‘ರಾಮನ ಧರ್ಮ’...?

ರಾಮನ ಅಸ್ತಿತ್ವದ ಬಗ್ಗೆ ಸಿ.ಎಸ್‌. ದ್ವಾರಕಾನಾಥ್ ಪ್ರಶ್ನಿಸಿದ್ದು (ಪ್ರ.ವಾ., ಡಿ. 7) ವಿವೇಕವಲ್ಲ.

ರಾಮನ ಅಸ್ತಿತ್ವದ ಬಗ್ಗೆ ಸಿ.ಎಸ್‌. ದ್ವಾರಕಾನಾಥ್ ಪ್ರಶ್ನಿಸಿದ್ದು (ಪ್ರ.ವಾ., ಡಿ. 7) ವಿವೇಕವಲ್ಲ.

‘ರಾಮ’ ಎನ್ನುವ ಪಾತ್ರ ಇತಿಹಾಸದಲ್ಲಿ ಲುಪ್ತವಾಗಿರಬಹುದಾದರೂ, ದೇಶದ ಬಹುಸಂಖ್ಯಾತರ ಆದರ್ಶ ಮತ್ತು ಮೌಲ್ಯಗಳ ಸಂಕೇತವಾಗಿ ಆ ಪರಿಕಲ್ಪನೆಗೆ ಅಸ್ತಿತ್ವ ಉಂಟು. ಆದರೆ ‘ರಾಮಧರ್ಮ’ ಎಂಬುದೊಂದು ದೇಶದಲ್ಲಿ ಪ್ರಚಾರದಲ್ಲಿಲ್ಲ. ಇದು ಏಕೆ ಎಂದು ಪ್ರಶ್ನಿಸುವ ಸಾಧ್ಯತೆ ಇಲ್ಲಿರುವಂತೆ ‘ಇಸ್ಲಾಂ’ ಎಂಬ ಧರ್ಮದಲ್ಲಿಲ್ಲ!

ಇಲ್ಲಿ, ರಾಮ, ಕೃಷ್ಣ, ಕಾಳಿ, ರುದ್ರ, ವೀರಭದ್ರ ಇತ್ಯಾದಿ ನಾನಾ ದೈವತ್ವಗಳು, ಒಂದೊಂದು ಬಾರಿ ಒಂದೊಂದು ಮಿಕ್ಕೆಲ್ಲವುಗಳಿಗಿಂತ ಮಿಗಿಲಾಗುವ ವಿರೋಧಾಭಾಸವೂ ಇಲ್ಲುಂಟು. ಒಂದೊಂದು ಗುಂಪು ಒಂದೊಂದು ಆಚಾರವನ್ನು ತಮ್ಮದೆಂದು ಸ್ವೀಕರಿಸಿ, ಮಿಕ್ಕೆಲ್ಲವನ್ನೂ ನಿಕೃಷ್ಟವಾಗಿ ಕಾಣುವುದೂ ಸಾಮಾನ್ಯ!

ಹೆರವರ್‍ಯಾರೋ ಇದನ್ನೆಲ್ಲಾ ಸಾರಾಸಗಟಾಗಿ ‘ಹಿಂದೂ’ ಎಂದು ಕರೆದುಬಿಟ್ಟರು; ನಾವು ಅ ಹೆಸರನ್ನು ಕೈಚಾಚಿ ಸ್ವೀಕರಿಸಿದೆವು! ಒಳಗೊಂದು ಏಕಸ್ರೋತವಿದೆ ಎಂದೇನೋ ಹೇಳುತ್ತಾರೆ. ಆದರೆ ಮೇಲ್ನೋಟಕ್ಕೆ ‘ಹಿಂದೂ’ ಒಂದು ಗೊಂದಲದ ಗೂಡು. ಇಡೀ ದೇಶಕ್ಕೇ ಆ ಹೆಸರು! ಇದು ‘ಭಾರತೀಯತೆ’ಯ ದುರ್ದೈವ!

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಅರ್ಥವಿಲ್ಲದ ಎಚ್ಚರಿಕೆ

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕುರುಬ ಸಮಾಜದವರು ಮಾತ್ರ ಗೆಲ್ಲಿಸಿದರೇನು? ಸ್ವಾಮೀಜಿಗಳು ಈ ರೀತಿಯ ಹೇಳಿಕೆ ಕೊಡುವುದನ್ನು ನಿಲ್ಲಿಸದಿದ್ದರೆ ಅವರ ಮೇಲಿನ ಗೌರವ ಹೊರಟು...

25 Apr, 2018

ವಾಚಕರವಾಣಿ
ಯಾರನ್ನು ಬೆಂಬಲಿಸಲಿ?

ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕಾಂಗ್ರೆಸ್ ಮತ್ತು ಸೋಷಲಿಸ್ಟ್‌ ಪಕ್ಷಗಳ ನಡುವೆ ಹಣಾಹಣಿ ನಡೆದಿತ್ತು. ಈಗ ಅನೇಕ ಪಕ್ಷಗಳಿವೆ. ಆದರೂ ಬಡ ಬೋರೇಗೌಡನ ಬದುಕು ಸುಧಾರಿಸಿಲ್ಲ. ...

24 Apr, 2018

ವಾಚಕರವಾಣಿ
ಎತ್ತಿಗೆ ಜ್ವರ, ಎಮ್ಮೆಗೆ ಬರೆ!

ಚುನಾವಣಾ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದಿರುವ ಆಕಾಂಕ್ಷಿಗಳು ಮತ್ತು ಅವರ ಹಿಂಬಾಲಕರು ರಸ್ತೆ ತಡೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟುಮಾಡುವುದು, ಧರಣಿ ಮುಂತಾದ...

24 Apr, 2018

ವಾಚಕರವಾಣಿ
ಆಕಾಂಕ್ಷೆ ಮತ್ತು ಬದ್ಧತೆ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ‘ಕರುನಾಡ ಜಾಗೃತಿಯಾತ್ರೆ’ಯಲ್ಲಿ ಬಿಜೆಪಿ ಪ್ರಣಾಳಿಕೆಗೆ ಸಾಹಿತಿಗಳು ನೀಡಿದ ಸಲಹೆಗಳು ದುಂಡು ಮೇಜು ಪರಿಷತ್ತಿನ ಗಾಂಧಿ ಮತ್ತು ಅಂಬೇಡ್ಕರ್‌...

24 Apr, 2018

ವಾಚಕರವಾಣಿ
ಗಳಿಕೆಯ ದಾರಿ ತೋರಿಸಿ!

2013ರ ಚುನಾವಣೆಯಲ್ಲಿ ಶಿವಕುಮಾರರ ಆಸ್ತಿ ₹ 251 ಕೋಟಿ ಇದ್ದದ್ದು, 2018ರಲ್ಲಿ ₹ 840 ಕೋಟಿಗೆ ಏರಿದೆ.

24 Apr, 2018