, ಕೊಹ್ಲಿ ಜತೆ ಮದುವೆ ವದಂತಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಷ್ಕಾ ಕುಟುಂಬ | ಪ್ರಜಾವಾಣಿ
ಸಿನಿ ಸುದ್ದಿ

ಕೊಹ್ಲಿ ಜತೆ ಮದುವೆ ವದಂತಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಷ್ಕಾ ಕುಟುಂಬ

ಅನುಷ್ಕಾ ತಮ್ಮ ತಂದೆ ಅಜಯ್‌ ಕುಮಾರ್, ತಾಯಿ ಅಶೀಮಾ ಮತ್ತು ಸೋದರ ಕರ್ಣೇಶ್‌ ಜತೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದರು. ಈ ವೇಳೆ ಅವರನ್ನು ಸುತ್ತುವರಿದ ಮಾಧ್ಯಮ ಪ್ರತಿನಿಧಿಗಳ ಯಾವ ಪ್ರಶ್ನೆಗಳಿಗೂ ಅನುಷ್ಕಾ ಆಗಲೀ, ಅವರ ಕುಟುಂಬ ಸದಸ್ಯರಾಗಲೀ ಉತ್ತರಿಸಲಿಲ್ಲ...

ಕೊಹ್ಲಿ ಜತೆ ಮದುವೆ ವದಂತಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅನುಷ್ಕಾ ಕುಟುಂಬ

ಮುಂಬೈ: ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿರುವ ನಡುವೆಯೇ ಅನುಷ್ಕಾ ಮತ್ತವರ ಕುಟುಂಬ ಸದಸ್ಯರು ದೊಡ್ಡ ದೊಡ್ಡ ಬ್ಯಾಗ್‌ಗಳೊಂದಿಗೆ ಗುರುವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಅನುಷ್ಕಾ ತಮ್ಮ ತಂದೆ ಅಜಯ್‌ ಕುಮಾರ್, ತಾಯಿ ಅಶೀಮಾ ಮತ್ತು ಸೋದರ ಕರ್ಣೇಶ್‌ ಜತೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದರು. ಈ ವೇಳೆ ಅವರನ್ನು ಸುತ್ತುವರಿದ ಮಾಧ್ಯಮ ಪ್ರತಿನಿಧಿಗಳ ಯಾವ ಪ್ರಶ್ನೆಗಳಿಗೂ ಅನುಷ್ಕಾ ಆಗಲೀ, ಅವರ ಕುಟುಂಬ ಸದಸ್ಯರಾಗಲೀ ಉತ್ತರಿಸಲಿಲ್ಲ.

ಸುದ್ದಿಗಾರರ ಪ್ರಶ್ನೆಗಳಿಗೆಲ್ಲಾ, ‘ಧನ್ಯವಾದ, ಧನ್ಯವಾದ’ ಎಂದಷ್ಟೇ ಹೇಳಿ ಅನುಷ್ಕಾ ವಿಮಾನ ನಿಲ್ದಾಣದೊಳಕ್ಕೆ ಹೋದರು.

ಡಿಸೆಂಬರ್‌ 12ರಂದು ಕೊಹ್ಲಿ ಮತ್ತು ಅನುಷ್ಕಾ ಇಟಲಿಯ ಮಿಲಾನ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಹೀಗಾಗಿ ಅನುಷ್ಕಾ ಕುಟುಂಬ ಇಟಲಿಗೆ ಪ್ರಯಾಣ ಬೆಳೆಸಿದೆ ಎಂಬ ಸುದ್ದಿ ಹಬ್ಬಿದೆ.

‘ಡಿಸೆಂಬರ್‌ 9ರಿಂದ ಮದುವೆಯ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅನುಷ್ಕಾ ಮತ್ತು ಕೊಹ್ಲಿ ಕೆಲವೇ ಮಂದಿ ಆಪ್ತರನ್ನಷ್ಟೇ ಮದುವೆಗೆ ಆಮಂತ್ರಿಸಿದ್ದಾರೆ. ಮದುವೆಗಾಗಿ ಪ್ರಸಾದನ ಕಲಾವಿದರು ಹಾಗೂ ಮದುವೆಯ ಛಾಯಾಗ್ರಾಹಕರನ್ನೂ ಗೊತ್ತುಮಾಡಿದ್ದಾರೆ’ ಎಂಬ ಸುದ್ದಿಗಳಿವೆ.

ಆದರೆ, ಮದುವೆಗೆ ಸಂಬಂಧಿಸಿದ ಯಾವ ಸುದ್ದಿಗಳಿಗೂ ಅನುಷ್ಕಾ– ಕೊಹ್ಲಿ ಅವರಾಗಲೀ ಅಥವಾ ಅವರ ಕುಟುಂಬ ಸದಸ್ಯರಾಗಲೀ ಪ್ರತಿಕ್ರಿಯಿಸಿಲ್ಲ. ಮದುವೆ ಸುದ್ದಿ ಕೇವಲ ವದಂತಿ ಎಂದು ಅನುಷ್ಕಾ ವಕ್ತಾರರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಶ್ರಾವ್ಯ ನಾಯಕಾರಾಧನೆ!

ನಾವು ನೋಡಿದ ಸಿನಿಮಾ
ಶ್ರಾವ್ಯ ನಾಯಕಾರಾಧನೆ!

21 Apr, 2018

ಸಿನಿ ಸಂಕ್ಷಿಪ್ತ
‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

‘ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನದಲ್ಲಿ ಎಂಟು ದಿನ ಹಾಗೂ ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ನಡೆದಿದೆ.

20 Apr, 2018
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

ಸಿನಿಮಾ
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

20 Apr, 2018
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

20 Apr, 2018
‘ಸಾಗುವ ದಾರಿಯಲ್ಲಿ’

ಈ ವಾರ ತೆರೆಗೆ
‘ಸಾಗುವ ದಾರಿಯಲ್ಲಿ’

20 Apr, 2018