ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿನ ಅಮ್ಮನ ಮಕ್ಕಳು ಚುರುಕು

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನೀವು ಈಗ ಕೈತುಂಬಾ ಸಂಬಳ ಎಣಿಸುತ್ತಿದ್ದೀರಾ? ವಿಲಾಸಿ ಕಾರಿನಲ್ಲಿ ಓಡಾಡಿಕೊಂಡಿದ್ದೀರಾ? ನಿಮ್ಮ ಈ ಸಾಧನೆಗೆ ಶಿಸ್ತಿನ ಅಮ್ಮನೇ ಕಾರಣ. 

ಮಕ್ಕಳು ಸಣ್ಣವರಿದ್ದಾಗ ಅಮ್ಮ ಎಲ್ಲದಕ್ಕೂ ಶಿಸ್ತು ಶಿಸ್ತು ಅಂತಿರುತ್ತಾಳೆ. ಆಟವಾಡಿ ಬಂದ ತಕ್ಷಣ ಕೈಕಾಲು ಮುಖ ತೊಳೆಯಬೇಕು, ಮಲಗುವ ಕೋಣೆ ಶುಚಿಯಾಗಿರಬೇಕು, ಹೋಂ ವರ್ಕ್‌ ಹೇಳಿದ ಸಮಯದೊಳಗೆ ಮುಗಿಸಬೇಕು... ಹೀಗೆ ಮಾತು ಮಾತಿಗೆ ಶಿಸ್ತು ಅವಳದು. ಹೀಗೆ ಬಹಳ ಶಿಸ್ತಾಗಿ ಬೆಳೆಸಿದ ಮಗು ತುಂಬಾ ಚುರುಕಾಗಿರುತ್ತದೆ. ಜೀವನದಲ್ಲಿ ದೊಡ್ಡ ಯಶಸ್ಸು ಕಾಣುತ್ತದೆ ಎಂದು ಅಧ್ಯಯನವೊಂದು ಹೇಳಿದೆ.

ಶಿಸ್ತಾಗಿ ಬೆಳೆದ ಮಕ್ಕಳು ಜೀವನದಲ್ಲಿ ಹೆಚ್ಚು ಯಶಸ್ಸು ಪಡೆದಿದ್ದಾರೆ. ಮಕ್ಕಳನ್ನು ಶಿಸ್ತಾಗಿ ಬೆಳೆಸುವಲ್ಲಿ ಅಮ್ಮಂದಿರ ಪಾತ್ರವೇ ಹೆಚ್ಚು. ಹೆಚ್ಚಿನ ತಾಯಂದಿರು ತಮ್ಮ ಮಕ್ಕಳು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ ಮುಂದಾಲೋಚನೆಯನ್ನೇ ಇಟ್ಟುಕೊಂಡು ಶಿಸ್ತಾಗಿ ಬೆಳೆಸುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಈ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಆತ್ಮವಿಶ್ವಾಸ ಹಾಗೂ ಸುರಕ್ಷಿತ ಭಾವವನ್ನೂ ಹೊಂದಿರುತ್ತಾರೆ. ಇವರು ವಿದ್ಯಾಭ್ಯಾಸ ಮುಗಿಸಿ ಬೇಗ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT