ವಾರೆಗಣ್ಣು

‘ಮದ್ಯ’ಕ್ಕೆ ತಡಕಾಡಿದ ಕಾಗೇರಿ!

‘ಏನಾದರೂ ಮಾಡಿ ಸಾರಾಯಿ ಮಾರಾಟ ಮಾಡುವುದನ್ನು ಮಾತ್ರ ಕಡಿಮೆ ಮಾಡಿಕೊಡಿ. ಇದು ನಮ್ಮ ಭಾಗದ ಜನರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬೇಡಿಕೆಯಾಗಿದೆ’ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿದಾಗ, ‘ರಾಜ್ಯದಲ್ಲಿ ಈ ಹಿಂದೆಯೇ ಸಾರಾಯಿ ನಿಷೇಧ ಆಗಿದೆ’ ಎಂದು ಸಿದ್ದರಾಮಯ್ಯ ನಕ್ಕರು.

ಶಿರಸಿ: ‘ಏನಾದರೂ ಮಾಡಿ ಸಾರಾಯಿ ಮಾರಾಟ ಮಾಡುವುದನ್ನು ಮಾತ್ರ ಕಡಿಮೆ ಮಾಡಿಕೊಡಿ. ಇದು ನಮ್ಮ ಭಾಗದ ಜನರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬೇಡಿಕೆಯಾಗಿದೆ’ ಎಂದು ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿದಾಗ, ‘ರಾಜ್ಯದಲ್ಲಿ ಈ ಹಿಂದೆಯೇ ಸಾರಾಯಿ ನಿಷೇಧ ಆಗಿದೆ’ ಎಂದು ಸಿದ್ದರಾಮಯ್ಯ ನಕ್ಕರು.

‘ಕ್ಷಮಿಸಿ, ಸಾರಾಯಿ ನಿಷೇಧವಾಗಿದೆ ನಿಜ...ಆದರೆ ಹೆಂಡ, ಅದೇ ಲಿಕ್ಕರ್ ಅದಕ್ಕೆ ಕನ್ನಡದಲ್ಲಿ ಏನೆನ್ನಬೇಕೋ ಗೊತ್ತಿಲ್ಲ. ನನಗೆ ಅವೆಲ್ಲ ಗೊತ್ತಿಲ್ಲದಿರುವುದರಿಂದ ಹೆಸರಿನ ಬಗ್ಗೆ ಗೊಂದಲ’ ಎಂದು ಸಮರ್ಥಿಸಿಕೊಂಡ ಕಾಗೇರಿ, ‘ಮದ್ಯ’ ಪದಕ್ಕಾಗಿ ತಡಕಾಡಿದರು. ಇದನ್ನು ಕಂಡ ಮುಖ್ಯಮಂತ್ರಿ ‘ಅದು ಭಾರತೀಯ ಮದ್ಯ’ ಎನ್ನುತ್ತ ಕಿರುನಗೆ ಬೀರಿದರು.

ಅಂತೂ ಕೊನೆಯಲ್ಲಿ ‘ಮದ್ಯ’ ಪದವನ್ನು ಬಳಸಿದ ಕಾಗೇರಿ, ಅದರ ಅಕ್ರಮ ಮಾರಾಟ ತಡೆಗಟ್ಟಬೇಕು ಎಂದು ಒತ್ತಾಯಿಸಿದಾಗ, ಶಿರಸಿಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಸಭೆಯಲ್ಲಿ ಚಪ್ಪಾಳೆಯ ಸದ್ದು ಮೊಳಗಿತು.

Comments
ಈ ವಿಭಾಗದಿಂದ ಇನ್ನಷ್ಟು
ಎಲೆಮರೆಯಲ್ಲೇ ಬೆಳಗಿದ ರಿಷಿ ಸುನಕ್‌

ವ್ಯಕ್ತಿ
ಎಲೆಮರೆಯಲ್ಲೇ ಬೆಳಗಿದ ರಿಷಿ ಸುನಕ್‌

14 Jan, 2018

ವಾರೆಗಣ್ಣು
ಭೈರಪ್ಪ ಅವರ ಪ್ರಿಯವಾದ ‘ಐಟಂ’

‘ಮಂದ್ರ ಕಾದಂಬರಿ ಓದಿ ಕೆಲವು ಸಂಗೀತ ಶಿಕ್ಷಕರು ಮುನಿಸಿಕೊಂಡು ನನ್ನ ಜೊತೆ ಮಾತು ಬಿಟ್ಟಿದ್ದಾರೆ’ ಎಂದು ಭೈರಪ್ಪ ನೆನಪಿಸಿಕೊಂಡರು. ಈಗ ಅವರ ಬಾಯಲ್ಲಿ ಶಾಸ್ತ್ರೀಯ...

14 Jan, 2018

ವಾರೆಗಣ್ಣು
‘ಮೇ ಮಾಸದಾಗ ಕಾವ ಇಳಿಸೋಣ...’

‘ನಿಮಗೆ ಹಣ, ತೋಳ್ಬಲ, ಕುರ್ಚಿ, ಅಧಿಕಾರದ ಕಾವು ಹೆಚ್ಚಾಗೈತಿ. ಇನ್ಮುಂದೆ ಬಿಸಿಲ ಝಳವೂ ವಿಪರೀತ ಆಗತೈತಿ. ಮುಂಬರುವ ಮೇ ಮಾಸದಾಗ ಹೆಂಗ ಸಹಜವಾಗಿ ಕಾವು...

14 Jan, 2018
ಅತ್ಯಾಚಾರದ ಸಂತ್ರಸ್ತ ಅವನೇ, ಅವಳಲ್ಲ

ಕಟಕಟೆ 101
ಅತ್ಯಾಚಾರದ ಸಂತ್ರಸ್ತ ಅವನೇ, ಅವಳಲ್ಲ

14 Jan, 2018
‘ಐದು ವರ್ಷಗಳಲ್ಲಿ 60 ಮಹತ್ವದ ಉಡಾವಣೆ ನಿರೀಕ್ಷೆ’

ವಾರದ ಸಂದರ್ಶನ: ಡಾ. ಕಿರಣ್ ಕುಮಾರ್
‘ಐದು ವರ್ಷಗಳಲ್ಲಿ 60 ಮಹತ್ವದ ಉಡಾವಣೆ ನಿರೀಕ್ಷೆ’

14 Jan, 2018