‘ಫಾರ್ಚ್ಯೂನರ್‌’

ದಿಗಂತ್ ನಟನೆಯ ಹೊಸ ಸಿನಿಮಾ

ಇದು ಕೌಟುಂಬಿಕ ಸಿನಿಮಾ. ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಈಚೆಗೆ ನಡೆಯಿತು.

ಸೋನು ಗೌಡ ಮತ್ತು ದಿಗಂತ್

ವ್ಯಕ್ತಿಯು ತನ್ನಲ್ಲಿನ ಹಣ, ಅಂತಸ್ತು, ಶ್ರೀಮಂತಿಕೆಯಿಂದ ಮಾತ್ರವೇ ಪ್ರೀತಿಯನ್ನು ಪಡೆಯಲು ಆಗದು. ಬದಲಿಗೆ, ಅವನಲ್ಲಿರುವ ಗುಣ, ನಿಯತ್ತು, ಶ್ರಮದಿಂದ ಪ್ರೀತಿಯನ್ನು ಗೆಲ್ಲಲು ಎಂಬ ಸಂದೇಶ ಇರುವ ಸಿನಿಮಾ ‘ಫಾರ್ಚ್ಯೂನರ್‌’.

ಇದು ಕೌಟುಂಬಿಕ ಸಿನಿಮಾ. ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಈಚೆಗೆ ನಡೆಯಿತು.

‘ನಮ್ಮ ಕನಸುಗಳನ್ನು ಶ್ರೀಮಂತಿಕೆಯೊಂದರಿಂದಲೇ ಗೆದ್ದುಕೊಳ್ಳುವುದು ಸಾಧನೆಯಲ್ಲ. ಆದರೆ, ಕಷ್ಟ ಮತ್ತು ಪರಿಶ್ರಮದ ಮೂಲಕ ಯಶಸ್ಸು ಕಂಡುಕೊಳ್ಳುವುದು ಸಾಧನೆ. ಹಾಗೆ ಮಾಡಿದಾಗ ಬದುಕು ಕೂಡ ಸುಂದರವಾಗಿರುತ್ತದೆ’ ಎನ್ನುವ ಸಂದೇಶ ನೀಡುವ ಪಾತ್ರಕ್ಕೆ ದಿಗಂತ್ ಜೀವ ತುಂಬಿದ್ದಾರೆ. ಸೋನುಗೌಡ ಮತ್ತು ಸ್ವಾತಿ ಶರ್ಮ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ನವೀನ್‍ ಕೃಷ್ಣ, ರಾಜೇಶ್ ನಟರಂಗ, ಕಲ್ಯಾಣಿ ಅವರೂ ಈ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಮಧುಸೂದನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕತೆ ಮತ್ತು ನಿರ್ದೇಶನದ ಹೊಣೆ ಮಂಜುನಾಥ್ ಜಿ. ಅನಿವಾರ್ಯ ಅವರದ್ದು. ರಾಜೇಶ್‍, ಆನಂದ್, ಸುರೇಂದ್ರ ಗೊಲೇಚ ಅವರು ಸಿನಿಮಾಕ್ಕೆ ಹಣ ಹೂಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಬಾಲಿವುಡ್‌ನಲ್ಲಿ ಅಪ್ಪಂದಿರ ದಿನದ ಸಂಭ್ರಮ!

ಮುಂಬೈ
ಬಾಲಿವುಡ್‌ನಲ್ಲಿ ಅಪ್ಪಂದಿರ ದಿನದ ಸಂಭ್ರಮ!

18 Jun, 2018
‘ದ್ರೋಣ’ನಾದ ಶಿವಣ್ಣ

ಸಿನಿ ಸಂಕ್ಷಿಪ್ತ
‘ದ್ರೋಣ’ನಾದ ಶಿವಣ್ಣ

15 Jun, 2018
‘ತ್ರಾಟಕ’ಹಾಡುಗಳ ಬಿಡುಗಡೆ

ಹೊಸ ಸಿನಿಮಾ
‘ತ್ರಾಟಕ’ಹಾಡುಗಳ ಬಿಡುಗಡೆ

15 Jun, 2018
ಶರಣ್ಸ್ ಆಲ್ಬಮ್‌ ಬಿಡುಗಡೆ

ಉತ್ತಮ ಅನುಭವ
ಶರಣ್ಸ್ ಆಲ್ಬಮ್‌ ಬಿಡುಗಡೆ

15 Jun, 2018
ಅಮ್ಮ ಐ ಲವ್ ಯು

ಈ ವಾರ ತೆರೆಗೆ
ಅಮ್ಮ ಐ ಲವ್ ಯು

15 Jun, 2018