ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಮಾನತೆಯ ಹರಿಕಾರ ಅಂಬೇಡ್ಕರ್'

Last Updated 7 ಡಿಸೆಂಬರ್ 2017, 10:16 IST
ಅಕ್ಷರ ಗಾತ್ರ

ಮುಂಡರಗಿ: ‘ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದವರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಮುಖರು. ಅಸ್ಪೃಶ್ಯತೆ, ಜಾತಿ ತಾರತಮ್ಯ ತೊಡೆದು ಹಾಕಲು ಅವರು ಕೈಗೊಂಡ ಕಾರ್ಯಗಳು ಶ್ಲಾಘನೀಯ’ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮಣ ತಗಡಿನಮನಿ ಹೇಳಿದರು.

ಇಲ್ಲಿನ ಹೆಸರೂರ ಕಾಲೊನಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಸ್ಪೃಶ್ಯತೆ ವಿರುದ್ಧ ಅಂಬೇಡ್ಕರ್ ಅವರು ಮಾಡಿದ ಅಹಿಂಸಾತ್ಮಕ ಹೋರಾಟ ಜಾಗತಿಕ ಮನ್ನಣೆ ಗಳಿಸಿದೆ. ದಲಿತರು ಹಾಗೂ ಹಿಂದುಳಿದವರ ಧ್ವನಿಯಾಗಿ ಅವರು ಕೈಗೊಂಡ ಕಾರ್ಯಗಳು ಎಲ್ಲರ ಮೆಚ್ಚುಗೆ ಗಳಿಸಿವೆ’ ಎಂದರು.

‘ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದೇಶದ ಅಮೂಲಾಗ್ರ ಬದಲಾವಣೆಗೆ ಕಾರಣವಾಯಿತು. ಅವರು ದೇಶದ ಯುವ ಜನತೆಗೆ ಮಾದರಿ’ ಎಂದು ಸಂತೋಷಕುಮಾರ ಮುರಡಿ ಅಭಿಪ್ರಾಯಪಟ್ಟರು.

ಪುರಸಭೆ ಸದಸ್ಯೆ ರೇಖಾ ದೇಸಾಯಿ, ಸಿ.ಕೆ.ಗಣಪ್ಪನವರ, ಶಿವು ಹೊಂಬಳಗಟ್ಟಿ, ಮಾತನಾಡಿದರು. ಮುಖ್ಯಶಿಕ್ಷಕ ಸಲೀಂ ಅಡವಿಸೋಮಾಪುರ, ಮೋಹನ ದೇಸಾಯಿ, ದೇವರಾಜ ಕಟ್ಟಿಮನಿ, ನಾಗರಾಜ ಮೋಶಲರ್, ನಿಂಗರಾಜ ಮೇಗಲಮನಿ, ಪ್ರವೀಣ ತಾಮ್ರಗುಂಡಿ, ರಾಜೂ ಬ್ಯಾಳವಾಡಗಿ, ಶಶಿ ತಂಬೂರಿ, ಈರಪ್ಪ ಹರಿಜನ ಇದ್ದರು.

ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT