50 ವರ್ಷಗಳ ಹಿಂದೆ

ಮಂಗಳವಾರ, 12–12–1967

ಮಧುಗಿರಿ ತಾಲ್ಲೂಕಿನ ಹನುಮಂತಪುರ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳ ಮೇಲೆ ಈ ತಿಂಗಳು ಆದಿಭಾಗದಲ್ಲಿ ‍ಪೊಲೀಸಿನವರು ವಿನಾಕಾರಣ ದಾಳಿ ಮಾಡಿ ಮುಗ್ಧ ರೈತರು ಮತ್ತು ಅವರ ಹೆಂಗಸರು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರಲ್ಲದೆ ಕೈಗೆ ಸಿಕ್ಕಿದವ ರಿಗೆ ಚಿತ್ರಹಿಂಸೆ ಕೊಟ್ಟರೆಂದು ಕೊರಟಗೆರೆ ತಾಲ್ಲೂಕಿನ ರೈತ ಸಂಘದ ಅಧ್ಯಕ್ಷ  ಶ್ರೀ ಚನ್ನಪ್ಪನವರು ಆಪಾದಿಸಿದರು.

ಮಂಗಳವಾರ, 12–12–1967

ಹಳ್ಳಿ ಜನರ ಮೇಲೆ ಪೊಲೀಸರ ಹಲ್ಲೆ

ಬೆಂಗಳೂರು, ಡಿ. 11– ಮಧುಗಿರಿ ತಾಲ್ಲೂಕಿನ ಹನುಮಂತಪುರ ಮತ್ತು ಅದರ ಸುತ್ತಮುತ್ತಲಿನ ಗ್ರಾಮಗಳ ಮೇಲೆ ಈ ತಿಂಗಳು ಆದಿಭಾಗದಲ್ಲಿ ‍ಪೊಲೀಸಿನವರು ವಿನಾಕಾರಣ ದಾಳಿ ಮಾಡಿ ಮುಗ್ಧ ರೈತರು ಮತ್ತು ಅವರ ಹೆಂಗಸರು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದರಲ್ಲದೆ ಕೈಗೆ ಸಿಕ್ಕಿದವ ರಿಗೆ ಚಿತ್ರಹಿಂಸೆ ಕೊಟ್ಟರೆಂದು ಕೊರಟಗೆರೆ ತಾಲ್ಲೂಕಿನ ರೈತ ಸಂಘದ ಅಧ್ಯಕ್ಷ  ಶ್ರೀ ಚನ್ನಪ್ಪನವರು ಆಪಾದಿಸಿದರು.

ಭೂಕಂಪ: ಕೊಯ್ನಾ ನಗರದಲ್ಲಿ 105ಕ್ಕೂ ಅಧಿಕ ಸಾವು

ಮುಂಬೈ, ಡಿ. 11– ಭಾರತದ ಇಡೀ ಪಶ್ಚಿಮಾರ್ಧವನ್ನೇ ಇಂದು ಮುಂಜಾನೆ  ಅಲುಗಾಡಿಸಿದ ವಿಪತ್ಕಾರಕ ಭೂಕಂಪಕ್ಕೆ ಸತಾರಾ ಜಿಲ್ಲೆಯಲ್ಲಿರುವ ಮಹಾರಾಷ್ಟ್ರ ಜಲವಿದ್ಯುತ್ ಕೇಂದ್ರ ಸ್ಥಳವಾದ ಕೊಯ್ನಾ ನಗರ ತುತ್ತಾಗಿ ಸೋಮವಾರ ರಾತ್ರಿ ವೇಳೆಗೆ ಹಾಳು ಬಿದ್ದಿತ್ತು.

ರಾತ್ರಿ ಇಲ್ಲಿಗೆ ತಲುಪಿರುವ ವರದಿಗಳ ಪ್ರಕಾರ 105 ಜನ ಸತ್ತಿದ್ದಾರಲ್ಲದೆ, 1300 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 300 ಮಂದಿಗೆ ತೀವ್ರ ಗಾಯಗಳಾಗಿವೆ. ಸತ್ತವರಲ್ಲಿ ಅನೇಕರು ಸ್ತ್ರೀಯರು ಮತ್ತು ಮಕ್ಕಳೆಂದು ಗೊತ್ತಾಗಿದೆ.  ಇವರಲ್ಲಿ ಅನೇಕರು ನಿದ್ರಿಸುತ್ತಿದ್ದಾಗ ಅವರ ಮನೆಗಳು ಕುಸಿದಿವೆ

ವರದಿ ನ್ಯಾಯ ಎಂದಿದ್ದರಂತೆ ಚವಾಣ್

ಬೆಂಗಳೂರು, ಡಿ. 10– ಮಹಾಜನ್ ಆಯೋಗದ ವರದಿ ನ್ಯಾಯವಾದ ವರದಿಯೆಂದು ಕೇಂದ್ರದ ಗೃಹ ಸಚಿವ ಶ್ರೀ ವೈ.ಬಿ. ಚವಾಣ್‌ರವರು ಒಪ್ಪಿಕೊಂಡಿದ್ದಾರೆಯೇ? ಒಂದು ‘ರಹಸ್ಯವನ್ನು ಬಯಲು ಮಾಡಿದ’ ಕಾಂಗ್ರೆಸ್ ಸದಸ್ಯ ಶ್ರೀ ಕೆ.ಕೆ. ಶೆಟ್ಟರಿಗೆ ತಿಳಿದುಬಂದಿರುವ ಸಮಾಚಾರದಂತೆ ಶ್ರೀ ಚವಾಣರು ‘ನ್ಯಾಯವಾಗಿದೆ’ ಅಂದಿದ್ದರಂತೆ.

Comments
ಈ ವಿಭಾಗದಿಂದ ಇನ್ನಷ್ಟು

50 ವರ್ಷಗಳ ಹಿಂದೆ
ಗುರುವಾರ, 18–1–1968

ಕಛ್‌ನ ರಣ್ ಪ್ರದೇಶ ಕುರಿತ ತ್ರಿಸದಸ್ಯ ನ್ಯಾಯಮಂಡಲಿ ತೀರ್ಪು ಭಾರತಕ್ಕೆ ವಿರುದ್ಧವಾಗಿರಬಹುದೆಂಬ ಕಳವಳಕಾರಕ ಸುದ್ದಿ ಜಿನೀವಾದಿಂದ ಬಂದಿದೆ.

18 Jan, 2018

50 ವರ್ಷಗಳ ಹಿಂದೆ
ಬುಧವಾರ, 17–1–1968

ಸಿಸಿಲಿಯಲ್ಲಿ ಭಾನುವಾರ ಮತ್ತು ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕೊನೆಯಪಕ್ಷ 600 ಮಂದಿ ಸತ್ತಿದ್ದಾರೆಂದು ಇಟಲಿ ಸರ್ಕಾರದ ವೃತ್ತಗಳು ತಿಳಿಸಿವೆ.

17 Jan, 2018

ದಿನದ ನೆನಪು
ಸೋಮವಾರ, 15–1–1968

ಆರು ಮಂದಿ ಕಾಂಗ್ರೆಸ್ ಶಾಸಕರು ಸಚಿವರಾಗಿ ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ‍ಪ್ರಗತಿಶೀಲ ಜನತಂತ್ರರಂಗದ ಸಮ್ಮಿಶ್ರ...

15 Jan, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಭಾನುವಾರ, 14–1–1968

ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶವನ್ನು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ವ್ಯಕ್ತಪಡಿಸಿದರು.

14 Jan, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಶನಿವಾರ, 13–1–1968

ಮೈಸೂರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್‌ನವರು ಪ್ರಭಾವ ಬೀರಲು ಯತ್ನಿಸುವುದನ್ನು ತಾವು ವಿರೋಧಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯದ ಮುಖ್ಯಮಂತ್ರಿ ಶ್ರೀ...

13 Jan, 2018