ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಭಾರತದ ಲಕ್ಷ್ಮಿ ಪುರಿ ಸೇರಿದಂತೆ ಆರು ಉನ್ನತ ರಾಜತಾಂತ್ರಿಕ ಅಧಿಕಾರಿಗಳಿಗೆ ವಿಶ್ವಸಂಸ್ಥೆ ‘ದಿವಾಲಿ ಪವರ್ ಆಫ್ ಒನ್’ (ದೀಪಾವಳಿಯ ಏಕ ಶಕ್ತಿ) ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಗೊಳ್ಳಲು ನೀಡಿದ ಸೇವೆಯನ್ನು ಪರಿಗಣಿಸಿ ಇದೇ ಪ್ರಪ್ರಥಮ ಬಾರಿಗೆ ಈ ಪುರಸ್ಕಾರ ನೀಡಲಾಗಿದೆ.

ಕಳೆದ ವರ್ಷ ಅಮೆರಿಕದ ಅಂಚೆ ಇಲಾಖೆ ದೀಪಾವಳಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು. ಅದರ ವಾರ್ಷಿಕೋತ್ಸವದ ನಿಮಿತ್ತ ಈ ಪ್ರಶಸ್ತಿಯನ್ನು ನೀಡಲಾಗಿದೆ. ಲಕ್ಷ್ಮಿ ಪುರಿ ಅವರು ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆ.

ನ್ಯೂಯಾರ್ಕ್‍ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರು: ಲೆಬನಾನ್ ರಾಯಭಾರಿ ನವಾಜ್ ಸಲಾಂ, ಉಕ್ರೇನ್‍ನ ಯುರಿ ಸೆರ್‍ಗೆವೆವ್, ವಿಶ್ವಸಂಸ್ಥೆಗೆ ಬ್ರಿಟಿಷ್ ರಾಯಭಾರಿ ಮ್ಯಾಥ್ಯೂ ರೇಕ್ರೋಫ್ಟ್,  ಹಿರಿಯ ರಾಜತಾಂತ್ರಿಕ ಅಧಿಕಾರಿಗಳಾದ ಈಜಿಪ್ಟ್‌ನ ಮಗೆಡ್ ಅಬ್ದುಲ್ ಅಜೀಜ್, ಮಾಲ್ಡೋವಾದ ಇಯಾನ್ ಬೋಟ್‍.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT