ನವದೆಹಲಿ

ವಿರಾಟ್‌ ಪಡೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ವಿಶ್ವಾಸ

‘ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಉತ್ತಮ ವೇಗಿಗಳು, ಸ್ಪೀನರ್‌ಗಳಾದ(ಆರ್‌.ಅಶ್ವಿನ್‌, ಜಡೇಜ) ಆಲೌರೌಂಡರ್‌ ಹಾರ್ದಿಕ್‌ ಪಾಂಡ್ಯ ಒಳಗೊಂಡ ಭಾರತ ತಂಡ ಬಲಿಷ್ಠವಾಗಿದ್ದು, ಎದುರಾಳಿ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ’ –ಕೋಚ್‌ ರಾಹುಲ್‌ ದ್ರಾವಿಡ್‌.

ವಿರಾಟ್‌ ಪಡೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ವಿಶ್ವಾಸ

ನವದೆಹಲಿ: ಜ. 5ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಗೆಲ್ಲುವು ಸಾಧಿಸುತ್ತದೆ ಎಂದು 19 ವರ್ಷದ ವಯೋಮಾನ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಉತ್ತಮ ವೇಗಿಗಳು, ಸ್ಪೀನರ್‌ಗಳಾದ(ಆರ್‌.ಅಶ್ವಿನ್‌, ಜಡೇಜ) ಆಲೌರೌಂಡರ್‌ ಹಾರ್ದಿಕ್‌ ಪಾಂಡ್ಯ ಒಳಗೊಂಡ ಭಾರತ ತಂಡ ಬಲಿಷ್ಠವಾಗಿದ್ದು, ಎದುರಾಳಿ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ’ ಎಂದರು.

ಗುರುವಾರ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಭಾರತ ಉತ್ತಮ ಪ್ರದರ್ಶನ ತೋರಲು ಇದು ಉತ್ತಮ ಸಮಯ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ಸದ್ಯ ಭಾರತ ತಂಡ 124 ರೇಟಿಂಗ್‌ ಪಾಯಿಂಟ್ಸ್‌ ಹೊಂದಿದ್ದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಗ್ರಸ್ಥಾನದಲ್ಲಿದೆ. ಇತ್ತೀಚೆಗೆ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1–0ರಲ್ಲಿ ಸರಣಿ ಜಯ ಸಾಧಿಸಿತ್ತು.

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ಸತತ 9 ಟೆಸ್ಟ್‌ ಸರಣಿಗಳಲ್ಲಿ ಜಯ ಸಾಧಿಸಿದ ದಾಖಲೆ ಮಾಡಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಡೆಲ್ಲಿ ಡೇರ್‌ಡೆವಿಲ್ಸ್‌ ನಡುವಣ ಪಂದ್ಯ ಇಂದು

ಕೊಹ್ಲಿ–ಗಂಭೀರ್ ಮುಖಾಮುಖಿ
ರಾಯಲ್ ಚಾಲೆಂಜರ್ಸ್‌ ಬೆಂಗಳೂರು–ಡೆಲ್ಲಿ ಡೇರ್‌ಡೆವಿಲ್ಸ್‌ ನಡುವಣ ಪಂದ್ಯ ಇಂದು

21 Apr, 2018
ಐಪಿಎಲ್‌ ಅಂಗಳದ ‘ಬಿಗ್‌ ಬಾಸ್‌’ ಗೇಲ್‌

ಐಪಿಎಲ್‌ಗೆ ಕಳೆ ತುಂಬಿದ ದೈತ್ಯ
ಐಪಿಎಲ್‌ ಅಂಗಳದ ‘ಬಿಗ್‌ ಬಾಸ್‌’ ಗೇಲ್‌

21 Apr, 2018

ನವದೆಹಲಿ
ಜೂನ್‌ 1ರಿಂದ ಫುಟ್‌ಬಾಲ್‌ ಟೂರ್ನಿ

ಚೊಚ್ಚಲ ಆವೃತ್ತಿಯ ಹೀರೊ ಇಂಟರ್‌ ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಟೂರ್ನಿ ಜೂನ್‌ 1ರಿಂದ 10ರವರೆಗೆ ಮುಂಬೈನಲ್ಲಿ ನಡೆಯಲಿದೆ.

21 Apr, 2018

ಕೊಯಮತ್ತೂರು
ವಯೋ ವಂಚನೆ: ಸಂಜಯ್‌ ಅನರ್ಹ

ವಯೋ ವಂಚನೆ ಸಾಬೀತಾದ ಕಾರಣ ಫೆಡರೇಷನ್‌ ಕಪ್‌ ರಾಷ್ಟ್ರೀಯ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದ ದೂರ ಅಂತರದ ಓಟಗಾರ ಸಂಜಯ್‌ ಕುಮಾರ್‌ ಅವರನ್ನು ಅನರ್ಹಗೊಳಿಸಲಾಗಿದೆ.

21 Apr, 2018

ಸಿಡ್ನಿ
ಆಸ್ಟ್ರೇಲಿಯಾ ಕ್ರಿಕೆಟ್‌: ಸದ್ಯದಲ್ಲೇ ನೂತನ ಕೋಚ್‌ ಆಯ್ಕೆ

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನೂತನ ಕೋಚ್‌, ಏಕದಿನ ತಂಡದ ನಾಯಕ ಹಾಗೂ ಉಪನಾಯಕರ ಆಯ್ಕೆಯ ಬಗ್ಗೆ ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ...

21 Apr, 2018