ವಿಶ್ವ ಹಾಕಿ ಲೀಗ್

ಹಾಕಿ: ಸೆಮಿಫೈನಲ್‌ಗೆ ಅರ್ಜೆಂಟೀನಾ, ಜರ್ಮನಿ

ಆರಂಭದಿಂದಲೇ ಅಮೋಘ ಆಟವಾಡಿದ ಅರ್ಜೆಂಟೀನಾ ತಂಡದವರು ವಿಶ್ವ ಹಾಕಿ ಲೀಗ್ ಫೈನಲ್‌ನ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದರು. ಗುರುವಾರ ಸಂಜೆ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ತಂಡ ಬಲಿಷ್ಠ ಇಂಗ್ಲೆಂಡ್‌ ಎದುರು 3–2ರಿಂದ ಗೆದ್ದಿತು.

ಹಾಕಿ: ಸೆಮಿಫೈನಲ್‌ಗೆ ಅರ್ಜೆಂಟೀನಾ, ಜರ್ಮನಿ

ಭುವನೇಶ್ವರ: ಆರಂಭದಿಂದಲೇ ಅಮೋಘ ಆಟವಾಡಿದ ಅರ್ಜೆಂಟೀನಾ ತಂಡದವರು ವಿಶ್ವ ಹಾಕಿ ಲೀಗ್ ಫೈನಲ್‌ನ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದರು. ಗುರುವಾರ ಸಂಜೆ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ತಂಡ ಬಲಿಷ್ಠ ಇಂಗ್ಲೆಂಡ್‌ ಎದುರು 3–2ರಿಂದ ಗೆದ್ದಿತು.

ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಅರ್ಜೆಂಟೀನಾ 21ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಲೂಕಾಸ್‌ ವಿಲಾ ಚೆಂಡನ್ನು ಗುರಿ ಸೇರಿಸಿದರು. 29ನೇ ನಿಮಿಷದಲ್ಲಿ ಮಥಾಯಸ್ ಪರಡೀಸ್‌ ಗೋಲು ಗಳಿಸಿ ತಂಡದ ವಿಶ್ವಾಸ ಹೆಚ್ಚಿಸಿದರು.

ಮರುಕ್ಷಣದಲ್ಲಿ ಡೇವಿಡ್ ಕಂಡೋನ್‌ ಅವರ ಮೂಲಕ ತಿರುಗೇಟು ನೀಡಿದ ಇಂಗ್ಲೆಂಡ್‌ ಸಮಬಲ ಸಾಧಿಸಲು ಪ್ರಯತ್ನಿಸಿತು. ಆದರೆ 34ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟು ಸಂಕಷ್ಟಕ್ಕೆ ಸಿಲುಕಿತು. ಈ ಅವಕಾಶವನ್ನು ಸದುಪ ಯೋಗ ಮಾಡಿಕೊಂಡ ಜುವಾನ್ ಗಿಲಾರ್ಡಿ, ಅರ್ಜೆಂಟೀನಾ ಜಯಕ್ಕೆ ವೇದಿಕೆ ಸಿದ್ಧಗೊಳಿಸಿದರು.

ಜರ್ಮನಿಗೆ ಗೆಲುವು: ಕೊನೆಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜರ್ಮನಿ ಮತ್ತು ನೆದರ್ಲೆಂಡ್ಸ್ ತಂಡದವರು ಸಮಬಲದಿಂದ ಹೋರಾಡಿದರು.

ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ 4–3ರಿಂದ ಗೆಲುವು ಸಾಧಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದ್ದವು.

Comments
ಈ ವಿಭಾಗದಿಂದ ಇನ್ನಷ್ಟು
ತನಿಷ್ಕಾ ಜೊತೆ ಮದುವೆಯಾಗುತ್ತಿಲ್ಲ, ನಾವಿಬ್ಬರು ಒಳ್ಳೆಯ ಗೆಳೆಯರು: ಸ್ಪಷ್ಟನೆ ನೀಡಿದ ಚಾಹಲ್‌

ಬೆಂಗಳೂರು
ತನಿಷ್ಕಾ ಜೊತೆ ಮದುವೆಯಾಗುತ್ತಿಲ್ಲ, ನಾವಿಬ್ಬರು ಒಳ್ಳೆಯ ಗೆಳೆಯರು: ಸ್ಪಷ್ಟನೆ ನೀಡಿದ ಚಾಹಲ್‌

23 Apr, 2018
ವಿನೂತನ ಕೇಶ ವಿನ್ಯಾಸದಲ್ಲಿ ಎಂ.ಎಸ್‌. ದೋನಿ

‘ವೈಕಿಂಗ್’ ಸ್ಟೈಲ್‌
ವಿನೂತನ ಕೇಶ ವಿನ್ಯಾಸದಲ್ಲಿ ಎಂ.ಎಸ್‌. ದೋನಿ

23 Apr, 2018
ರಾಜಸ್ಥಾನ ರಾಯಲ್ಸ್‌ಗೆ ಜಯ

ಜೈಪುರ
ರಾಜಸ್ಥಾನ ರಾಯಲ್ಸ್‌ಗೆ ಜಯ

23 Apr, 2018

ಕ್ರೀಡೆ
ಟೆನಿಸ್‌: ವಿಶ್ವ ಗುಂಪಿಗೆ ಆಸ್ಟ್ರೇಲಿಯಾ

ಡೇರಿಯಾ ಗ್ಯಾವರಿಲೋವಾ ಅವರ ಪರಿಣಾಮ ಕಾರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ. ಇದರೊಂದಿಗೆ ವಿಶ್ವ ಗುಂಪಿಗೆ...

22 Apr, 2018
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

ಕ್ರೀಡೆ
ಕೊಪಾ ಡೆಲ್‌ ರೇ ಫುಟ್‌ಬಾಲ್‌: ಬಾರ್ಸಿಲೋನಾ ತಂಡಕ್ಕೆ ಪ್ರಶಸ್ತಿ

22 Apr, 2018