ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿ ಹಣ ದೋಚುತ್ತಿದ್ದವರ ಬಂಧನ

Last Updated 13 ಡಿಸೆಂಬರ್ 2017, 9:18 IST
ಅಕ್ಷರ ಗಾತ್ರ

ಬೆಳಗಾವಿ: ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ಹಣ ಮತ್ತು ಆಭರಣ ದೋಚುತ್ತಿದ್ದ ತಂಡವನ್ನು ಇಲ್ಲಿನ ಕ್ಯಾಂಪ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಈ ತಂಡದವರು ಕ್ಯಾಂಪ್ ಪ್ರದೇಶದ ಸಿಪಿಇಡಿ ಮೈದಾನದ ಬಳಿ ಕುಳಿತಿದ್ದ ಪ್ರೇಮಿಗಳ ಮೇಲೆ ದಾಳಿ ನಡೆಸಿದ್ದರು. ನೊಂದ ಪ್ರೇಮಿಗಳು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಯುವತಿ ಕೈಹಿಡಿದು ಎಳೆದಾಡಿದ, ಚಾಕು ತೋರಿಸಿ ಬೆದರಿಸಿದ ಹಾಗೂ ವಿಡಿಯೊ ಮಾಡುತ್ತಿದ್ದ ಆರೋಪ ಅವರ ಮೇಲಿದೆ.

ಮದುವೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದರು. ಚಿನ್ನಾಭರಣ ಕೇಳುತ್ತಿದ್ದರು ಎಂದು ದೂರಲಾಗಿದೆ.

ಮಹಮ್ಮದ್ ರಿಹಾನ್ ಆದಿಲ್ ಬಾಂಬೆವಾಲೆ, ಜಾವೇದ್ ಇಬ್ರಾಹಿಂ ಅತ್ತಾರ್, ಮಹ್ಮದ್ ಅಹದ್ ಮಹಮ್ಮದ್ ಗೌಸ್ ಬೇಪಾರಿ, ಶಾರುಖ್ ಅಜೀದ್ ಅಹ್ಮದ್ ಕಿಲ್ಲೇದಾರ, ರಹೀಮ್ ಸಲೀಂ ಸೈಯದ್ ಆರೋಪಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT