ಬಾಲಿವುಡ್‌

‘ವಿರುಷ್ಕಾ’ ಮದುವೆ ಸದ್ಯಕ್ಕಿಲ್ಲವಂತೆ!

‘ನಮ್ಮ ಮದುವೆ ಬಗ್ಗೆ ವಿರಾಟ್‌ ಹೇಳಿರುವ ಸುದ್ದಿ ಸುಳ್ಳು’ ಎಂದು, ಅನುಷ್ಕಾಳ ಮ್ಯಾನೇಜರ್‌ ಗುರುವಾರ ಬೆಳಿಗ್ಗೆ ನೀಡಿರುವ ‘ಸ್ಪಷ್ಟನೆ’ಯೇ ಇದಕ್ಕೆ ಕಾರಣ. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಟ್ವೀಟಿಗರು ಅನುಷ್ಕಾ ಮತ್ತು ವಿರಾಟ್‌ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, #Virushka ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಟ್ರೋಲುಗಳ ಮಳೆ ಸುರಿಸಿದ್ದಾರೆ.

ಅನುಷ್ಕಾ–ವಿರಾಟ್‌

ಕ್ರಿಕೆಟ್‌ ಮತ್ತು ಬಾಲಿವುಡ್‌ ಕ್ಷೇತ್ರದಲ್ಲಿ ಅತಿ ಹೆಚ್ಚು ಸುದ್ದಿ ಮಾಡಿರುವ ಜೋಡಿ ವಿರಾಟ್‌– ಅನುಷ್ಕಾ ಶರ್ಮಾ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬುದು ಬುಧವಾರದ ಬಹುಚರ್ಚಿತ ಸುದ್ದಿಯಾಗಿತ್ತು. ಇದರಿಂದ ಆನಂದತುಂದಿಲರಾಗಿದ್ದ ಇಬ್ಬರ ಅಭಿಮಾನಿಗಳು ಗುರುವಾರ ಬೆಳಿಗ್ಗೆಯೇ ವಾಚಾಮಗೋರ ತರಾಟೆಗೆ ತೆಗೆದುಕೊಳ್ಳತೊಡಗಿದ್ದಾರೆ.

‘ನಮ್ಮ ಮದುವೆ ಬಗ್ಗೆ ವಿರಾಟ್‌ ಹೇಳಿರುವ ಸುದ್ದಿ ಸುಳ್ಳು’ ಎಂದು, ಅನುಷ್ಕಾಳ ಮ್ಯಾನೇಜರ್‌ ಗುರುವಾರ ಬೆಳಿಗ್ಗೆ ನೀಡಿರುವ ‘ಸ್ಪಷ್ಟನೆ’ಯೇ ಇದಕ್ಕೆ ಕಾರಣ. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಟ್ವೀಟಿಗರು ಅನುಷ್ಕಾ ಮತ್ತು ವಿರಾಟ್‌ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, #Virushka ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಟ್ರೋಲುಗಳ ಮಳೆ ಸುರಿಸಿದ್ದಾರೆ.

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಬಾಲಿವುಡ್‌ ಸುಂದರಿ ಅನುಷ್ಕಾ ಶರ್ಮಾ ಜತೆ ಪ್ರೇಮಪಾಶಕ್ಕೆ ಬಿದ್ದ ಬಳಿಕ ಸುದ್ದಿಯಾದಷ್ಟು ಕ್ರಿಕೆಟ್‌ ಕ್ಷೇತ್ರದಲ್ಲೇ ಸುದ್ದಿಯಾಗಿಲ್ಲ. ಇವರಿಬ್ಬರ ಸರಸ ಮತ್ತು ವಿರಸದ ಬಗ್ಗೆ ಓಡಾಡಿದ ಗಾಸಿಪ್‌, ಗುಲ್ಲು ಅಸಂಖ್ಯಾತ.

ಇತ್ತೀಚೆಗಷ್ಟೇ ವಿದೇಶದಲ್ಲಿ ಡೇಟಿಂಗ್‌ ಮುಗಿಸಿಕೊಂಡು ಬಂದಿದ್ದ ಈ ಜೋಡಿಯ ಮದುವೆ ಡಿಸೆಂಬರ್‌ 11ರೊಳಗೆ ಇಟಲಿಯ ಮಿಲಾನ್‌ನಲ್ಲಿ ನಡೆಯುತ್ತದೆ ಎಂದು ವಿರಾಟ್‌ ಹೇಳಿದ್ದರು. ಅಂತೂ ಇಂತೂ ಮದುವೆ ಯಾವಾಗ ಎಂಬ ಕುತೂಹಲಕ್ಕೆ ತೆರೆ ಬೀಳುತ್ತಿದೆ ಎನ್ನುವಾಗಲೇ ಅನುಷ್ಕಾ ನೀಡಿರುವ ಹೊಸ ಹೇಳಿಕೆ ಇಬ್ಬರ ಮದುವೆ ಸುದ್ದಿಗೆ ಹೊಸ ತಿರುವು ನೀಡಿದೆ. ಮತ್ತೆ ಕಾದು ನೋಡುವ ಸರದಿ ಅಭಿಮಾನಿಗಳದ್ದು.

Comments
ಈ ವಿಭಾಗದಿಂದ ಇನ್ನಷ್ಟು
ಇಂದಿನಿಂದ ವಿಜ್ಞಾನ, ಸಂಸ್ಕೃತಿ ಸಮ್ಮೇಳನ

ವಿಜ್ಞಾನ ವಿಶೇಷ
ಇಂದಿನಿಂದ ವಿಜ್ಞಾನ, ಸಂಸ್ಕೃತಿ ಸಮ್ಮೇಳನ

19 Jan, 2018
ಕಾಫಿ ಆಸಕ್ತಿಯೇ ಕಲೆಯಾಯಿತು

ಸಂದರ್ಶನ
ಕಾಫಿ ಆಸಕ್ತಿಯೇ ಕಲೆಯಾಯಿತು

19 Jan, 2018
ದೀಪಿಕಾ– ಪ್ರಭಾಸ್ ಜೋಡಿ

ಬಾಲಿವುಡ್‌
ದೀಪಿಕಾ– ಪ್ರಭಾಸ್ ಜೋಡಿ

19 Jan, 2018
101ರ ತರುಣಿಯ ಮನದ ಮಾತು

ಸಂದರ್ಶನ
101ರ ತರುಣಿಯ ಮನದ ಮಾತು

19 Jan, 2018
ಮರ–ಮನುಷ್ಯ ಸಂಬಂಧ

ಸಂಪೂರ್ಣ ಮಾಹಿತಿ
ಮರ–ಮನುಷ್ಯ ಸಂಬಂಧ

19 Jan, 2018