ಮಂಗಳೂರು

ಇಂದಿನಿಂದ ದ್ರಾಕ್ಷಾರಸ ಉತ್ಸವ

ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಶುಕ್ರವಾರದಿಂದ ಇದೇ 10ರವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.

ಕಾರವಾರದ ದ್ರಾಕ್ಷಾರಸ ಉತ್ಸವದಲ್ಲಿ ಸೇರಿರುವ ಜನರು - ಚಿತ್ರ: ಪಾಂಡುರಂಗ ಹರಿಕಂತ್ರ

ಮಂಗಳೂರು: ಕರ್ನಾಟಕ ದ್ರಾಕ್ಷಾರಸ ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಶುಕ್ರವಾರದಿಂದ ಇದೇ 10ರವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.

‘ಅಂತರರಾಷ್ಟ್ರೀಯವಾಗಿ ಗುರುತಿ ಸಿಕೊಂಡ ವೈನ್‌ಗಳ ಪ್ರದರ್ಶನ ಮತ್ತು ಮಾರಾಟ, ವೈನ್‌ ಬಳಕೆ ಉತ್ತೇಜಿಸಲು ವೈನ್‌ ಬಗ್ಗೆ ಅರಿವು ನೀಡುವ ಪ್ರಯತ್ನ, ವೈನ್‌ ತಯಾರಕರಿಗೆ ಬ್ರ್ಯಾಂಡ್‌ಗಳ ಪ್ರದರ್ಶನ ಮತ್ತು ವ್ಯಾಪಾರ ವಹಿವಾಟು ವೃದ್ಧಿಗೆ ಅವಕಾಶ, ದ್ರಾಕ್ಷಿ ಬೆಳೆ ಮತ್ತು ದ್ರಾಕ್ಷಾರಸ ವಿಚಾರ ಸಂಕಿರಣಗಳನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ’ ಎಂದು ದಾಕ್ಷಾರಸ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸರ್ವೇಶ್‌ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ವಿವಿಧೆಡೆಯಿಂದ ಮಾತ್ರವಲ್ಲದೆ ಮಹಾರಾಷ್ಟ್ರದಿಂದಲೂ ಸುಮಾರು 15 ವೈನರಿಗಳು ಭಾಗವಹಿಸಲಿವೆ. ಹಳೆಯ ವೈನ್‌ ಪ್ರದೇಶಗಳಾದ ಯುರೋಪ್‌ನ ವಿವಿಧೆಡೆಗಳ ಮತ್ತು ಹೊಸ ವೈನ್‌ ಪ್ರದೇಶ ಎಂದು ಗುರುತಿಸಿಕೊಂಡ ಆಸ್ಟ್ರೇಲಿಯ, ನ್ಯೂಜಿಲೆಂಡ್‌, ಚಿಲಿ, ಅಮೆರಿಕ ಮತ್ತು ಇತರ ದೇಶಗಳ ವೈನ್‌ಗಳ ಮಾರಾಟ ಮಾಡಲಾಗುವುದು. ಎಲ್ಲ ವೈನ್‌ ಬ್ರಾಂಡ್‌ಗಳ ಮೇಲೆ ಶೇ 10ರಷ್ಟು ರಿಯಾಯ್ತಿ ನೀಡಲಾಗುವುದು’ ಎಂದರು. ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್‌. ಆರ್‌. ನಾಯಕ್‌ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಪ್ರಯಾಣಿಕ ವಾಹನ: ಅಗ್ರ ಸ್ಥಾನದಲ್ಲಿ ಮಾರುತಿ

ಪ್ರಯಾಣಿಕ ವಾಹನ ಮಾರಾಟದಲ್ಲಿ ಮಾರುತಿ ಸುಜುಕಿ ಇಂಡಿಯಾ ಅಗ್ರ ಸ್ಥಾನದಲ್ಲಿದೆ. ಡಿಸೆಂಬರ್‌ನಲ್ಲಿ ಒಟ್ಟಾರೆ 10 ಮಾದರಿಯ ಪ್ರಯಾಣಿಕ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಅದರಲ್ಲಿ...

24 Jan, 2018
ಹೂಡಿಕೆದಾರರ ಸಂಪತ್ತು  ₹ 1 ಲಕ್ಷ ಕೋಟಿ ವೃದ್ಧಿ

ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯವೂ ಹೆಚ್ಚಳ
ಹೂಡಿಕೆದಾರರ ಸಂಪತ್ತು ₹ 1 ಲಕ್ಷ ಕೋಟಿ ವೃದ್ಧಿ

24 Jan, 2018
ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

ಟ್ರಾನ್ಸಿಷನ್ ಇಂಡಿಯಾದ ಪ್ರೀಮಿಯಂ ಸ್ಮಾರ್ಟ್‌ಫೋನ್
ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

24 Jan, 2018

ನವದೆಹಲಿ
ಷೇರು ಮಾರಾಟಕ್ಕೆ ಸರ್ಕಾರ ಒಪ್ಪಿಗೆ

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಮತ್ತು ಗೇಲ್‌ ಇಂಡಿಯಾದಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ...

24 Jan, 2018
ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

ಅಬಕಾರಿ ಸುಂಕ ಇಳಿಸಲು ಪೆಟ್ರೋಲಿಯಂ ಸಚಿವಾಲಯ ಮನವಿ
ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

24 Jan, 2018