ವಾರೆಗಣ್ಣು

ಟಾಟಾ–ಬಿರ್ಲಾ ಗಪ್‌ ಕೂತವ್ರೇ!

‘ಎಂ.ಬಿ. ಗೌಡ್ರೇ... ನಿಮ್‌ ರೊಕ್ಕದ ಸೊಕ್ಕು ಹೆಚ್ಚಾಗೈತಿ. ಒಂದ್‌ ಮಾತ್‌ ನೆನಪಲ್ಲಿಡ್ರೀ. ದೇಶದ ಆಗರ್ಭ ಶ್ರೀಮಂತರು ಎನಿಸಿಕೊಂಡಿದ್ದ ಟಾಟಾ, ಬಿರ್ಲಾ ಅಂತಹವರೇ ಗಪ್‌ ಕೂತವ್ರೇ. ನಿಮ್ದು ಇನ್ನೆಷ್ಟ್‌ ದಿನ ನಡೆಯುತ್ತೆ...’

ವಿಜಯಪುರ: ‘ಎಂ.ಬಿ. ಗೌಡ್ರೇ... ನಿಮ್‌ ರೊಕ್ಕದ ಸೊಕ್ಕು ಹೆಚ್ಚಾಗೈತಿ. ಒಂದ್‌ ಮಾತ್‌ ನೆನಪಲ್ಲಿಡ್ರೀ. ದೇಶದ ಆಗರ್ಭ ಶ್ರೀಮಂತರು ಎನಿಸಿಕೊಂಡಿದ್ದ ಟಾಟಾ, ಬಿರ್ಲಾ ಅಂತಹವರೇ ಗಪ್‌ ಕೂತವ್ರೇ. ನಿಮ್ದು ಇನ್ನೆಷ್ಟ್‌ ದಿನ ನಡೆಯುತ್ತೆ...’

ವಿಜಯಪುರ ತಾಲ್ಲೂಕು ಬಬಲೇಶ್ವರದಲ್ಲಿ ಈಚೆಗೆ ನಡೆದ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರ‍್ಯಾಲಿಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ, ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರನ್ನು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಪರಿಯಿದು.

‘ಸಮಾವೇಶದಲ್ಲಿ ಬಿಜೆಪಿ ಮುಖಂಡರ ಭಾಷಣ ರೆಕಾರ್ಡ್‌ ಮಾಡಿಸುತ್ತೇನೆ ಎಂದು ಎಂ.ಬಿ. ಗೌಡ್ರು ಹೇಳಿಕೆ ನೀಡಿದ್ದಾರೆ. ಇಂಥ ಬೆದರಿಕೆಗೆ ಬಗ್ಗೋರು ನಾವಲ್ಲ. ರೆಕಾರ್ಡ್‌ ಮಾಡಿಸಿ, ಬೇಕಂದ್ರೆ ಸಿ.ಸಿ.ಟಿವಿ ಕ್ಯಾಮೆರಾ ಇಟ್ಟು ನೋಡ್ಕೊಳ್ಳಿ ಗೌಡ್ರೇ’ ಎಂದು ಸವದಿ ಕಿಚಾಯಿಸುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರ ಪಡೆ ಶಿಳ್ಳೆಗಳ ಸುರಿಮಳೆಗೈದಿತು.

‘ಓ ಓ... ಗೌಡ್ರು ಸಿ.ಸಿ. ಕ್ಯಾಮೆರಾನೂ ಕೂರಿಸಿದ್ದಾರಂತೆ. ಇದಕ್ಕೆಲ್ಲ ನೀವ್‌ ತಲೆಕೆಡಿಸಿಕೊಳ್ಳಬೇಡಿ. ಯಾರೂ ಯಾರನ್ನೂ ಏನೂ ಮಾಡಕ್ಕಾಗಲ್ಲ. ನೀವು ಧೈರ್ಯದಿಂದ ನಿಮ್ಮ ಕೈಗಳನ್ನೆತ್ತಿ ನಮಗೆ ಬೆಂಬಲ ಸೂಚಿಸಿ.

ಆಮ್ಯಾಲ ನೋಡ್ರೀ ಗೌಡ್ರ ಲೆಕ್ಕಾಚಾರನ. ಯಾಕ ಹಿಂಗಾತು. ಇದು ಹಿಂಗ್ಯಾಕಾತು ಅಂತ ಚಡಪಡಿಸೋದನ್ನ’ ಎನ್ನುತ್ತಿದ್ದಂತೆ ಸಭಾಂಗಣ ನಗೆಗಡಲಲ್ಲಿ ತೇಲಿತು.

Comments
ಈ ವಿಭಾಗದಿಂದ ಇನ್ನಷ್ಟು

ವಾರೆಗಣ್ಣು
ಹಿಂಡುವ ಮುನ್ನ ಮೇವು–ಬೂಸಾ...!

ಪುರಾತನವಾದ ಸಿದ್ಧೇಶ್ವರ ದೇಗುಲದ ಪಕ್ಕದಲ್ಲಿನ ಶಿವಾನುಭವ ಮಂಟಪದ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಸುತ್ತಲೂ ಮಳಿಗೆ ಕಟ್ಟಿಸಿ, ಬಾಡಿಗೆಗೆ ಕೊಡಲಾಗುವುದು.

21 Jan, 2018

ವಾರೆಗಣ್ಣು
ಗಂಡನ ಹೆಸರು ಬದಲಿಸಿದ್ದು ಯಾಕೆ?

ಅಲ್ರೀ... ನಾವ್‌ ಎಷ್ಟ್‌ ಅಂತ ನಿಮ್ಮನ್ನ ಕೇಳೋದು. ಇಲ್ಲಿಗೆ ಎರಡ್‌ ವರ್ಷ ಆತ್‌ ಅಲ್ರಿ... ಒಂದ್‌ ಸಾಲಿಗೂ ಸುಣ್ಣಬಣ್ಣ ಬಳೀಲಿಲ್ಲ. ದುರಸ್ತಿನೂ ಮಾಡಿಸ್ಲಿಲ್ಲ. ಮಂದಿ...

21 Jan, 2018
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

ಕಟಕಟೆ
ಭಯದ ನೆರಳಲ್ಲಿ ನರಳಿದ ಸಾಕ್ಷಿ...!

21 Jan, 2018
ಇಸ್ರೊಗೊಬ್ಬ ಹೊಸ  ‘ಟಾಸ್ಕ್ ಮಾಸ್ಟರ್’

ವ್ಯಕ್ತಿ
ಇಸ್ರೊಗೊಬ್ಬ ಹೊಸ ‘ಟಾಸ್ಕ್ ಮಾಸ್ಟರ್’

21 Jan, 2018
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

ಪ್ರೊ. ಎಸ್. ಜಾಫೆಟ್ - ವಾರದ ಸಂದರ್ಶನ
‘ಜಾಗತಿಕ ಮಟ್ಟದ ವಿ.ವಿ.ಯಾಗಿ ರೂಪಿಸುವ ಕನಸು’

21 Jan, 2018