ದಿನದ ನೆನಪು

ಶನಿವಾರ, 9–12–1967

ಮಹಾಜನ್ ಆಯೋಗದ ಶಿಫಾರಸುಗಳ ಬಗೆಗೆ ‘ರಾಷ್ಟ್ರೀಯ ಒಟ್ಟು ಅಭಿಪ್ರಾಯ’ ರೂಪಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ಸಮ್ಮೇಳನ ಕರೆಯುವ ಗೃಹಸಚಿವ ಚವಾಣರ ಸಲಹೆಗೆ ತಾವು ಶತಾಯ ಗತಾಯ ಒಪ್ಪಲು ಸಾಧ್ಯವೇ ಇಲ್ಲವೆಂದು ಮೈಸೂರಿನ ಎಂ.ಪಿ.ಗಳ ತಂಡವು ಇಂದು ಪ್ರಧಾನಿಗೆ ಖಂಡತುಂಡವಾಗಿ ತಿಳಿಸಿತು.

ಮಹಾಜನ್ ವರದಿ ಸರ‍್ವಪಕ್ಷ ಸಭೆ ಸಲಹೆಗೆ ಮೈಸೂರು ಎಂ.ಪಿ.ಗಳ ತಿರಸ್ಕಾರ (ನಾರಾಯಣಸ್ವಾಮಿ ಅವರಿಂದ)

ನವದೆಹಲಿ, ಡಿ. 8– ಮಹಾಜನ್ ಆಯೋಗದ ಶಿಫಾರಸುಗಳ ಬಗೆಗೆ ‘ರಾಷ್ಟ್ರೀಯ ಒಟ್ಟು ಅಭಿಪ್ರಾಯ’ ರೂಪಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ಸಮ್ಮೇಳನ ಕರೆಯುವ ಗೃಹಸಚಿವ ಚವಾಣರ ಸಲಹೆಗೆ ತಾವು ಶತಾಯ ಗತಾಯ ಒಪ್ಪಲು ಸಾಧ್ಯವೇ ಇಲ್ಲವೆಂದು ಮೈಸೂರಿನ ಎಂ.ಪಿ.ಗಳ ತಂಡವು ಇಂದು ಪ್ರಧಾನಿಗೆ ಖಂಡತುಂಡವಾಗಿ ತಿಳಿಸಿತು.

ಮೈಸೂರಿನ ಇಪ್ಪತ್ತೈದು ಮಂದಿ ಪಾರ್ಲಿಮೆಂಟ್ ಸದಸ್ಯರ ಸರ್ವಪಕ್ಷ ನಿಯೋಗವೊಂದು ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿ, ಮಹಾಜನ್ ಆಯೋಗದ ವರದಿಯನ್ನು ಮೈಸೂರು ರಾಜ್ಯ ಅಂತಿಮ ತೀರ್ಪೆಂದು ಪರಿಗಣಿಸಿ ಅದನ್ನು ಒಪ್ಪಿಕೊಳ್ಳುವುದೆಂದು ತಿಳಿಸಿತು.

*

2 ವರ್ಷದ ಪಿ.ಯು.ಸಿ.ಗೆ ಪ್ರತ್ಯೇಕ ಮಂಡಳಿ ರಚನೆ ಸರ್ಕಾರದ ಪರಿಶೀಲನೆಯಲ್ಲಿ

ಬೆಂಗಳೂರು, ಡಿ. 8– ಎರಡು ವರ್ಷದ ಪಿ.ಯು.ಸಿ. ಶಿಕ್ಷಣದ ಮೇಲ್ವಿಚಾರಣೆಗೆ ಪ್ರತ್ಯೇಕ ಮಂಡಳಿಯನ್ನು ರಚಿಸಲು ಸರ್ಕಾರ ಪರಿಶೀಲಿಸುತ್ತಿದೆಯೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

*

ದೆಹಲಿ ಪ್ರದೇಶದಲ್ಲಿ ಅಬ್ದುಲ್ಲಾ ಚಲನವಲನದ ಮೇಲಿನ ನಿರ್ಬಂಧ ರದ್ದು

ನವದೆಹಲಿ, ಡಿ. 8– ಕೇಂದ್ರಾಡಳಿತ ದೆಹಲಿ ಪ್ರದೇಶದೊಳಗೆ ಯಾವ ನಿರ್ಬಂಧವೂ ಇಲ್ಲದೆ ಓಡಾಡುವುದಕ್ಕೆ ಷೇಕ್ ಅಬ್ದುಲ್ಲಾ ಅವರಿಗೆ ಅವಕಾಶ ನೀಡುವ ಆಜ್ಞೆ ಹೊರಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆಯೆಂದು ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸೋಮವಾರ, 22–1–1968

50 ವರ್ಷಗಳ ಹಿಂದೆ
ಸೋಮವಾರ, 22–1–1968

22 Jan, 2018

ದಿನದ ನೆನಪು
ಭಾನುವಾರ, 21–1–1968

ಕಾಶ್ಮೀರದ ವಿಮೋಚನೆಗೆ ಪಾಕಿಸ್ತಾನದ ಮಿಲಿಟರಿ ಶಕ್ತಿಯನ್ನು ಅವಲಂಬಿಸಿರುವುದರಿಂದ ರಕ್ಷಣಾ ಪಡೆಗಳನ್ನು ಬಲಪಡಿಸುವುದೇ ಪಾಕಿಸ್ತಾನದ ಮುಖ್ಯ ಕರ್ತವ್ಯವಾಗಿದೆ ಎಂದು ಪಶ್ಚಿಮ ಪಾಕಿಸ್ತಾನದ ಗವರ್ನರ್ ಜ. ಮೂಸಾ...

21 Jan, 2018

ದಿನದ ನೆನಪು
ಶನಿವಾರ, 20–1–1968

ಭೂಮ್ಯಂತರ್ಗತ ಅಣುಸ್ಫೋಟ ಪ್ರಯೋಗವನ್ನು ಅಮೆರಿಕವು ನಡೆಸಿದೆ. ಇದರಿಂದ ವಾತಾವರಣದಲ್ಲಿ ಅಣು ವಿಕಿರಣ ಕ್ರಿಯೆ ತಲೆದೋರಿದೆಯೆಂದು ಅಣು ಶಕ್ತಿ ಆಯೋಗ ನಿನ್ನೆ ತಿಳಿಸಿತು.

20 Jan, 2018

50 ವರ್ಷಗಳ ಹಿಂದೆ
ಗುರುವಾರ, 18–1–1968

ಕಛ್‌ನ ರಣ್ ಪ್ರದೇಶ ಕುರಿತ ತ್ರಿಸದಸ್ಯ ನ್ಯಾಯಮಂಡಲಿ ತೀರ್ಪು ಭಾರತಕ್ಕೆ ವಿರುದ್ಧವಾಗಿರಬಹುದೆಂಬ ಕಳವಳಕಾರಕ ಸುದ್ದಿ ಜಿನೀವಾದಿಂದ ಬಂದಿದೆ.

18 Jan, 2018

50 ವರ್ಷಗಳ ಹಿಂದೆ
ಬುಧವಾರ, 17–1–1968

ಸಿಸಿಲಿಯಲ್ಲಿ ಭಾನುವಾರ ಮತ್ತು ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕೊನೆಯಪಕ್ಷ 600 ಮಂದಿ ಸತ್ತಿದ್ದಾರೆಂದು ಇಟಲಿ ಸರ್ಕಾರದ ವೃತ್ತಗಳು ತಿಳಿಸಿವೆ.

17 Jan, 2018