‘ಡೆಕ್ಕನ್‌ ಹೆರಾಲ್ಡ್‌’ ನಾಟಕೋತ್ಸವ

ನಗೆಗಡಲಲ್ಲಿ ತೇಲಿಸಲಿದೆ ‘ಫನ್ನಿ ಥಿಂಗ್’

ನಿತ್ಯದ ಜೀವನದಲ್ಲಿ ಪ್ರತಿಯೊಬ್ಬರಿಗೂ ಎದುರಾಗುವ ವಿಭಿನ್ನ ಸಂದರ್ಭಗಳನ್ನು ಭಿನ್ನ ನಿರೂಪಣೆಯ ಮುಖೇನ ನಾಟಕ ಬಿಂಬಿಸುತ್ತದೆ. ಜೀವನದಲ್ಲಿ ನಾವು ಎದುರಿಸುವ ಒತ್ತಡ, ಒಂದರ ನಂತರ ಮತ್ತೊಂದರಂತೆ ಎದುರಾಗುವ ಸವಾಲುಗಳನ್ನು ಹಾಸ್ಯದ ಮೂಲಕ ಕಟ್ಟಿಕೊಡಲಿದೆ ಈ ನಾಟಕ.

‘ಫನ್ನಿ ಥಿಂಗ್ ಕಾಲ್ಡ್ ಲೈಫ್’ ನಾಟಕದ ದೃಶ್ಯ

‘ಡೆಕ್ಕನ್‌ ಹೆರಾಲ್ಡ್‌’ ನಾಟಕೋತ್ಸವದ ಭಾಗವಾಗಿ ಇಂದು (ಡಿ.8) ಸಂಜೆ 7.30ಕ್ಕೆ ಗಾಥೆ ಇನ್ಸ್‌ಸ್ಟಿಟ್ಯೂಟ್‌ನ ಮ್ಯಾಕ್ಸ್‌ ಮುಲ್ಲರ್‌ ಭವನದಲ್ಲಿ ‘ಫನ್ನಿ ಥಿಂಗ್ ಕಾಲ್ಡ್‌ ಲೈಫ್’ ನಾಟಕ ಪ್ರದರ್ಶನಗೊಳ್ಳಲಿದೆ. ಇದನ್ನು ಪ್ರಶಾಂತ್‌ ನಾಯರ್‌ ನಿರ್ದೇಶಿಸಿದ್ದಾರೆ. ತಹಟೊ ತಂಡದ ಕಲಾವಿದರು ನಾಟಕವನ್ನು ‍ಪ್ರಸ್ತುತಪಡಿಸಲಿದ್ದಾರೆ.

ನಿತ್ಯದ ಜೀವನದಲ್ಲಿ ಪ್ರತಿಯೊಬ್ಬರಿಗೂ ಎದುರಾಗುವ ವಿಭಿನ್ನ ಸಂದರ್ಭಗಳನ್ನು ಭಿನ್ನ ನಿರೂಪಣೆಯ ಮುಖೇನ ನಾಟಕ ಬಿಂಬಿಸುತ್ತದೆ. ಜೀವನದಲ್ಲಿ ನಾವು ಎದುರಿಸುವ ಒತ್ತಡ, ಒಂದರ ನಂತರ ಮತ್ತೊಂದರಂತೆ ಎದುರಾಗುವ ಸವಾಲುಗಳನ್ನು ಹಾಸ್ಯದ ಮೂಲಕ ಕಟ್ಟಿಕೊಡಲಿದೆ ಈ ನಾಟಕ.

ಒತ್ತಡದ ಜೀವನದ ನಡುವೆ ಕೆಲವೊಮ್ಮೆ ಎದುರಾಗುವ ಸುಂದರ ಅನುಭವಗಳನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ.  ಗುಲಾಬಿಯ ಪರಿಮಳವನ್ನು ಆಘ್ರಾಣಿಸುವ ವ್ಯವಧಾನವೂ ಇರುವುದಿಲ್ಲ ಎನ್ನುವುದನ್ನು ಹಾಸ್ಯದ ಮುಖೇನ ನಿರೂಪಿಸಲಾಗಿದೆ.

ಪತ್ರಿನಿತ್ಯ ಎದುರಾಗುವ ಐದು ಮುಖ್ಯ ಸನ್ನಿವೇಶಗಳನ್ನು ಇಟ್ಟುಕೊಂಡ ಕತೆ ಹೆಣೆಯಲಾಗಿದೆ. ನಾಟಕದಲ್ಲಿನ ಅನಿರೀಕ್ಷಿತ ತಿರುವುಗಳಗೆ ಜೀವ ತುಂಬುವ ಪಾತ್ರದಾರಿಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ. ತಮಾಷೆಯಿಂದ ಕೂಡಿರುವ ನಿರೂಪಣೆ ಪ್ರೇಕ್ಷಕರ ಮನಸಿಗೆ ಮುದ ನೀಡುತ್ತದೆ. ಆಧುನಿಕ ಒತ್ತಡದ ಜೀವನವನ್ನು ತಣ್ಣಗೆ ವಿಡಂಬಿಸುವಲ್ಲಿಯೂ ನಾಟಕ ಯಶಸ್ವಿಯಾಗಲಿದೆ.

ನಾಟಕದ ನಿರ್ದೇಶಕ ಪ್ರಶಾಂತ ನಾಯರ್ ಕೂಡ ನಾಟಕದಲ್ಲಿ ಅಭಿನಯಿಸಿದ್ದಾರೆ. ಪಿಯೂಷ್‌ ಅಗರ್ವಾಲ್, ಕಲ್ಯಾಣಿ ಕುಮಾರ್, ಆರ್.ಜೆ.ಜಿಮ್ಮಿ ರಂಗದ ಮೇಲೆ ಪಾತ್ರಗಳಿಗೆ ಜೀವತುಂಬಲಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಸಿಗಲಿ ತಲೆಎತ್ತಿ ನಡೆಯುವ ಪಾಠ

ಹೆಣ್ಣು ಮಗು ದಿನ
ಸಿಗಲಿ ತಲೆಎತ್ತಿ ನಡೆಯುವ ಪಾಠ

24 Jan, 2018
ಹೆಣ್ಣೇ ಹೊನ್ನು ಎಂದವರು...

ಮೆಟ್ರೋ
ಹೆಣ್ಣೇ ಹೊನ್ನು ಎಂದವರು...

24 Jan, 2018
ನಮ್ಮ ಬಾಲ್ಯ ಹೀಗಿತ್ತು...

ರಾಷ್ಟ್ರೀಯ ಹೆಣ್ಣು ಮಗು ದಿನ
ನಮ್ಮ ಬಾಲ್ಯ ಹೀಗಿತ್ತು...

24 Jan, 2018
ಚರಿತ್ರೆ ದಾಖಲಿಸುವ ಉದ್ಯಾನ

ಬೆಳಕು
ಚರಿತ್ರೆ ದಾಖಲಿಸುವ ಉದ್ಯಾನ

23 Jan, 2018
ಬೆಳ್ಳಿ ಪರದೆಯಲ್ಲಿ ಹಿತೇಶ್ ಕಮಾಲ್‌

ಕೋಸ್ಟಲ್‌ವುಡ್
ಬೆಳ್ಳಿ ಪರದೆಯಲ್ಲಿ ಹಿತೇಶ್ ಕಮಾಲ್‌

23 Jan, 2018