ಬೆಂಗಳೂರು

ಆದಾಯಕ್ಕಾಗಿ ಕುಡುಕರ ಜೇಬಿಗೆ ಕನ್ನ: ಎಚ್‌ಡಿಕೆ ವ್ಯಂಗ್ಯ

ಬರಿದಾಗಿರುವ ಸರ್ಕಾರದ ಬೊಕ್ಕಸ ತುಂಬಿಸಲು ಸಿದ್ದರಾಮಯ್ಯ ಸರ್ಕಾರ ಕುಡುಕರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಬೆಂಗಳೂರು: ಬರಿದಾಗಿರುವ ಸರ್ಕಾರದ ಬೊಕ್ಕಸ ತುಂಬಿಸಲು ಸಿದ್ದರಾಮಯ್ಯ ಸರ್ಕಾರ ಕುಡುಕರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

₹ 10 ಬೆಲೆಯ ಮದ್ಯಕ್ಕೆ ₹ 70 ಬೆಲೆ ಇಟ್ಟು ಸರ್ಕಾರ ಮಾರುತ್ತಿದೆ. ಮದ್ಯ ಸೇವಿಸುವ ಬಡಪಾಯಿಗಳ ಮೇಲೆ ಬೇಕಾ ಬಿಟ್ಟಿ ತೆರಿಗೆ ಹಾಕುವ ಮೂಲಕ ಪಿಕ್‌ ಪಾಕೆಟ್‌ ಮಾಡುತ್ತಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ನಾಲ್ಕು ವರ್ಷಗಳಲ್ಲಿ ಸರ್ಕಾರ ₹1.28 ಲಕ್ಷ ಕೋಟಿ ಸಾಲ ಮಾಡಿದೆ. ಈಗ ಚುನಾವಣಾ ಪ್ರಚಾರಕ್ಕೆ ಹೊರಟಿರುವ ಸರ್ಕಾರ ಕಾರ್ಯಕ್ರಮಗಳ ಆಯೋಜನೆಗೆ ಜಿಲ್ಲಾಡಳಿತದಿಂದ ನೂರಾರು ಕೋಟಿ ಟೆಂಡರ್‌ ಕರೆದಿದೆ. ಇಂತಹ ಘಟನೆ ದೇಶದಲ್ಲೇ ನಡೆದಿಲ್ಲ ಎಂದು ಅವರು ತಿಳಿಸಿದರು.

ವರ್ಷಕ್ಕೆ ₹ 500 ಕೋಟಿಗೂ ಹೆಚ್ಚು ಹಣ ಜಾಹಿರಾತಿಗೆ ಖರ್ಚು ಮಾಡುತ್ತಿದ್ದಾರೆ. ಜಾಹಿರಾತು ಕೊಟ್ಟು ಮಾಧ್ಯಮಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಚುನಾವಣೆ ಹತ್ತಿರ ಬಂದಿರುವಾಗ ಮುಖ್ಯಮಂತ್ರಿಯವರಿಗೆ ಉತ್ತರ ಕನ್ನಡದ ನೆನಪಾಗಿದೆ. ನಾಲ್ಕೂವರೆ ವರ್ಷಗಳ ಬಳಿಕ ಭಟ್ಕಳದಲ್ಲಿ ₹ 1500 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದಲ್ಲಿ 150 ಸಹಾಯಕ ಪ್ರಾಸಿಕ್ಯೂಟರ್‌ ಹುದ್ದೆ ಖಾಲಿ

ಪ್ರಕರಣಗಳ ವಿಲೇವಾರಿ ವಿಳಂಬ
ರಾಜ್ಯದಲ್ಲಿ 150 ಸಹಾಯಕ ಪ್ರಾಸಿಕ್ಯೂಟರ್‌ ಹುದ್ದೆ ಖಾಲಿ

18 Jan, 2018
ಮೂರೂ ಅಂಗಗಳಿಗಿಂತ ಮಾಧ್ಯಮ ಶಕ್ತಿಶಾಲಿ

ನಿವೃತ್ತ ನ್ಯಾಯಮೂರ್ತಿ ಎನ್‌.ಕುಮಾರ್‌ ಅಭಿಮತ
ಮೂರೂ ಅಂಗಗಳಿಗಿಂತ ಮಾಧ್ಯಮ ಶಕ್ತಿಶಾಲಿ

18 Jan, 2018

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ: ಜಿ.ಪಂ. ಅಧ್ಯಕ್ಷರ ರಾಜೀನಾಮೆ ಇಂದು

ಕಳೆದ ಒಂದು ವರ್ಷದಿಂದ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರ ‘ಪದತ್ಯಾಗ’ಕ್ಕೆ ಒತ್ತಾಯಿಸಿ ‘ಸ್ವಪ ಕ್ಷೀಯ’ರಲ್ಲೇ ಕಾಣಿಸಿಕೊಂಡ ಬಂಡಾಯದ ಬಿಸಿ ಕೊನೆಗೂ ತಣ್ಣಗಾಗಲಿಲ್ಲ.

18 Jan, 2018
ಆರೇ ತಿಂಗಳಲ್ಲಿ ಪೂರ್ಣಗೊಂಡ 30 ಕಂಬಗಳ ನಿರ್ಮಾಣ

ನಮ್ಮ ಮೆಟ್ರೊ
ಆರೇ ತಿಂಗಳಲ್ಲಿ ಪೂರ್ಣಗೊಂಡ 30 ಕಂಬಗಳ ನಿರ್ಮಾಣ

18 Jan, 2018

ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ
ಪ್ರಚೋದನಕಾರಿ ಬರಹ ಪ್ರಕಟಿಸಿದರೆ ಕ್ರಮ

‘ಕೋಮು ಭಾವನೆ ಪ್ರಚೋದಿಸುವ, ಶಾಂತಿಗೆ ಧಕ್ಕೆ ತರುವ ಪೋಸ್ಟ್‌, ಚಿತ್ರ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು...

18 Jan, 2018