ತೆರಿಗೆ ವ್ಯವಸ್ಥೆ

ಜಿಎಸ್‌ಟಿ: ಸಲಹಾ ಸಮಿತಿ ವರದಿ ಸಲ್ಲಿಕೆ

ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ (ಜಿಎಸ್‌ಟಿ) ಬದಲಾವಣೆಗಳನ್ನು  ಸೂಚಿಸಲು ರಚಿಸಲಾಗಿದ್ದ ಪರಿಣತರ ಸಲಹಾ ಸಮಿತಿಯು ಹಲವಾರು ಸಲಹೆಗಳನ್ನು ಒಳಗೊಂಡ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಜಿಎಸ್‌ಟಿ: ಸಲಹಾ ಸಮಿತಿ ವರದಿ ಸಲ್ಲಿಕೆ

ನವದೆಹಲಿ: ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ (ಜಿಎಸ್‌ಟಿ) ಬದಲಾವಣೆಗಳನ್ನು  ಸೂಚಿಸಲು ರಚಿಸಲಾಗಿದ್ದ ಪರಿಣತರ ಸಲಹಾ ಸಮಿತಿಯು ಹಲವಾರು ಸಲಹೆಗಳನ್ನು ಒಳಗೊಂಡ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

‘ಜಿಎಸ್‌ಟಿಯ ವಿವಿಧ ನಿಯಮಗಳನ್ನು ಸರಳಗೊಳಿಸುವ, ಸ್ವಯಂಚಾಲಿತವಾಗಿ ತೆರಿಗೆ ಮರು ಪಾವತಿ ಮಾಡುವ  ವ್ಯವಸ್ಥೆ ಜಾರಿಗೆ ಸಲಹೆಗಳನ್ನು ನೀಡಲಾಗಿದೆ’ ಎಂದು ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ ಖಂಡೇಲ್‌ವಾಲ್‌ ಹೇಳಿದ್ದಾರೆ. ಕೇಂದ್ರ ಸರ್ಕಾರ ಕಳೆದ ತಿಂಗಳು ರಚಿಸಿದ್ದ ಆರು ಸದಸ್ಯರ ಸಲಹಾ ಮಂಡಳಿಯ ಸದಸ್ಯರಲ್ಲಿ ಇವರೂ ಒಬ್ಬರಾಗಿದ್ದಾರೆ.

ತೆರಿಗೆ ಮರುಪಾವತಿ ಸ್ವಯಂಚಾಲಿತವಾಗಿರಬೇಕು,  ರಿಟನ್ಸ್‌ಗಳ ಪರಿಷ್ಕರಣೆಗೆ ಅವಕಾಶ ಇರಬೇಕು, ಇ–ವೇ ಬಿಲ್‌ ಜಾರಿಗೆ ತರುವುದನ್ನು 2019ಕ್ಕೆ ಮುಂದೂಡಬೇಕು ಎನ್ನುವುದೂ ಸೇರಿದಂತೆ 100ಕ್ಕೂ ಹೆಚ್ಚು ಸಲಹೆಗಳನ್ನು ನೀಡಲಾಗಿದೆ.

‘ವರದಿಯನ್ನು ರೆವೆನ್ಯೂ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಹೂಡುವಳಿ ತೆರಿಗೆ, ರಫ್ತು ವಹಿವಾಟು, ರಿಟರ್ನ್ಸ್‌ ಸಲ್ಲಿಕೆಗೆ ಸಂಬಂಧಿಸಿದಂತೆ ಉದ್ದಿಮೆ ವಲಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ 700ಕ್ಕೂ ಹೆಚ್ಚು ಮನವಿಗಳನ್ನು ಸಮಿತಿಗೆ ಸಲ್ಲಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ನಿಲ್ಲದ ಸೂಚ್ಯಂಕದ ಓಟ

ಉತ್ತಮ ವಹಿವಾಟು
ನಿಲ್ಲದ ಸೂಚ್ಯಂಕದ ಓಟ

22 Apr, 2018
ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

ಉತ್ಪನ್ನಗಳ ದರ ಹೆಚ್ಚಳ
ದರ ಹೆಚ್ಚಳಕ್ಕೆ ಬಾಹ್ಯ ಕಾರಣ: ಧರ್ಮೇಂದ್ರ ಪ್ರಧಾನ್‌

22 Apr, 2018
ಬ್ಯಾಂಕ್‌ ಖಾತೆಗೆ ಆಧಾರ್‌ ಕಡ್ಡಾಯ ಆರ್‌ಬಿಐ ಸ್ಪಷ್ಟನೆ

ಪ್ರಕಟಣೆ
ಬ್ಯಾಂಕ್‌ ಖಾತೆಗೆ ಆಧಾರ್‌ ಕಡ್ಡಾಯ ಆರ್‌ಬಿಐ ಸ್ಪಷ್ಟನೆ

22 Apr, 2018
‘ಸುಧಾರಣಾ ಕ್ರಮದಿಂದ ಕ್ಷಿಪ್ರ ಪ್ರಗತಿ’

ವಿಶೇಷ ಕಾರ್ಯಕ್ರಮ
‘ಸುಧಾರಣಾ ಕ್ರಮದಿಂದ ಕ್ಷಿಪ್ರ ಪ್ರಗತಿ’

22 Apr, 2018
ಟಿಸಿಎಸ್‌ ಲಾಭ ₹ 6,904 ಕೋಟಿ

ಷೇರುಪೇಟೆ
ಟಿಸಿಎಸ್‌ ಲಾಭ ₹ 6,904 ಕೋಟಿ

22 Apr, 2018