ಮೈಸೂರು

ಶಾಸಕ ಸೋಮಶೇಖರ್‌ಗೆ ವಾರಂಟ್

ಮಾನಹಾನಿ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ (ಕಾಂಗ್ರೆಸ್‌) ಎಂ.ಕೆ.ಸೋಮಶೇಖರ್ ವಿರುದ್ಧ ಇಲ್ಲಿನ ಜೆಎಂಎಫ್‌ಸಿ 3ನೇ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಮೈಸೂರು: ಮಾನಹಾನಿ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ (ಕಾಂಗ್ರೆಸ್‌) ಎಂ.ಕೆ.ಸೋಮಶೇಖರ್ ವಿರುದ್ಧ ಇಲ್ಲಿನ ಜೆಎಂಎಫ್‌ಸಿ 3ನೇ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಜನಸಂಗ್ರಾಮ ಪರಿಷತ್‌ನ ಎಂ.ಸಿ.ಚಿಕ್ಕಣ್ಣ ಅವರು 2008ರಲ್ಲಿ ಸೋಮಶೇಖರ್ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸೋಮಶೇಖರ್ ಪತ್ರಿಕಾಗೋಷ್ಠಿ ನಡೆಸಿ ಚಿಕ್ಕಣ್ಣ ವಿರುದ್ಧ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ವಿರುದ್ಧ ಚಿಕ್ಕಣ್ಣ ಮಾನಹಾನಿ ಪ್ರಕರಣವನ್ನು 2009ರಲ್ಲಿ ದಾಖಲಿಸಿದ್ದರು.

ಈವರೆಗೆ 80ಕ್ಕೂ ಹೆಚ್ಚು ವಿಚಾರಣೆಗಳು ನಡೆದಿವೆ. ಡಿ. 4ರಂದು ನಡೆದ ವಿಚಾರಣೆ ಸಮಯದಲ್ಲಿ ಸೋಮಶೇಖರ್ ಹಾಗೂ ಅವರ ವಕೀಲರು ಹಾಜರಾಗದೇ ಇದ್ದುದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರುವರಿ 2ಕ್ಕೆ ಮುಂದೂಡಿದೆ.

Comments
ಈ ವಿಭಾಗದಿಂದ ಇನ್ನಷ್ಟು

ದಾವಣಗೆರೆ
ವೃದ್ಧನಿಂದ ದುಷ್ಕೃತ್ಯ

ಆರು ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ನಗರದಲ್ಲಿ ಈಚೆಗೆ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಪೋಕ್ಸೊ ಕಾಯ್ದೆಯಡಿ...

22 Apr, 2018
ಉನ್ನತ ಶಿಕ್ಷಣ ಕ್ಷೇತ್ರದ ಹೊಸ ದಿಗಂತಗಳು

ರಾಜ್ಯ
ಉನ್ನತ ಶಿಕ್ಷಣ ಕ್ಷೇತ್ರದ ಹೊಸ ದಿಗಂತಗಳು

22 Apr, 2018

ಉಡುಪಿ
ವರದಿಗಾರನ ಬಂಧನ

ಹಲ್ಲೆ ಮಾಡಿದ ಆರೋಪದ ಮೇಲೆ ‘ಫೋಕಸ್‌ ಟಿವಿ‘ ಸುದ್ದಿ ವಾಹಿನಿ ವರದಿಗಾರ ಶಿಜಿತ್ (34) ಎಂಬಾತನನ್ನು ಮಲ್ಪೆ ಠಾಣೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ...

22 Apr, 2018
ಸನ್ಯಾಸ ಸ್ವೀಕರಿಸಲಿರುವ ಪದವೀಧರೆ

ಹರಪನಹಳ್ಳಿ
ಸನ್ಯಾಸ ಸ್ವೀಕರಿಸಲಿರುವ ಪದವೀಧರೆ

22 Apr, 2018
ಮರವಂತೆಯಲ್ಲಿ ಕಡಲ್ಕೊರೆತ ಗೋಕರ್ಣದಲ್ಲಿ ಉಬ್ಬರವಿಳಿತ

ಬೈಂದೂರು
ಮರವಂತೆಯಲ್ಲಿ ಕಡಲ್ಕೊರೆತ ಗೋಕರ್ಣದಲ್ಲಿ ಉಬ್ಬರವಿಳಿತ

22 Apr, 2018