ತೀವ್ರ ಆಕ್ಷೇಪ

ಸಿಬಲ್‌ ವರ್ತನೆಗೆ ‘ಸುಪ್ರೀಂ’ ತಪರಾಕಿ

ಬಾಬರಿ ಮಸೀದಿ–ರಾಮಜನ್ಮ ಭೂಮಿ ಪ್ರಕರಣದಲ್ಲಿ ಕಪಿಲ್‌ ಸಿಬಲ್‌ ಸೇರಿದಂತೆ ಇತರ ಹಿರಿಯ ವಕೀಲರು ಮಾಡಿರುವ ವಾದ ಮತ್ತು ಆ ಸಂದರ್ಭದಲ್ಲಿ ತೋರಿದ ವರ್ತನೆ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಿಬಲ್‌ ವರ್ತನೆಗೆ ‘ಸುಪ್ರೀಂ’ ತಪರಾಕಿ

ನವದೆಹಲಿ: ಬಾಬರಿ ಮಸೀದಿ–ರಾಮಜನ್ಮ ಭೂಮಿ ಪ್ರಕರಣದಲ್ಲಿ ಕಪಿಲ್‌ ಸಿಬಲ್‌ ಸೇರಿದಂತೆ ಇತರ ಹಿರಿಯ ವಕೀಲರು ಮಾಡಿರುವ ವಾದ ಮತ್ತು ಆ ಸಂದರ್ಭದಲ್ಲಿ ತೋರಿದ ವರ್ತನೆ ಬಗ್ಗೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಜನರಲ್‌ ನಡುವಣ ಪ್ರಕರಣದಲ್ಲಿ ಬೇರೆ ವಕೀಲರ ನಡವಳಿಕೆಯ ಬಗ್ಗೆಯೂ ಅದು ಕಿಡಿ ಕಾರಿದೆ.

‘ಹಿರಿಯ ವಕೀಲರ ನಿನ್ನೆಯ (ಬುಧವಾರ) ವರ್ತನೆ ಕೆಟ್ಟದಾಗಿತ್ತು. ಅದಕ್ಕೂ ಒಂದು ದಿನ ಮೊದಲು ಇನ್ನಷ್ಟು ಕೆಟ್ಟದಾಗಿತ್ತು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಾಮೂರ್ತಿಗಳ ನ್ಯಾಯಪೀಠ ಹೇಳಿದೆ.

‘ದುರದೃಷ್ಟಕರ ಸಂಗತಿ ಎಂದರೆ, ತಾವು ನ್ಯಾಯಾಲಯದಲ್ಲಿ ಜೋರಾದ ಧ್ವನಿಯಲ್ಲಿ ಮಾತನಾಡಬಹುದು ಎಂದು ಹಿರಿಯ ವಕೀಲರ ಸಣ್ಣ ಗುಂಪೊಂದು ಭಾವಿಸಿದೆ. ಆದರೆ ಅದನ್ನು ಸಹಿಸಲು ಸಾಧ್ಯವಿಲ್ಲ... ಇದು ವಾದ ಮಾಡಲು ಮಾಹಿತಿ ಕೊರತೆ ಇರುವುದನ್ನು ಮತ್ತು ಅವರ ಅಸಾಮರ್ಥ್ಯವನ್ನು ತೋರಿಸುತ್ತದೆ. ಅಂಥವರು ಹಿರಿಯ ವಕೀಲರಾಗಲು ಅನರ್ಹರು’ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಹಿರಿಯ ವಕೀಲರು ನ್ಯಾಯಪೀಠದ ಮುಂದೆ ಅತ್ಯಂತ ಒರಟು ಪದಗಳನ್ನು ಬಳಸಿದ ಪ್ರಸಂಗಗಳು ಹಲವು ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ನಡೆದಿವೆ.

ಬಾಬರಿ ಮಸೀದಿ–ರಾಮ ಜನ್ಮ ಭೂಮಿ ಪ್ರಕರಣದ ವಿಚಾರಣೆ ವೇಳೆ ಕಪಿಲ್‌ ಸಿಬಲ್‌, ರಾಜೀವ್‌ ಧವನ್‌ ಮತ್ತು ದುಷ್ಯಂತ್‌ ದವೆ ಅವರು ಅರ್ಜಿ ವಿಚಾರಣೆ ನಡೆಸುವ ನ್ಯಾಯಾಲಯದ ತೀರ್ಮಾನವನ್ನು ಪ್ರಶ್ನಿಸಿದ್ದರು. ಜುಲೈ 2019ರವರೆಗೆ ವಿಚಾರಣೆ ಮುಂದೂ ಡಬೇಕು ಎಂದು ಒತ್ತಾಯಿಸಿದ್ದರು.

ಗುರುವಾರ, ಪಾರ್ಸಿ ಮಹಿಳೆಯರೊಬ್ಬರಿಗೆ ಧಾರ್ಮಿಕ ಹಕ್ಕುಗಳನ್ನು ನೀಡುವುದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಐವರು ನ್ಯಾಯಮೂರ್ತಿಗಳ ನ್ಯಾಯ‍ಪೀಠದ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯನ್‌, ‘ನಮ್ಮಲ್ಲಿ ಕೆಲವರು ಸರಿಯಾಗಿ ವರ್ತಿಸುತ್ತಿಲ್ಲ. ಆಂತರಿಕವಾಗಿ ಸ್ವಯಂ ನಿಯಂತ್ರಣದ ಅಗತ್ಯವಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಮ ಭಾವನೆಗಳು ನಮಗೆ ಅರ್ಥವಾಗುತ್ತದೆ. ಒಂದು ವೇಳೆ ವಕೀಲರ ಸಂಘ ಈ ಬಗ್ಗೆ ಕ್ರಮ ಕೈಗೊ ಳ್ಳದಿದ್ದರೆ, ಇಂತಹ ಬೆಳವಣಿಗೆಗಳನ್ನು ನಾವು ಬಲವಂತವಾಗಿ ನಿಯಂತ್ರಿಸ ಬೇಕಾಗುತ್ತದೆ’ ಎಂದು ಹೇಳಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಹಾದಿಯಾ-ಶಫಿನ್ ಜಹಾನ್ ವಿವಾಹ ರದ್ದು ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ವಿವಾಹ ಎಂಬುದು ಕಾನೂನು ವಿರುದ್ಧವಾದದು ಅಲ್ಲ
ಹಾದಿಯಾ-ಶಫಿನ್ ಜಹಾನ್ ವಿವಾಹ ರದ್ದು ಮಾಡಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

23 Jan, 2018
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

ಕಾನೂನು, ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರಗಳಿಗೆ ಸೂಚನೆ
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

23 Jan, 2018
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

ಆಡಿಯೊ ವೈರಲ್
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

23 Jan, 2018

'ಸುಪ್ರೀಂ' ನ್ಯಾಯಮೂರ್ತಿಗಳ ಹುದ್ದೆ
ಮಲ್ಹೋತ್ರ, ಜೋಸೆಫ್‌ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ ಇದೇ 11ರಂದು ಈ ಇಬ್ಬರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

23 Jan, 2018

ಕೋಲ್ಕತ್ತ
ಕಾಂಗ್ರೆಸ್ ಜತೆ ಮೈತ್ರಿ ಇಲ್ಲ: ಸಿಪಿಎಂ

ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೆ ಇರಲು ಸಿಪಿಎಂ ನಿರ್ಧರಿಸಿದೆ. ಭಾನುವಾರ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವಿತ ಮಸೂದೆಗೆ ವಿರುದ್ಧವಾಗಿ...

23 Jan, 2018