ಕಾರ್ಕಳ

₹ 1 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಗ್ರಾಮ ವ್ಯಾಪ್ತಿಯ ಸ್ಮಶಾನ ರಸ್ತೆ, ಕಟ್ಟಿಗೆ ಕೊಠಡಿ, ಶೌಚಾಲಯ ಮತ್ತು ಕುಕ್ಕುದಡಿ ರಸ್ತೆಗೆ ಶಂಕುಸ್ಥಾಪನೆ ನಡೆಯಿತು.

ಕಾರ್ಕಳ: ತಾಲ್ಲೂಕಿನ ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಅವರ ಅನುದಾನ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯತಿಗಳ ಸುಮಾರು ₹ 1 ಕೋಟಿ ಅನುದಾನದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಶಾಸಕರು ಈಚೆಗೆ ನೆರವೇರಿಸಿದರು.

ಗ್ರಾಮ ವ್ಯಾಪ್ತಿಯ ಸ್ಮಶಾನ ರಸ್ತೆ, ಕಟ್ಟಿಗೆ ಕೊಠಡಿ, ಶೌಚಾಲಯ ಮತ್ತು ಕುಕ್ಕುದಡಿ ರಸ್ತೆಗೆ ಶಂಕುಸ್ಥಾಪನೆ ನಡೆಯಿತು. ಈ ಸಂದರ್ಭದಲ್ಲಿ ಇನ್ನಾ ಕೊರಂಗಲಾಯಿ ಕಿಂಡಿ ಅಣೆಕಟ್ಟು, ಕೋಡಿ ರಸ್ತೆ, ಕಡೆಕುಂಜ ರಸ್ತೆ ಮತ್ತು ಇನ್ನ ಕಾಂಜರಕಟ್ಟೆ ರಿಕ್ಷಾ ನಿಲ್ದಾಣಕ್ಕೆ ಅಳವಡಿಸಿದ ಇಂಟರ್‌ಲಾಕ್ ಕಾಮಗಾರಿಗಳ ಉದ್ಘಾಟನೆ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ರೇಶ್ಮಾ ಉದಯ್ ಶೆಟ್ಟಿ, ತಾಲ್ಲೂಕು ಪಂಚಾಯತಿ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಎಪಿಎಂಸಿ ಸದಸ್ಯ ಮೋಹನ್‌ದಾಸ್ ಶೆಟ್ಟಿ, ಪಂಚಾಯಿತಿ ಸದಸ್ಯರಾದ ರೂಪಾ ಕೋಟ್ಯಾನ್, ನ್ಯಾನ್ಸಿ ಡಿಸಿಲ್ವಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ್ ಅಮೀನ್, ಬಿಜೆಪಿ ಕೈಗಾರಿಕಾ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಉದಯ್ ಕುಮಾರ್ ಶೆಟ್ಟಿ, ಬಿಜೆಪಿಯ ಹರೀಶ್ ಶೆಟ್ಟಿ, ದಿನೇಶ್ ಕೋಟ್ಯಾನ್, ಸುರೇಶ್ ಪೂಜಾರಿ, ಗೀತಾ, ಸುರೇಶ್, ಶಿವಾನಂದ ಕರ್ಕೇರಾ, ಸುರೇಶ್ ಕುಲಾಲ್, ರಘು ಶೆಟ್ಟಿಗಾರ್, ವಿಠಲ ಶೆಟ್ಟಿ ಬಾಳಿಕೆ, ವಾಸು ಪೂಜಾರಿ, ಸಂತೋಷ್ ಕುಲಾಲ್, ಅಶೋಕ್ ಶೆಟ್ಟಿ, ಶೈಲೇಶ್, ರೂಪೇಶ್ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಮಾದರಿ ತಾಲ್ಲೂಕಾಗಿ ಬಾಗೇವಾಡಿ ಅಭಿವೃದ್ಧಿ’

ಬಸವನಬಾಗೇವಾಡಿ
‘ಮಾದರಿ ತಾಲ್ಲೂಕಾಗಿ ಬಾಗೇವಾಡಿ ಅಭಿವೃದ್ಧಿ’

21 Jan, 2018

ಬಸವನಬಾಗೇವಾಡಿ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಆರಂಭ

‘ತೊಗರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದ ಸಂದರ್ಭದಲ್ಲಿ ಖರೀದಿಸಲು ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಈಗಾಗಲೇ ನೋಂದಣಿ ಮಾಡಿಸಿದ ರೈತರು ತೊಗರಿ ಮಾರಾಟ ಮಾಡುವ ಮೂಲಕ...

21 Jan, 2018
ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

ಉಡುಪಿ
ಹಾಲಾಡಿ– ರಾಕೇಶ್ ಮಲ್ಲಿ ನಡುವೆ ಪೈಪೋಟಿ!

21 Jan, 2018
ಪಾರ್ಕಿಂಗ್‌ ಸ್ಥಳದಲ್ಲಿದ್ದ ಅಂಗಡಿ ತೆರವು

ಉಡುಪಿ
ಪಾರ್ಕಿಂಗ್‌ ಸ್ಥಳದಲ್ಲಿದ್ದ ಅಂಗಡಿ ತೆರವು

20 Jan, 2018

ಉಡುಪಿ
ಕಾನೂನು ಉಲ್ಲಂಘಿಸುವ ಖಾಸಗಿ ಬಸ್ ವಿರುದ್ಧ ಕ್ರಮ

ಮಟ್ಕಾ ದಂಧೆಯ ಬಗ್ಗೆ ನಾಲ್ಕು ದೂರುಗಳು ಬಂದವು. ಮಟ್ಕಾ ದಂಧೆ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಪರ್ಯಾಯದಂತಹ ಕಾರ್ಯಕ್ರಮ ಇದ್ದರೂ ಕಳೆದ ವಾರ 13...

20 Jan, 2018