ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಆಕಾರದ ಕಟ್ಟಡ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಸತಿ ಮತ್ತು ವಾಣಿಜ್ಯ ಉದ್ದೇಶದಿಂದ ನಿರ್ಮಿಸಿರುವ ಈ ಗಗನಚುಂಬಿ ಕಟ್ಟಡ ಇರುವುದು ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ನಲ್ಲಿ.‌

ಅತ್ಯಾಕರ್ಷಕವಾಗಿರುವ ಈ ಕಟ್ಟಡದ ಹೆಸರು ‘ಫೊಂಟೆ ಸಿಟಿ’. ಆಫ್ರಿಕಾ ಖಂಡದಲ್ಲಿಯೇ ಅತಿ ಎತ್ತರದ ವಸತಿ ಸಮುಚ್ಛಯದ ಕಟ್ಟಡ ಎಂಬ ಗರಿಮೆ ಇದಕ್ಕಿದೆ.

1975ರಲ್ಲಿ ಇದರ ನಿರ್ಮಾಣ ಮಾಡಲಾಯಿತು. ವಾಸ್ತುಶಿಲ್ಪಿ ಮ್ಯಾನ್‌ಫ್ರೆಡ್‌ ಹರ್ಮರ್‌ ಇದರ ವಿನ್ಯಾಸ ಮಾಡಿದರು. ಈ ಕಟ್ಟಡ ಕೊಳವೆ ಆಕಾರದಲ್ಲಿರುವುದು ಇದರ ವಿಶೇಷತೆ. ಇದು ಪ್ರೇಕ್ಷಣೀಯ ಸ್ಥಳವಾಗಿಯೂ ಗುರುತಿಸಿಕೊಂಡಿದೆ.

1980 ಮತ್ತು 1990ರ ದಶಕದಲ್ಲಿ ಈ ಕಟ್ಟಡ ಅಪರಾಧ ಚಟುವಟಿಕೆಗಳ ತಾಣವಾಗಿ ಮತ್ತು ಗ್ಯಾಂಗ್‌ಸ್ಟರ್‌ಗಳ ನೆಲೆಯಾಗಿ ಖ್ಯಾತಿ ಗಳಿಸಿತ್ತು.

2001ರಲ್ಲಿ ಟ್ರಫಾಲ್ಗರ್‌ ಪ್ರಾಪರ್ಟಿಸ್‌ ಸಂಸ್ಥೆ ಇದರ ನಿರ್ವಹಣೆ ವಹಿಸಿಕೊಂಡ ನಂತರ ಹಲವು ಬದಲಾವಣೆಗಳನ್ನು ಮಾಡಿ ಸಾರ್ವಜನಿಕರು ನಿರ್ಭಯವಾಗಿ ನೆಲೆಸುವ ವಾತಾವರಣ ನಿರ್ಮಿಸಿದರು.

2007ರಲ್ಲಿ ಅಯ್ಯುಬ್ಸ್‌ ಕಂಪೆನಿ ಈ ಕಟ್ಟಡ ನಿರ್ವಹಣೆ ಹೊಣೆ ವಹಿಸಿಕೊಂಡು, ‘ನ್ಯೂ ಫೊಂಟೆ ಪ್ರಾಜೆಕ್ಟ್‌’ ಹೆಸರಿನ ಹೊಸ ಯೋಜನೆ ಆರಂಭಿಸಿತು. ಈ ಕಟ್ಟಡ ಮತ್ತಷ್ಟು ಅಭಿವೃದ್ಧಿ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT