ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್‌ ಹುಟ್ಟುಹಬ್ಬ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಜೂಲಿ ಲಕ್ಷ್ಮಿ

ಚಂದನದ ಗೊಂಬೆ ಎಂದಾಕ್ಷಣ ಕಣ್ಮುಂದೆ ಸುಳಿಯುವುದು ನಟಿ ಲಕ್ಷ್ಮಿ (ಜನನ: 1952). ನೈಜ ಅಭಿನಯ, ಸುಂದರ ರೂಪದ ಮೂಲಕ ಜನಮಾನಸದಲ್ಲಿ ಭದ್ರಸ್ಥಾನ ಗಿಟ್ಟಿಸಿಕೊಂಡವರು ಈ ನಟಿ. 1980–90ರ ದಶಕದಲ್ಲಿ ಲಕ್ಷ್ಮಿ ಹಾಗೂ ಅನಂತ್‌ನಾಗ್‌ ಅವರ ಜೋಡಿಯಿದ್ದ ಸಾಲುಸಾಲು ಸಿನಿಮಾಗಳು ತೆರೆಕಂಡವು. ಬಹುತೇಕ ಚಿತ್ರಗಳು ಸೂಪರ್‌ಹಿಟ್.

ಲಕ್ಷ್ಮಿ ಪಂಚಭಾಷಾ ತಾರೆ. ‘ಜೂಲಿ ಲಕ್ಷ್ಮಿ’ ಎಂದೇ ಜನಜನಿತರು. 1975ರಲ್ಲಿ ಹಿಂದಿಯಲ್ಲಿ ‘ಜೂಲಿ’ ಸಿನಿಮಾದ ಅಭಿನಯಕ್ಕಾಗಿ ಇವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. 1974ರಲ್ಲಿ ತೆರೆಕಂಡ ಮಲಯಾಳಂನ ‘ಚಟ್ಟಕ್ಕರಿ’ ಸಿನಿಮಾವು 1975ರಲ್ಲಿ ಹಿಂದಿಯಲ್ಲಿ ‘ಜೂಲಿ’  ಹಾಗೂ ತೆಲುಗಿನಲ್ಲಿ ‘ಪ್ರೇಮಕಥಾ’ ಎಂಬ ಹೆಸರಿಗೆ ರಿಮೇಕ್‌ ಆಯಿತು. ‘ಜೂಲಿ’ ಸಿನಿಮಾದ ಬಳಿಕ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾದರು ಲಕ್ಷ್ಮಿ. 400ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣಹಚ್ಚಿದ್ದಾರೆ.

ಕಿರುತೆರೆಯ ಮೂಲಕ ಮತ್ತೆ ಮನೆಮಾತಾಗಿರುವ ಈ ಸುಂದರಿ, ಸುವರ್ಣ ವಾಹಿನಿಯಲ್ಲಿ ‘ಇದು ಕತೆ ಅಲ್ಲ, ಜೀವನ’ ನಡೆಸಿಕೊಟ್ಟಿದ್ದರು. ಪ್ರಸ್ತುತ, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ರಾಮಾ ಜೂನಿಯರ್ಸ್‌’ನ ತೀರ್ಪುಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT