ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌

ಲಂಡನ್‌ನಲ್ಲಿ ವಿಜಯ ಮಲ್ಯ ವಿಚಾರಣೆಗೆ ಹಾಜರು

ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಡಿ. 14ರ ವರೆಗೆ ವಿಚಾರಣೆ ನಡೆಯಲಿದೆ. ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸಲಿದೆ.

ಲಂಡನ್‌ನಲ್ಲಿ ವಿಜಯ ಮಲ್ಯ ವಿಚಾರಣೆಗೆ ಹಾಜರು

ಲಂಡನ್‌:‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಮಲ್ಯ ಹಾಜರಾದರು.

ಈ ಸಂಬಂಧ ಸೋಮವಾರ(ಡಿ.4) ವಿಚಾರಣೆ ಆರಂಭವಾಗಿತ್ತು. ಆದರೆ, ಅಗ್ನಿ ಅವಘಡದಿಂದಾಗಿ ವಿಚಾರಣೆಯನ್ನು ಮೊಟಕುಗೊಳಿಸಿ ಮುಂದೂಡಲಾಗಿತ್ತು. ಬೆಂಕಿ ನಂದಿಸುವ ಸಂದರ್ಭದಲ್ಲಿ ಮಲ್ಯ ಮತ್ತು ಇತರರು ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ ಆವರಣ ಹೊರಗೆ ಕಾದಿದ್ದರು.

ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಡಿ. 4ರಿಂದ 14ರ ವರೆಗೆ ವಿಚಾರಣೆ ನಡೆಯಲಿದೆ. ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸಲಿದೆ.

ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಸ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಯುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮೋದಿ–ಮರ್ಕೆಲ್ ಭೇಟಿ

ದ್ವಿಪಕ್ಷೀಯ ಮಾತುಕತೆ
ಮೋದಿ–ಮರ್ಕೆಲ್ ಭೇಟಿ

22 Apr, 2018
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

ಸುರಕ್ಷತೆ
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

22 Apr, 2018
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

ಅಣ್ವಸ್ತ್ರ ನಿಶಸ್ತ್ರೀಕರಣ ನಿರ್ಧಾರ
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

22 Apr, 2018
₹ 66 ಲಕ್ಷ ಗೆದ್ದ ಭಾರತದ ಸಂಜಾತ

ರಸಪ್ರಶ್ನೆ ಸ್ಪರ್ಧೆ
₹ 66 ಲಕ್ಷ ಗೆದ್ದ ಭಾರತದ ಸಂಜಾತ

22 Apr, 2018

ಫ್ರಾನ್ಸ್‌ ಕೋರ್ಟ್‌
ಕೈಕುಲುಕದ ಕಾರಣ ಪಾಸ್‌ಪೋರ್ಟ್‌ ನಕಾರ

ಫ್ರಾನ್ಸ್‌ ದೇಶದ ಪೌರತ್ವ ನೀಡುವ ಕಾರ್ಯಕ್ರಮದ ದಿನ ಅಧಿಕಾರಿಗಳಿಗೆ ಕೈಕುಲುಕಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿರುವ ಕ್ರಮ ಸರಿಯಾಗಿದೆ ಎಂದು...

22 Apr, 2018