ರೋಣ

ಕ್ಷಯರೋಗ ಪತ್ತೆ ಆಂದೋಲನಕ್ಕೆ ಚಾಲನೆ

ಸಂಪನ್ಮೂಲ ವ್ಯಕ್ತಿ ಉಮೇಶ ಕಣವಿ ಮಾತನಾಡಿ, ರೋಣ ತಾಲ್ಲೂಕಿನಲ್ಲಿ ಕ್ಷಯರೊಗ ಹರಡುವ ಸಾಧ್ಯತೆ ಇರುವ 51 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿದ್ದು, ಆ ಪ್ರದೇಶದಲ್ಲಿನ ಅಂದಾಜು 30 ಸಾವಿರ ಜನರ ಆರೋಗ್ಯ ತಪಾಸಣೆ ನಡೆಸಲಾಗುವುದು. ಈ ವೇಳೆ ಕ್ಷಯರೋಗಿಗಳು ಪತ್ತೆಯಾದರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದರು.

ರೋಣ: ಪಟ್ಟಣದ ಬಾಬು ಜಗಜೀವನರಾಂ ನಗರದಲ್ಲಿ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಶಿವಪ್ಪ ಕರಿಲಿಂಗಣ್ಣವರ ಚಾಲನೆ ನೀಡಿದರು.

ಡಾ.ಎಂ.ಬಿ.ಪಾಟೀಲ ಮಾತನಾಡಿ, ಕ್ಷಯರೋಗ ಸೋಂಕಿತ ವ್ಯಕ್ತಿ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ, ಆತನ ಶರೀರದಲ್ಲಿ ರೋಗಾಣುಗಳು ಉಲ್ಬಣಗೊಂಡು ಆತ ಕೆಮ್ಮಿದಾಗ ಅಥವಾ ಸೀನಿದಾಗ ಹೊರ ವಾತಾವರಣಕ್ಕೆ ಸೇರಿ ಆರೋಗ್ಯವಂತ ವ್ಯಕ್ತಿಗೂ ರೋಗ ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಕ್ಷಯ ರೋಗದ ಚಿಕಿತ್ಸೆ, ಮುನ್ನೆಚ್ಚರಿಕೆಗಲ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಉಮೇಶ ಕಣವಿ ಮಾತನಾಡಿ, ರೋಣ ತಾಲ್ಲೂಕಿನಲ್ಲಿ ಕ್ಷಯರೊಗ ಹರಡುವ ಸಾಧ್ಯತೆ ಇರುವ 51 ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿದ್ದು, ಆ ಪ್ರದೇಶದಲ್ಲಿನ ಅಂದಾಜು 30 ಸಾವಿರ ಜನರ ಆರೋಗ್ಯ ತಪಾಸಣೆ ನಡೆಸಲಾಗುವುದು. ಈ ವೇಳೆ ಕ್ಷಯರೋಗಿಗಳು ಪತ್ತೆಯಾದರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದರು.

ಪುರಸಭೆ ಉಪಾದ್ಯಕ್ಷೆ ವಿದ್ಯಾ ಬಡಿಗೇರ, ಸದಸ್ಯರಾದ ಮಂಜುನಾಥ ಹಾಲಕೇರಿ, ಮುತ್ತಪ್ಪ ಬಡಿಗೇರ, ಆರೋಗ್ಯ ನಿರೀಕ್ಷಕರಾದ ಕೆ.ಆರ್.ಖಾನ್, ಬಿ.ಆರ್.ಪಾಟೀಲ, ಎಸ್.ಆರ್.ಗರಗ, ಕುಮಾರಸ್ವಾಮಿ ಹಿರೇಮಠ, ಬಿ.ಆರ್.ಮಣ್ಣೇರಿ, ಎಸ್.ವಿ.ಮೇಟಿ, ಶಮ್ಸಾದ್ ಡಾಲಾಯತ, ರಾಜೇಶ ಜಾಲಿಹಾಳ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮತದಾನ ಜಾಗೃತಿ; ಟಾಂಗಾ ಏರಿದ ಡಿಸಿ

ಗದಗ
ಮತದಾನ ಜಾಗೃತಿ; ಟಾಂಗಾ ಏರಿದ ಡಿಸಿ

25 Apr, 2018

ರೋಣ
ರೋಣ: ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ

ಬಾದಾಮಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ರೋಣ ಮಾರ್ಗದಿಂದ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೋಣ ಪಟ್ಟಣದ ಸೂಡಿ ವೃತ್ತದಲ್ಲಿ ಶಾಸಕ ಜಿ.ಎಸ್.ಎಸ್...

25 Apr, 2018
ಅಕ್ರಮಗಳ ತಾಣವಾದ ಆಶ್ರಯ ಮನೆ

ನರೇಗಲ್
ಅಕ್ರಮಗಳ ತಾಣವಾದ ಆಶ್ರಯ ಮನೆ

25 Apr, 2018

ಗದಗ
ಮೆರವಣಿಗೆ; ಅಭ್ಯರ್ಥಿಗಳ ಬಲ ಪ್ರದರ್ಶನ

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸೇರಿದಂತೆ 13 ಅಭ್ಯರ್ಥಿಗಳು ಮಂಗಳವಾರ ಗದಗ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಇದರ ಭಾಗವಾಗಿ ಆಯಾ ಪಕ್ಷಗಳ...

25 Apr, 2018
ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

ಗದಗ
ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

23 Apr, 2018