ್ಪ–ಮಗ

23 Jan, 2018