ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರದಲ್ಲೊಂದು ಕಬಡ್ಡಿ ಪ್ರಯೋಗಶಾಲೆ

‘ವಿ–ಸೆವೆನ್‌ ಕ್ಲಬ್‌’ನ ಯಶೋಗಾಥೆ
Last Updated 7 ಡಿಸೆಂಬರ್ 2017, 11:32 IST
ಅಕ್ಷರ ಗಾತ್ರ

ಸಿದ್ದಾಪುರ: ಗ್ರಾಮೀಣ ಕ್ರೀಡೆ ಕಬಡ್ಡಿಯ ಸೊಗಡಿಗೆ ಕಿಂಚಿತ್ತೂ ಲೋಪವಿಲ್ಲದೇ ಕಳೆದ ಹಲವು ವರ್ಷಗಳಿಂದ ಬೆವರು ಸುರಿಸಿದ ಸಂಘಟನೆಯೊಂದು ಅಕ್ಷರಶಃ ಕಬಡ್ಡಿ ಪ್ರಯೋಗಶಾಲೆಯ ಆಗಿ ಬೆಳೆದು ನಿಂತಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಮೂಲಕ ಸಾಧನೆಗೆ ಪ್ರೇರಣೆ ನೀಡುತ್ತಿದೆ. ಅದೇ ಸಿದ್ದಾಪುರದ ವಿ–ಸೆವೆನ್ ಕ್ಲಬ್‌. ಅದರ ಯಶೋಗಾಥೆ ಇಲ್ಲಿದೆ.

ವಿಲೇಜ್ ಬೆಲ್ ಸಂಘಟನೆಯಿಂದ ಸ್ಫೂರ್ತಿ ಪಡೆದ ಯುವಕರ ತಂಡವೊಂದು ನ್ಯೂಸ್ಟಾರ್ ಎಂಬ ಯುವಕ ಸಂಘವನ್ನು ಹುಟ್ಟುಹಾಕಿತು. ಬಳಿಕ 1994ರಲ್ಲಿ ನ್ಯೂ ಸ್ಟಾರ್ ಸಂಘಟನೆಯಿಂದ ಹೊರಬಂದ 7 ಮಂದಿ ಯುವಕರು ‘ವಿ ಸೆವೆನ್’ ಎನ್ನುವ ಕಬಡ್ಡಿ ಕ್ಲಬ್‌ ಹುಟ್ಟುಹಾಕಿದರು. ಅದು ಇಂದು ಆಲದ ಮರದಂತೆ ಬೆಳೆದಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ದಾನಿಗಳ ಸಹಕಾರದಿಂದ ಕ್ಲಬ್‌ಗೆ 2000ದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಯಿತು. ಈ ಕ್ಲಬ್‌ ಮೂಲಕ ತರಬೇತಿ ಪಡೆದ ಅನೇಕ ಆಟಗಾರರು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಂಚು ಹರಿಸಿದ್ದಾರೆ. ಜತೆಗೆ, ತೀರ್ಪುಗಾರರಾಗಿ, ತರಬೇತುದಾರ ರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಷ್ಟ್ರದ ವಿವಿಧೆಡೆಗಳಲ್ಲಿ ನಡೆದ 300 ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಈ ಕ್ಲಬ್‌ನ ತಂಡವು 180 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ನಾಯಕ ಎಂ.ಎಚ್. ಮೂಸಾ ಈಚೆಗೆ ನಿವೃತ್ತಿ ಹೊಂದಿದ್ದು ಇತೀಚಿನ ದಿನಗಳವರೆಗೂ ರಾಜ್ಯದಾದ್ಯಂತ ನಡೆಯುವ ಪಂದ್ಯಾವಳಿಯಲ್ಲಿ ಅತ್ಯಂತ ಬೇಡಿಕೆಯ ಆಟಗಾರರಾಗಿದ್ದರು. ಅವರ ವೈಯಕ್ತಿಕ ಬಹುಮಾನಗಳು ಮತ್ತು ಪ್ರಶಸ್ತಿ ಪತ್ರಗಳ ಸಂಖ್ಯೆ ಐನೂರಕ್ಕೂ ಅಧಿಕ.

ಸೋಮವಾರ ಅದರ 18ನೇ ವಾರ್ಷಿಕೋತ್ಸವ ನಡೆಯಿತು.

ಈ ವೇಳೆ ಅಭಿವೃದ್ಧಿಗೆ ಶ್ರಮಿಸಿದ ಸದಸ್ಯರನ್ನು ಹಾಗೂ ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಅಧ್ಯಕ್ಷರಾಗಿ ಎಂ.ಎಚ್. ಮೂಸಾ ಬ್ಯಾರಿ, ಉಪಾಧ್ಯಕ್ಷ ಎಂ.ಆರ್. ಸಾಜನ್ ಕಾರ್ಯ ನಿರ್ವಹಿಸುತ್ತಿದ್ದಾರೆ.

-ಗುರುದರ್ಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT