ಹಿರಿಯೂರು

‘ಜನಸಾಮಾನ್ಯರಿಗೆ ನಿರಾಸೆ ತಂದ ಮೋಡಿ ಆಡಳಿತ’

ಜನರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿಯವರು ಯಾವುದೇ ಶಾಶ್ವತ ಯೋಜನೆ ರೂಪಿಸದೆ ಭಾಷಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ನೋಟ್ ಅಮಾನ್ಯ ಹಾಗೂ ಜಿಎಸ್‌ಟಿ ಜಾರಿಯಿಂದ ಎಲ್ಲ ವರ್ಗದ ಜನ ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ.

ಹಿರಿಯೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಮಟ್ಟದ ಸಮ್ಮೇಳನವನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ ಉದ್ಘಾಟಿಸಿದರು.

ಹಿರಿಯೂರು: ಕೇಂದ್ರದಲ್ಲಿ ಪೂರ್ಣಪ್ರಮಾಣದ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸಿ.ವೈ. ಶಿವರುದ್ರಪ್ಪ ಆರೋಪಿಸಿದರು.

ನಗರದ ಲಕ್ಷ್ಮಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿಯವರು ಯಾವುದೇ ಶಾಶ್ವತ ಯೋಜನೆ ರೂಪಿಸದೆ ಭಾಷಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ನೋಟ್ ಅಮಾನ್ಯ ಹಾಗೂ ಜಿಎಸ್‌ಟಿ ಜಾರಿಯಿಂದ ಎಲ್ಲ ವರ್ಗದ ಜನ ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. 2018 ರ ವಿಧಾನಸಭೆ ಮತ್ತು 2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮತಗಳು ಹಂಚಿ ಹೋಗದಂತೆ ತಡೆಯಲು ಕಾಂಗ್ರೆಸ್ ಹಾಗೂ ಎಡಪಕ್ಷಗಳು ವಿಶಾಲ ತಳಹದಿಯ ಮೇಲೆ ರಾಜಕೀಯ ವೇದಿಕೆ ನಿರ್ಮಿಸಿಕೊಳ್ಳಲಿವೆ ಎಂದು ಅವರು ಹೇಳಿದರು.

ಸಿಪಿಐ 23 ನೇ ರಾಷ್ಟ್ರೀಯ ಸಮ್ಮೇಳನ 2018 ಏಪ್ರಿಲ್ ನಲ್ಲಿ ಕೇರಳದಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ 2018 ಜನವರಿ 27 ಮತ್ತು 28 ರಂದು ದಾವಣಗೆರೆಯಲ್ಲಿ ಪಕ್ಷದ ರಾಜ್ಯ ಸಮ್ಮೇಳನ ನಡೆಸಲಾಗುವುದು ಎಂದು ಶಿವರುದ್ರಪ್ಪ ತಿಳಿಸಿದರು.

ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಸ್.ಸಿ. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜೈರಾಂರೆಡ್ಡಿ, ತಿಪ್ಪಮ್ಮ, ಸೌಭಾಗ್ಯಮ್ಮ, ಬಿ.ಪಿ. ನಿರ್ಮಲ, ಕೆ.ಟಿ. ಸುಜಾತ, ಎನ್. ಶ್ರೀನಿವಾಸ್, ಕೆ.ರಾಮಯ್ಯ, ನಳಿನಾಕ್ಷಿ ಮಾತನಾಡಿದರು. ರಂಗಸ್ವಾಮಿ, ಸಿದ್ದಗಂಗಮ್ಮ, ಸುಧಾ, ಚಿಂತಾಮಣಿ, ಚೂಡಾಮಣಿ, ಶೋಭ, ಕರಿಯಮ್ಮ, ಜಯಮ್ಮ, ಮಂಜುಳಾ, ಪುಟ್ಟಕೆಂಚಮ್ಮ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಸಂಡೂರು
‘ಜೆಸಿಬಿ’ ಪಕ್ಷಗಳಿಗೆ ಜನರ ಕಾಳಜಿ ಇಲ್ಲ

ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣವಾಗಿ ಚರ್ಚಿಸಲು, ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ಜನರ ಬದುಕನ್ನು ಹಸನುಗೊಳಿಸಲು ಜನಾಂದೋಲನಗಳ ಮಹಾಮೈತ್ರಿ ಈ...

15 Apr, 2018
ಕಿರವತ್ತಿ ಬಳಿ ಗಾಯಾಳು ಆನೆ ಸಾವು

ಯಲ್ಲಾಪುರ
ಕಿರವತ್ತಿ ಬಳಿ ಗಾಯಾಳು ಆನೆ ಸಾವು

13 Apr, 2018

ದಾವಣಗೆರೆ
ಮತಯಂತ್ರ ವಿಶ್ವಾಸಾರ್ಹ, ಅನುಮಾನ ಬೇಡ

ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ವಿದ್ಯುನ್ಮಾನ ಮತ ಯಂತ್ರ ಮತ್ತು ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್‌) ಬಳಸಲಾಗುತ್ತಿದ್ದು, ಮತದಾರ ತಾನು ಚಲಾಯಿಸಿದ...

11 Apr, 2018

ಕುಶಾಲನಗರ
ಕಾವೇರಿ ನಿಸರ್ಗಧಾಮಕ್ಕೆ ಕಾಡಾನೆಗಳ ಲಗ್ಗೆ

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮಕ್ಕೆ ಕಾಡಾನೆಗಳು ನುಸುಳಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

29 Mar, 2018

ಕಾರವಾರ
ಮನೆಬಿಟ್ಟು ಬಂದ ಬಾಲಕಿಯರ ರಕ್ಷಣೆ

ಮಂಗಳೂರು ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಅನುಮಾನಾಸ್ಪದವಾಗಿ ಪ್ರಯಾಣಿಸುತ್ತಿದ್ದ 10 ಮತ್ತು 12 ವರ್ಷದ ಇಬ್ಬರು ಬಾಲಕಿಯರನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆಯ...

29 Mar, 2018