ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಯುವಕರಿಂದ ದೇವಾಲಯ ಪ್ರವೇಶ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪಾಂಡವಪುರ: ತಾಲ್ಲೂಕಿನ ಚಾಗಶೆಟ್ಟಹಳ್ಳಿ ಗ್ರಾಮದ ಶಂಭುಲಿಂಗೇಶ್ವರ ದೇವಾಲಯಕ್ಕೆ ಎಂ.ಬೆಟ್ಟಹಳ್ಳಿ ಗ್ರಾಮದ ದಲಿತ ಯುವಕರು ಗುರುವಾರ ಪ್ರವೇಶಿಸಿ ಪೂಜೆ ಸಲ್ಲಿಸಿದರು.

ಮುಜರಾಯಿ ಇಲಾಖೆಗೆ ಸೇರಿದ ಪುರಾತನ ಶಂಬುಲಿಂಗೇಶ್ವರ ದೇವಸ್ಥಾನ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೂ ದಲಿತರು ದೇವಾಲಯ ಪ್ರವೇಶ ಮಾಡುತ್ತಿರಲಿಲ್ಲ.

ಶಂಭುಲಿಂಗೇಶ್ವರ ಜಾತ್ರೆ ಎರಡು ವರ್ಷದಿಂದ ಸ್ಥಗಿತಗೊಂಡಿತ್ತು. ತಾಲ್ಲೂಕು ಆಡಳಿತದ ನೇತೃತ್ವದಲ್ಲಿ ಸಭೆ ಸೇರಿ ಚರ್ಚೆಯ ಬಳಿಕ ವೈಮನಸ್ಸು ಇಲ್ಲದೆ ಈ ಬಾರಿ ಜಾತ್ರೆಯೂ ಯಶಸ್ವಿಯಾಗಿ ನಡೆದಿತ್ತು.

ಕೆಲವರು ದೇಗುಲಕ್ಕೆ ದಲಿತರನ್ನು ಸೇರಿಸುತ್ತಿಲ್ಲ ಎಂದು ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ್ದರು. ಹಾಗಾಗಿ ಶ್ರೀರಂಗಪಟ್ಟಣ ಡಿವೈಎಸ್‌ಪಿ ವಿಶ್ವನಾಥ್ ನೇತೃತ್ವದಲ್ಲಿ ಎಂ.ಬೆಟ್ಟಹಳ್ಳಿ ಕೆಲ ದಲಿತ ಯುವಕರು ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ಶ್ರೀರಂಗಪಟ್ಟಣ ಗ್ರಾಮೀಣ ಠಾಣೆಯ ಪಿಎಸ್‌ಐ ಪುನೀತ್, ಲೋಹಿತ್, ದಲಿತ ಸಮಾಜದ ರವಿ, ಶಿವಕುಮಾರ್, ರತ್ನಮ್ಮ, ಮಂಜು, ಪ್ರಸನ್ನ, ದೇವರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT