ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಸರಗೋಡಿನಿಂದ ತಿರುವನಂತಪುರಕ್ಕೆ ಜಲಸಾರಿಗೆ’

ಬಂದರು ಕಚೇರಿ ಉದ್ಘಾಟಿಸಿದ ಸಚಿವ ಕಡನಪಳ್ಳಿ
Last Updated 7 ಡಿಸೆಂಬರ್ 2017, 10:19 IST
ಅಕ್ಷರ ಗಾತ್ರ

ಕಾಸರಗೋಡು: ‘ಕಾಸರಗೋಡಿನಿಂದ ತಿರುವನಂತಪುರಕ್ಕೆ ಜಲಸಾರಿಗೆ ಏರ್ಪಡಿಸಲು  ಸರ್ಕಾರ ಯೋಜನೆ ಸಿದ್ಧಪಡಿಸಿದೆ’ ಎಂದು ರಾಜ್ಯ ಬಂದರು ಸಚಿವ ಕಡನಪಳ್ಳಿ ರಾಮಚಂದ್ರನ್ ಹೇಳಿದರು.

ಇಲ್ಲಿನ ಬಂದರು ಕಚೇರಿ ಹಾಗೂ ನೌಕರರ ಕ್ವಾರ್ಟರ್ಸ್ ಅನ್ನು ಮಂಗಳವಾರ ಉದ್ಘಾಟಿಸಿ ಅವರು  ಮಾತನಾಡುತ್ತಿದ್ದರು.

'ರಾಜ್ಯದ ಎಲ್ಲಾ ಬಂದರುಗಳ ಅಭಿವೃದ್ಧಿ, ಬಂದರುಗಳ ಏಕೀಕರಣಗೊಳಿಸಲಾಗುವುದು. ಜಿಲ್ಲೆಯಲ್ಲಿ ನಿರ್ಮಾಣವಾದ ಬಂದರುಗಳಿಗೆ ದಕ್ಕೆ ನಿರ್ಮಿಸದೇ ಇರುವುದರಿಂದ ಇಲ್ಲಿ ಹಡಗು  ತಂಗಲು ಅಸಾಧ್ಯವಾಗಿದೆ. ದಕ್ಕೆ ನಿರ್ಮಾಣಕ್ಕೆ ಸರ್ಕಾರ  ಆಸ್ಯತೆ ನೀಡಲಿದೆ’ ಎಂದರು

ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸಂಸದ ಪಿ. ಕರುಣಾಕರನ್ ಮುಖ್ಯ ಅತಿಥಿಗಳಾಗಿದ್ದರು. ಕಲ್ಲಿಕೋಟೆ ಬಂದರು ಅಧಿಕಾರಿ ಕ್ಯಾಪ್ಟನ್ ಅಶ್ವಿನ್ ಪ್ರತಾಪ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT