ಬೆಂಗಳೂರು

ಟಿಪ್ಪು, ಸಿದ್ದರಾಮಯ್ಯ ಚಿತ್ರ ವಿರೂಪ: ಆರೋಪಿಗೆ ನಿರೀಕ್ಷಣಾ ಜಾಮೀನು

ಟಿಪ್ಪು ಸುಲ್ತಾನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊಗಳನ್ನು ವಿರೂಪಗೊಳಿಸಿ ‘ಫೇಸ್‌ಬುಕ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಯೋಗೀಶ್ ಪ್ರಭು ಎಂಬುವರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಬೆಂಗಳೂರು: ಟಿಪ್ಪು ಸುಲ್ತಾನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊಗಳನ್ನು ವಿರೂಪಗೊಳಿಸಿ ‘ಫೇಸ್‌ಬುಕ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಯೋಗೀಶ್ ಪ್ರಭು ಎಂಬುವರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಈ ಕುರಿತು ಯೋಗೀಶ್ ಪ್ರಭು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬೂದಿಹಾಳ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ಪುರಸ್ಕರಿಸಿದೆ.

‘ಯೋಗೇಶ್‌ ಪ್ರಭು 2017ರ ಅಕ್ಟೋಬರ್ 26ರಂದು ಟಿಪ್ಪು ಮತ್ತು ಸಿದ್ದರಾಮಯ್ಯನವರ ವಿರೂಪಗೊಳಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿ ಯು.ಟಿ.ತೌಸೀಫ್‌ ಎಂಬುವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

ಕುಟುಂಬ ಸದಸ್ಯರೊಡನೆ ಮಾತುಕತೆ
ದೀಪಕ್ ರಾವ್ ಮನೆಗೆ ದೇವೇಗೌಡ ಭೇಟಿ

22 Jan, 2018
ನಂಜನಗೂಡು: ಬೋನಿಗೆ ಬಿದ್ದ ಚಿರತೆ

ಅರಣ್ಯ ಇಲಾಖೆ ಕಾರ್ಯಾಚರಣೆ
ನಂಜನಗೂಡು: ಬೋನಿಗೆ ಬಿದ್ದ ಚಿರತೆ

22 Jan, 2018
ಕುವೆಂಪು ‘ಜ್ಞಾನಪೀಠ‘ಕ್ಕೆ ಪ್ರಭುಶಂಕರರ ಕೀಟಲೆ

ಹೆಗ್ಗೋಡಿನಲ್ಲಿ ಕಾರಂತರಿಗೆ ಕಂಡ ಮಾನವವಿಕಾಸದ ಸಾಕ್ಷಿ ನೆನಪಿಸಿದ ಸಾಹಿತ್ಯ ಸಂಭ್ರಮ
ಕುವೆಂಪು ‘ಜ್ಞಾನಪೀಠ‘ಕ್ಕೆ ಪ್ರಭುಶಂಕರರ ಕೀಟಲೆ

22 Jan, 2018
‘ಗುತ್ತಿಗೆಯಲ್ಲಿ ಮೀಸಲಾತಿ– ಮಿತಿ ₹1 ಕೋಟಿಗೆ ಹೆಚ್ಚಳ’

ಪರಿಶಿಷ್ಟ ಜಾತಿ, ಪಂಗಡದವರಿಗೆ
‘ಗುತ್ತಿಗೆಯಲ್ಲಿ ಮೀಸಲಾತಿ– ಮಿತಿ ₹1 ಕೋಟಿಗೆ ಹೆಚ್ಚಳ’

22 Jan, 2018
ನಕಲಿ ಅಂಕಪಟ್ಟಿ ದಂಧೆಗೆ ಬೀಳಲಿದೆ ಕಡಿವಾಣ

‘ರಾಷ್ಟ್ರೀಯ ಶೈಕ್ಷಣಿಕ ಕಣಜ’ ಯೋಜನೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಭದ್ರ
ನಕಲಿ ಅಂಕಪಟ್ಟಿ ದಂಧೆಗೆ ಬೀಳಲಿದೆ ಕಡಿವಾಣ

22 Jan, 2018