ಒಡೆಯರ್ ಕುಟುಂಬಕ್ಕೆ ಪುತ್ರ ಸಂತಾನ

ಹನುಮಗಿರಿ ಆಂಜನೇಯನಿಂದ ಶಾಪ ಮುಕ್ತಿ?

ಮೈಸೂರು ಮಹಾರಾಜ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರ ಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯನ ಕೃಪೆ ಇದೆ ಎನ್ನುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ನವೆಂಬರ್‌ 2 ರಂದು ಭೇಟಿ ನೀಡಿದ್ದ ಯದುವೀರ್‌ ಕೃಷ್ಣ ದತ್ತ ಒಡೆಯರ್‌, ವಿಶೇಷ ಪೂಜೆ ಸಲ್ಲಿಸಿದ್ದರು. (ಸಂಗ್ರಹ ಚಿತ್ರ)

ಮಂಗಳೂರು: ಮೈಸೂರು ಮಹಾರಾಜ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರ ಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯನ ಕೃಪೆ ಇದೆ ಎನ್ನುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ.

ಈ ಹಿಂದೆ ಮಹಾರಾಣಿ ಪ್ರಮೋದಾದೇವಿ ಹಾಗೂ ಪತ್ನಿ ತೃಷಿಕ ಅವರೊಂದಿಗೆ ಹನುಮಗಿರಿ ಕ್ಷೇತ್ರಕ್ಕೆ ಯದುವೀರ್‌ ಕೃಷ್ಣ ದತ್ತ ಒಡೆಯರ್‌ ಭೇಟಿ ನೀಡಿದ್ದರು. ನವೆಂಬರ್‌ 2 ರಂದು ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಯದುವೀರ್‌ ಅವರು, ಪತ್ನಿ ತೃಷಿಕಳ ಆರೋಗ್ಯ, ಪುತ್ರ ಸಂತಾನದ ವಿಚಾರವಾಗಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ಇದೀಗ ತೃಷಿಕ ಅವರಿಗೆ ಗಂಡು ಮಗು ಜನಿಸಿದ್ದು, ಒಡೆಯರ್‌ ಕುಟುಂಬಕ್ಕೆ ಇದ್ದ ಆಲಮೇಲಮ್ಮನ ಶಾಪಕ್ಕೆ ಹನುಮಗಿರಿ ಆಂಜನೇಯ ಮುಕ್ತಿ ನೀಡಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಅಧಿಕಾರಿಗಳ ವರ್ಗಾವಣೆಗೆ ನಿರ್ದೇಶನ

ಕೇಂದ್ರ ಚುನಾವಣಾ ಆಯೋಗದಿಂದ ಪತ್ರ
ಅಧಿಕಾರಿಗಳ ವರ್ಗಾವಣೆಗೆ ನಿರ್ದೇಶನ

21 Jan, 2018
ಅಡಿಗರ ನೆಪದಲ್ಲಿ ‘ಬಾಂಬು’ಗಳ ಸುರಿಮಳೆ

ಜನ್ಮ ಶತಮಾನೋತ್ಸವಕ್ಕೆ ಕವಿತೆಗಳ ಓದಿನ ಗೌರವ
ಅಡಿಗರ ನೆಪದಲ್ಲಿ ‘ಬಾಂಬು’ಗಳ ಸುರಿಮಳೆ

21 Jan, 2018

ಅಭಿವ್ಯಕ್ತಿ ಸ್ವಾತಂತ್ರ್ಯದ ಸುತ್ತ ಸಂಭ್ರಮದ ಚಿತ್ತ
‘ಸಾಕ್ಷಿ’ಯ ನೆನಪು

ಮನುಷ್ಯನ ಅಂತರಂಗದ ವಿಕಾಸಕ್ಕೆ ಸಾಹಿತ್ಯ ಒಂದೇ ಸಾಕಾಗುವುದಿಲ್ಲ. ಅದಕ್ಕೆ ಬದುಕನ್ನು ಅರಿಯುವ ಎಲ್ಲ ಜ್ಞಾನಶಾಖೆಗಳೂ ಬೇಕು ಎಂದು ಗೋಪಾಲಕೃಷ್ಣ ಅಡಿಗರು ನಂಬಿಕೊಂಡಿದ್ದರು. ಈ ನಂಬಿಕೆಗೆ...

21 Jan, 2018
ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

ಧಾರವಾಡ
ಜ್ಞಾನ ವಿಕಸನಗೊಳಿಸುವ ಶಿಕ್ಷಣನೀತಿ ಇಂದಿನ ಅಗತ್ಯ

21 Jan, 2018
ಯೋಗರಾಜ, ಯಶವಂತ ಜುಗಲಬಂದಿ

ಧಾರವಾಡ
ಯೋಗರಾಜ, ಯಶವಂತ ಜುಗಲಬಂದಿ

21 Jan, 2018