ಪರಿಚಯಸ್ಥ ಸೇರಿ ಐವರಿಂದ ಕೃತ್ಯ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಯಲ್ಲಾಪುರದಲ್ಲಿರುವ ಹಳೆಯ ಕಾರ್ಖಾನೆಯೊಂದರಲ್ಲಿ ಮಂಗಳವಾರ ರಾತ್ರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಐದು ಮಂದಿ ಸೇರಿ ಈ ಕೃತ್ಯ ನಡೆಸಿದ್ದು, ಇಬ್ಬರನ್ನು ಮಹಿಳಾ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತುಮಕೂರು: ನಗರದ ಹೊರವಲಯದ ಯಲ್ಲಾಪುರದಲ್ಲಿರುವ ಹಳೆಯ ಕಾರ್ಖಾನೆಯೊಂದರಲ್ಲಿ ಮಂಗಳವಾರ ರಾತ್ರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಐದು ಮಂದಿ ಸೇರಿ ಈ ಕೃತ್ಯ ನಡೆಸಿದ್ದು, ಇಬ್ಬರನ್ನು ಮಹಿಳಾ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘17 ವರ್ಷದ ಈ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಯಲ್ಲಾಪುರದ ಹರೀಶ್ ಹಾಗೂ ಅಂತರಸನಹಳ್ಳಿಯ ಚಿದಾನಂದ್ ಎಂಬುವರನ್ನು ಬಂಧಿಸಲಾಗಿದೆ. ಮಧು, ಕೇಶವ್ ಮತ್ತು ಚಂದು ಎಂಬುವವರು ತಲೆಮರೆಸಿ
ಕೊಂಡಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರೋಪಿಗಳು ಯಲ್ಲಾಪುರ, ಅಂತರಸನಹಳ್ಳಿ, ತಿಮ್ಲಾಪುರ ಗ್ರಾಮದವರಾಗಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

(ಹರೀಶ್)

ಹರೀಶ್ ಪ್ರಮುಖ ಆರೋಪಿಯಾಗಿದ್ದು, ಈತ ಬೆಳಿಗ್ಗೆ ವೇಳೆ ಆಟೊ ಓಡಿಸುತ್ತಾನೆ. ರಾತ್ರಿ ಹೊತ್ತು ಕಾರ್ಖಾನೆ ಕಾವಲುಗಾರನಾಗಿ ಕೆಲಸ ಮಾಡುತ್ತಾನೆ.

‘ಹರೀಶ್‌ಗೂ ನನಗೂ ಪರಿಚಯ ಇತ್ತು. ಸಿನಿಮಾ ನೋಡಲು ಹೋಗೋಣ ಎಂದು ಪುಸಲಾಯಿಸಿ ತನ್ನ ಆಟೊದಲ್ಲಿ ಕರೆದುಕೊಂಡು ಹೋದ. ನಂತರ ಸ್ನೇಹಿತರೆಲ್ಲರೂ ಸೇರಿ ಅತ್ಯಾಚಾರ ನಡೆಸಿದರು’ ಎಂದು ಸಂತ್ರಸ್ತ ಬಾಲಕಿ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಗೆ ಜಿಲ್ಲಾ ಆಸ್ಪತ್ರೆಯ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆಘಾತದಿಂದ ಬಾಲಕಿ ಚೇತರಿಸಿಕೊಂಡಿದ್ದು, ಮಹಿಳಾ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

(ಚಿದಾನಂದ್)

Comments
ಈ ವಿಭಾಗದಿಂದ ಇನ್ನಷ್ಟು
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್

‘ಜಸ್ಟಿಸ್ ಫಾರ್ ಅಸೀಫಾ ಘೋಷಣೆ’
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್

22 Apr, 2018
ಸಾಮಾಜಿಕ ಮಾಧ್ಯಮಗಳಲ್ಲಿ ‘ಯಡಿಯೂರಪ್ಪ ಹಾಡು’

ಟ್ವಿಟರ್‌ನಲ್ಲಿ #YeddyScams ಟ್ರೆಂಡಿಂಗ್‌
ಸಾಮಾಜಿಕ ಮಾಧ್ಯಮಗಳಲ್ಲಿ ‘ಯಡಿಯೂರಪ್ಪ ಹಾಡು’

22 Apr, 2018
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಜಟಾಪಟಿ
ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

22 Apr, 2018
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

ಮನೆಯಂಗಳದಲ್ಲಿ ಮಾತುಕತೆ
ವಿದ್ಯಾರ್ಥಿಗಳು ತಾವೂ ಕಲಿತರು, ನನ್ನನ್ನೂ ಬೆಳೆಸಿದರು

22 Apr, 2018
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

ಸುತ್ತೋಲೆ
ಸಾಕ್ಷ್ಯ ಇಂಗ್ಲಿಷ್‌ನಲ್ಲೇ ದಾಖಲಿಸಲು ‌ಆದೇಶ

22 Apr, 2018