ಹೊಸಂಗಡಿಯಲ್ಲಿ ಬಾರ್‌ ಆರಂಭಕ್ಕೆ ವಿರೋಧ

ಡಿ.ಸಿ ಕಚೇರಿ ಎದುರು ಸ್ಥಳೀಯರ ಪ್ರತಿಭಟನೆ

ಕುಂದಾಪುರ ತಾಲ್ಲೂಕಿನ ಹೊಸಂಗಡಿಯ ಬದ್ರಿ ಜುಮಾ ಮಸೀದಿ ಸಮೀಪವೇ ಬಾರ್‌ ಆರಂಭಿಸುವ ಪ್ರಯತ್ನ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಮಸೀದಿ ಸದಸ್ಯರು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಉಡುಪಿ: ಕುಂದಾಪುರ ತಾಲ್ಲೂಕಿನ ಹೊಸಂಗಡಿಯ ಬದ್ರಿ ಜುಮಾ ಮಸೀದಿ ಸಮೀಪವೇ ಬಾರ್‌ ಆರಂಭಿಸುವ ಪ್ರಯತ್ನ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು ಎಂದು ಮಸೀದಿ ಸದಸ್ಯರು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಹೊಸಂಗಡಿ ಗ್ರಾಮದ ಆ ಜಾಗ ಅಕ್ರಮ– ಸಕ್ರಮ ದಡ್ಡಿಯಾಗಿದ್ದು, ದರ್ಖಾಸ್ತು ಹಕ್ಕಾಗಿ ವ್ಯಕ್ತಿಯೊಬ್ಬರಿಗೆ ಪರಭಾರೆಯಾಗಿದೆ. ಆ ಸ್ಥಳದ ಸಮೀಪದಲ್ಲಿಯೇ ಬದ್ರಿ ಜುಮಾ ಮಸೀದಿ ಇದೆ. ಮಸೀದಿ ಹಾಗೂ ದೇವಸ್ಥಾನದಿಂದ ಇಂತಿಷ್ಟು ದೂರದಲ್ಲಿ ಮಾತ್ರ ಬಾರ್ ತೆರೆಯಬಹುದು ಎಂಬ ನಿಯಮ ಇರುವುದರಿಂದ, ನಿಯಮಕ್ಕೆ ಅನುಸಾರವಾಗಿ ಅಂತರ ಇದೆ ಎಂದು ಕೃತಕವಾಗಿ ತೋರಿಸುವ ಪ್ರಯತ್ನ ಸಹ ಮಾಡುತ್ತಿದ್ದಾರೆ.

ಮುಖ್ಯ ರಸ್ತೆಯಿಂದ ತಿರುವು ಮಾಡಿ ಗುರುತಿಸಿರುವ ಜಾಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಮುಸ್ಲಿಂ ಒಕ್ಕೂಟದ ಮುಖಂಡ ರಫೀಕ್ ಗಂಗೊಳ್ಳಿ ಹೇಳಿದರು.

ಈ ಹಿಂದೆ ಸಹ ಅಬಕಾರಿ ಇಲಾಖೆಯರವರಿಗೆ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದ್ದರು. ಆದರೆ ಬಾರ್ ಆರಂಭಿಸಲು ಎಲ್ಲ ರೀತಿಯ ತಯಾರಿ ಅಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಗ್ರಾಮಸ್ಥರ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು.

ಅಲ್ಲಿ ಯಾವುದೇ ಕಾರಣಕ್ಕೂ ಬಾರ್ ಆರಂಭಿಸಲು ಅನುಮತಿ ನೀಡಬಾರದು. ಒಂದು ವೇಳೆ ನೀಡಿದರೆ, ಅದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತದೆ. ಸಾಮರಸ್ಯಕ್ಕೂ ಧಕ್ಕೆ ಆಗಲಿದೆ ಎಂದು ಅವರು ಹೇಳಿದರು.

ರಾಜಾರಾಂ ಗಾಣಿಗ, ಶೈಲಾ, ದಾದಾಪೀರ್‌, ಹಾಜ್‌ ಸಾಹೇಬ್‌, ಇಸ್ಮಾಯಿಲ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಉಡುಪಿ
‘ಕ್ಷೇತ್ರದ ಅಭಿವೃದ್ಧಿಗಾಗಿ ಜನರು ಮತ ನೀಡಬೇಕು’

ಅಭಿವೃದ್ಧಿ ಕಾರ್ಯಸೂಚಿಯ ಮೇಲೆಯೇ ಈ ಬಾರಿ ಚುನಾವಣೆಯನ್ನು ಎದುರಿಸುತ್ತೇನೆ ಎಂದು ಮಾಜಿ ಶಾಸಕ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್ ಹೇಳಿದರು. ...

22 Apr, 2018

ಉಡುಪಿ
ಉಡುಪಿ: ಜನಾಶೀರ್ವಾದ ಸಮಾವೇಶ ಇಂದು

ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿ 23ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ನಗರದ ಕಲ್ಸಂಕದ ರಾಯಲ್ ಗಾರ್ಡನ್‌ನಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಬೃಹತ್...

22 Apr, 2018
ಕಾರ್ಯಕರ್ತರ ಪಡೆ ಸಜ್ಜುಗೊಳಿಸಿ: ಪ್ರಮೋದ್‌

ಬೈಂದೂರು
ಕಾರ್ಯಕರ್ತರ ಪಡೆ ಸಜ್ಜುಗೊಳಿಸಿ: ಪ್ರಮೋದ್‌

22 Apr, 2018

ಉಡುಪಿ
ಮಂಜೂರಿಯಾದ ಯೋಜನೆ ಪೂರ್ಣ

ಸಮೃದ್ಧ ಕಾಪು ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದೇನೆ, ಮಂಜೂರಾಗಿರುವ ಹಲವಾರು ಯೋಜನೆ ಪೂರ್ಣಗೊಳಿಸುವ ಮೂಲಕ ಗುರಿ ಸಾಧನೆ ಮಾಡಬೇಕಿದೆ ಎಂದು ಕಾಪು ಶಾಸಕ ವಿನಯ ಕುಮಾರ...

21 Apr, 2018

ಕುಂದಾಪುರ
ಶಕ್ತಿ ಪ್ರದರ್ಶನದ ಚಿಂತೆ ನನಗೆ ಇಲ್ಲ

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶುಕ್ರವಾರ ಮಧ್ಯಾಹ್ನ ಇಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ...

21 Apr, 2018