ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಯು ಇತಿಹಾಸ ಸಾರುವ ‘ಯೆಲ್ಲೊ’ ಛಾಯಾಚಿತ್ರ ಪ್ರದರ್ಶನ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ತಶತಮಾನಗಳ ಹಿಂದೆ ಭೂಮಿಯಿಂದ ಮೇಲೆದ್ದ ಸುಣ್ಣದ ಕಲ್ಲುಗಳಿಗೆ ಗೆರೆಗಳ ಎಳೆದವರಾರು, ಕೆತ್ತಿ-ಕೊರೆದು ಕಣಕಣಕು ಬಣ್ಣಬಳಿದವರಾರು,..? ಉತ್ತರವೇ ಸಿಗದ ಇಂಥ ನಿಸರ್ಗದ ಅಪರೂಪದ ಕಲಾಸೃಷ್ಟಿಯನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಪ್ರದರ್ಶಿಸಲಾಗಿದೆ.

ಕ್ರಿಮ್ಸನ್‌ ಕಲಾಕೇಂದ್ರದಲ್ಲಿ ‘ಯೆಲ್ಲೊ’ ಫೈನ್ ಆರ್ಟ್ಸ್ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು, ಪಲ್ಲನ್ ದಾರುವಾಲಾ ಅವರು ‘ಡಿಯು’ ವಲಯದ ಸೊಬಗನ್ನು ಇಲ್ಲಿ ತೆರೆದಿಟ್ಟಿದ್ದಾರೆ.

‘ಯೆಲ್ಲೊ ಫೈನ್ ಆರ್ಟ್ಸ್’ ಛಾಯಾಚಿತ್ರ ದಲ್ಲಿರುವ ಚಿತ್ರಗಳು ಐತಿಹಾಸಿಕವಾಗಿಯೂ ಮಹತ್ವದ್ದು. ಈ ಹಿಂದೆ ಪೋರ್ಚುಗೀಸರ ಕಾಲೊನಿ ಆಗಿದ್ದ ದೇಶದ ಕೇಂದ್ರಾಡಳಿತ ಪ್ರದೇಶ 'ಡಿಯು' ಭಾಗದ ನೈಸರ್ಗಿಕ ಸೃಷ್ಟಿ ಹಾಗೂ ಬಣ್ಣ ಉಳಿಸಿಕೊಂಡ ಇತಿಹಾಸ ಈ ಛಾಯಾಚಿತ್ರಗಳ ಮುಖ್ಯ ವಸ್ತು. ಕಲ್ಲುಬಂಡೆ, ಗವಿ, ಸ್ಥಳೀಯ ಇತಿಹಾಸವನ್ನು ನೆನಪಿಸುವ ವಿನ್ಯಾಸಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ‘ಚಿತ್ರ ಕಥೆ’ ಹೇಳುವ ಪ್ರಯತ್ನ ಮಾಡಿದ್ದಾರೆ.


'ಬ್ಲ್ಯಾಕ್ ಅಂಡ್ ವೈಟ್ ಸ್ಪೈಡರ್ ಅವಾರ್ಡ್ಸ್' ಕಪ್ಪು-ಬಿಳುಪು ಛಾಯಾಚಿತ್ರಗಳಿಗೆ ನೀಡುವ ಅಂತರರಾಷ್ಟ್ರೀಯ ಪ್ರಶಸ್ತಿ. ಪಲ್ಲನ್ ದಾರುವಾಲಾ ಅವರ 'ದಿ ವೇಲ್' ಛಾಯಾಚಿತ್ರಕ್ಕೆ ಇದರ ಹಾನರ್ ಆಫ್ ಡಿಸ್ಟಿಕ್ಷನ್ 3ನೇ ಬಹುಮಾನ ಬಂದಿದೆ.

ಕ್ರಿಮ್ಸನ್ ಕಲಾಕೇಂದ್ರ ವರ್ಷದ ಹಿಂದೆಯೇ ಈ ಚಿತ್ರವನ್ನು ಪಲ್ಲನ್ ಅವರ ಮತ್ತೊಂದು ಫೋಟೊಗ್ರಫಿ ಪ್ರದರ್ಶನದ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿಕೊಂಡಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ಅವರು ಕ್ಯಾಲಿಪೋರ್ನಿಯಾ ಸಂತ ಬಾರ್ಬರಾದ ಬ್ರೂಕ್ಸ್ ಫೋಟೊಗ್ರಫಿ ಸಂಸ್ಥೆಯಿಂದ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT